ಬಿಸಿಲಿನ ದಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ತುಂಬಾನೇ ಬೇಡಿಕೆ!

ಇನ್ನೇನು ಬೇಸಿಗೆ ಕಾಲ ಶುರುವಾಗುವುದು, ಈಗಲೇ ಕೆಲವು ಕಡೆ ಸೆಕೆ ಶುರುವಾಗಿದೆ. ಬಿಸಿಲಿನ ದಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ತುಂಬಾನೇ ಬೇಡಿಕೆ, ಕೆಂಪನೆ ನೀರು ತುಂಬಿರುವ ಆ ಹಣ್ಣು ಇತರ ಹಣ್ಣುಗಳಿಗಿಂತ ಬೇಗನೆ ಸೆಳೆಯುವುದು. ಒಂದು ಪೀಸ್‌ ಕಲ್ಲಂಗಡಿ ಹಣ್ಣು ತಿಂದರೆ ಸಾಕು ಬಾಯಾರಿಕೆ ನೀಗುವುದು, ಹೊಟ್ಟೆಯೂ ತುಂಬುವುದು.ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ನಾವು ತಂದು ತಿನ್ನುವ ಎಲ್ಲಾ ಕಲ್ಲಂಗಡಿ ಹಣ್ಣುಗಳೆಲ್ಲಾ ಆರೋಗ್ಯಕ್ಕೆ ಒಳ್ಳೆಯದಾ? ಖಂಡಿತ ಅಲ್ಲ…ನಾವು ಆರೋಗ್ಯಕ್ಕೆ ಒಳ್ಳೆಯದು ಎಂದು ತಂದು ತಿನ್ನುವ ಆ ಹಣ್ಣಿನಿಂದಲೇ ಕ್ಯಾನ್ಸರ್‌ ಮತ್ತಿತರ ರೋಗ ಬರಬಹುದು. ಹೌದು ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲಾ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗುತ್ತಿಲ್ಲ, ಕೆಲವೊಂದು ಹಣ್ಣುಗಳನ್ನು ರಾಸಾಯನಿಕ ಹಾಕಿ ಹಣ್ಣು ಮಾಡಲಾಗುವುದು. ಅವುಗಳನ್ನು ತಿಂದರೆ ರೋಗ ಬರುವುದು.ಕಲ್ಲಂಗಡಿ ಹಣ್ಣು ಕೆಂಪಾಗಿ ಕಾಣಬೇಕು, ಬೇಗನೆ ಹಣ್ಣಾಗಬೇಕು ಎಂಬ ಕಾರಣಕ್ಕೆ ನೈಟ್ರೇಟ್, ಕೃತಕ ಬಣ್ಣ ಬಳಸಲಾಗುವುದು. ಕಲ್ಲಂಗಡಿ ಬೇಗನೆ ಹಣ್ಣಾಗಲು ನೈಟ್ರೇಟ್ ಬಳಸಲಾಗುವುದು, ಇದು ದೇಹವನ್ನು ಸೇರಿದಾಗ ಆರೋಗ್ಯ ಹಾಳು ಮಾಡುವುದು. ಕ್ರೋಮೇಟ್, ಮೆಥನಾಲ್‌ ಯೆಲ್ಲೋ ಮುಂತಾದವು ಬಳಸಿ ಕಲ್ಲಂಗಡಿ ಹಣ್ಣು ತುಂಬಾ ಕಲರ್‌ಫುಲ್‌ ಆಗಿ ಕಾಣುವುದು, ಆದರೆ ಇವುಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಬರುವುದು.ಕಲ್ಲಂಗಡಿ ಹಣ್ಣಿನ ಮೇಲೆ ಬಿಳಿ ಅಥವಾ ಹಳದಿ ಪೌಡರ್‌ ಇದ್ದರೆ ಅದಕ್ಕೆ ರಾಸಾಯನಿಕ ಹಾಕಲಾಗಿದೆ ಎಂದು ಹೇಳಬಹುದು. ಬೇಗ ಹಣ್ಣಾಗಲು ರಾಸಾಯನಿಕಗಳನ್ನು ಹಾಕಲಾಗಿರುತ್ತೆ, ಈ ಕಾರ್ಬೈಡ್‌ಗಳನ್ನು ಮಾವಿನಕಾಯಿ ಹಾಗೂ ಬಾಳೆಕಾಯಿ ಹಣ್ಣು ಮಾಡಲು ಬಳಸುತ್ತಾರೆ. ಈ ರೀತಿ ಹುಡಿ ಇರುವ ಕಲ್ಲಂಗಡಿ ಹಣ್ಣನ್ನು ಖರೀದಿಸಬೇಡಿ.ಕಲ್ಲಂಗಡಿ ತಿಂದರೆ ರಕ್ತ ಹೆಚ್ಚುವುದು ಆದರೆ ವಿಷ ಹಾಕಿರುವ ಕಲ್ಲಂಗಡಿ ತಿನ್ನುವುದರಿಂದ ದೇಹದಲ್ಲಿ ರಕ್ತ ಕಡಿಮೆಯಾಗುವುದು, ಮೆದುಳಿಗೆ ಹಾನಿಯುಂಟು ಮಾಡುವುದು, ಕುರುಡುತನ ಉಂಟಾಗುವುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

SHOCKING NEWS: ನಿಷೇಧಕ್ಕೊಳಗಾದರೂ ಹೊಸ ಅವತಾರದಲ್ಲಿ ಕಾರ್ಯ ಚಟುವಟಿಕೆ ಮುಂದುವರೆಸಿದ ಚೀನಾ ಆಪ್‍ಗಳು..

Thu Feb 17 , 2022
ನವದೆಹಲಿ: ದೇಶದ ಭದ್ರತೆ ದೃಷ್ಟಿಯಿಂದ ಕೇಂದ್ರ ಸರಕಾರವು ಹಲವಾರು ಚೀನಾ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಆದರೂ ಕೂಡ ಈ ನಿಷೇಧಿತ ಆಪ್ ಗಳು ಹೊಸ ಅವತಾರದಲ್ಲಿ ಭಾರತದಲ್ಲಿ ಕಾರ್ಯ ನಿರ್ವಹಿಸುವುದನ್ನು ಮುಂದುವರೆಸಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.   ಟಿಕ್‌ಟಾಕ್, ಶೇರಿಟ್, ವೀಚಾಟ್, ಹೆಲೋ, ಲೈಕೀ, ಯುಸಿಯಂತಹ ಜನಪ್ರಿಯವಾದ ಆಪ್ ಗಳನ್ನು ಒಳಗೊಂಡಂತೆ ಸರ್ಕಾರವು ಸುಮಾರು 224 ಅಪ್ಲಿಕೇಶನ್‌ಗಳನ್ನು ಈ ಹಿಂದೆ ಸ್ಥಗಿತಗೊಳಿಸಿತ್ತು. ಇದರಲ್ಲಿ 54 ಚೀನೀ ಅಪ್ಲಿಕೇಶನ್‌ಗಳು ಮತ್ತೆ ಹೊಸ ಗೆಟಪ್ […]

Advertisement

Wordpress Social Share Plugin powered by Ultimatelysocial