ಅಧಿಕ ತೂಕವು ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ.

ಅನೇಕ ಜನರು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ವ್ಯಾಯಾಮ ಮಾಡುತ್ತಾರೆ. ಆದರೆ ಕೆಲವರು ಎಷ್ಟೇ ವ್ಯಾಯಾಮ ಮಾಡಿದ್ರು ಸಣ್ಣ ಆಗೋದಿಲ್ಲ ಅಂತಹವರಿಗಾಗಿಯೇ ಈ ಸಲಹೆಗಳು.

ದೇಹದಲ್ಲಿ ಸಂಗ್ರಹವಾದ ಕ್ಯಾಲೋರಿಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಫಲಿತಾಂಶ ಬರಲು ಹಲವು ದಿನ ಕಾಯಬೇಕು. ಆದಾಗ್ಯೂ ನಿಜವಾದ ವ್ಯಾಯಾಮವನ್ನು ಮಾಡದೆ ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ತೂಕ ಇಳಿಸಬಹುದು. ಇನ್ನು ತೂಕ ನಿರ್ವಹಣೆಗಾಗಿ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ತಜ್ಞರೇ ಸೂಚಿಸುತ್ತಾರೆ.

ಸೇವಿಸುವ ಆಹಾರವು ಕಡಿಮೆಯಾದಾಗ ಮತ್ತು ನಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಹೆಚ್ಚಾದಾಗ ದೇಹವು ಕಾರ್ಬೋಹೈಡ್ರೇಟ್​​ಗಳಿಂದ ಗ್ಲೂಕೋಸ್​ಗೆ ಬದಲಾಗಿ ಸಂಗ್ರಹವಾಗಿರುವ ಕೊಬ್ಬನ್ನು ಸುಡುತ್ತದೆ. ಈ ಕೊಬ್ಬನ್ನು ಕರಗಿಸಿ ಕೊಬ್ಬಿನಾಮ್ಲಗಳಾಗಿ ಪರಿವರ್ತಿಸಲಾಗುತ್ತದೆ. ಅದರಿಂದ ದೇಹವು ಶಕ್ತಿಯನ್ನು ಪಡೆಯುತ್ತದೆ.

ಸರಿಯಾದ ಕ್ರಮದಲ್ಲಿ ಉಪವಾಸ ಮಾಡಿದ್ರೆ ಕೊಬ್ಬನ್ನು ಸುಲಭವಾಗಿ ಕರಗಿಸಬಹುದಾಗಿದೆ. ಉಪವಾಸವೆಂದರೆ ಏನು ತಿನ್ನಲೇಬಾರದು ಎಂದಿಲ್ಲ. ದೇಹಕ್ಕೆ ಅಗತ್ಯವಾಗ ಪೌಷ್ಠಿಕ ಆಹಾರ ಸೇವನೆಯಾಗಿದೆ. ಅಲ್ಪ ಪ್ರಮಾಣದ ಆಹಾರ ಅಥವಾ ಉಪವಾಸದಿಂದ ಮಾತ್ರ ನಮ್ಮ ದೇಹವು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್​ಗಳ ಬದಲಿಗೆ ಕೊಬ್ಬನ್ನು ಕರಗಿಸುತ್ತದೆ. ಅಂದರೆ, ನಮ್ಮ ದೇಹವು ಶಕ್ತಿಯ ಅಗತ್ಯಗಳಿಗಾಗಿ ಕೊಬ್ಬಿನ ಮೂಲಕ ಶಕ್ತಿಯನ್ನು ಉತ್ಪಾದಿಸಲು ಬಯಸಿದರೆ ನಾವು ಕಡಿಮೆ ಆಹಾರವನ್ನು ಸೇವಿಸಬೇಕು.

ತೂಕ ಇಳಿಕೆಯ ನಂತರ ಆಯಾಸ ಮತ್ತು ನಿರಂತರ ಸುಸ್ತು ಇರುತ್ತದೆ. ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ತೂಕ ಇಳಿಸಲು ಸೂಕ್ತ ಕ್ರಮಗಳನ್ನು ಮಾತ್ರ ಅನುಸರಿಸಿದರೆ ಉತ್ತಮವಾಗಿರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚೀನಾದಲ್ಲಿ 4 ವರ್ಷದ ಬಾಲಕನಿಗೆ ಹಕ್ಕಿ ಜ್ವರ ದೃಢ;

Wed Apr 27 , 2022
ಬೀಜಿಂಗ್: ಚೀನಾದಲ್ಲಿ ಹಕ್ಕಿ ಜ್ವರ (ಏವಿಯನ್‌ ಫ್ಲೂ) ಎಚ್‌3ಎನ್‌8 ಮನುಷ್ಯರಿಗೆ ಹರಡಿದ ಮೊದಲ ಪ್ರಕರಣ ದೃಢಗೊಂಡಿದೆ. ಆದರೆ ಈ ಸೋಂಕು ಜನರಲ್ಲಿ ವ್ಯಾಪಕವಾಗಿ ಹರಡುವ ಸಾಧ್ಯತೆ ಕಡಿಮೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಮಧ್ಯ ಹೇನನ್‌ ಪ್ರಾಂತ್ಯದ ನಿವಾಸಿಯಾಗಿರುವ ನಾಲ್ಕು ವರ್ಷದ ಬಾಲಕನೊಬ್ಬನಿಗೆ ಈ ಸೋಂಕು ದೃಢಪಟ್ಟಿದೆ. ಬಾಲಕನನ್ನು ಕೆಲ ದಿನಗಳ ಹಿಂದೆ ಜ್ವರ ಮತ್ತಿತರ ಗುಣಲಕ್ಷಣಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕನ ಮನೆಯಲ್ಲಿ ಕೋಳಿ ಸಾಕಣೆ ನಡೆಸಲಾಗುತ್ತಿದೆ ಹಾಗೂ ಆತ […]

Advertisement

Wordpress Social Share Plugin powered by Ultimatelysocial