ವಾಟ್ಸಪ್‌ನಲ್ಲಿ ರೆಡ್ ಹಾರ್ಟ್ ಕಳುಹಿಸಿದ್ರೆ ಜೈಲು ಶಿಕ್ಷೆ ಜೊತೆ 20 ಲಕ್ಷ ದಂಡ..?

 

 

 

ಇಂದಿನ ಯುವ ಪೀಳಿಗೆ ಎದ್ರೂ ಬಿದ್ರೂ ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಆಯಪ್‌ಗಳನ್ನ ನೋಡ್ತಾನೇ ಇರ್ತಾರೆ. ಇದಕ್ಕೆಲ್ಲ ಯುವ ಪೀಳಿಗೆ ಎಷ್ಟು ಅವಲಂಬಿತವಾಗಿದೆ ಅಂದ್ರೆ, 10 ನಿಮಿಷ ಮೊಬೈಲ್ ನೋಡಿಲ್ಲಾ ಅಂದ್ರೆ ಮನಸ್ಸಿಗೆ ಸಮಾಧಾನಾನೇ ಆಗಲ್ಲ ಅನ್ನೋ ರೀತಿಯಿದೆ.ಮೊಬೈಲ್ ಕಳೆದು ಹೋಗೋದು ಒಂದೇ ಜೀವ ಹೋಗೋದು ಒಂದೇ ಅನ್ನೋ ಹಾಗಿದೆ ಇಂದಿನ ಯುವ ಪೀಳಿಗೆ ಪರಿಸ್ಥಿತಿ.ಇಂಥ ಸಮಯದಲ್ಲಿ ನಾವು ಪ್ರತಿ ದಿನ ವಾಟ್ಸಪ್‌ನಲ್ಲಿ ಚಾಟ್ ಮಾಡಿ ಮಾಡಿ, ಅದಕ್ಕೆ ಒಗ್ಗಿ ಹೋಗಿರ್ತೀವಿ. ಟಕ ಟಕ ಅಂತಾ ಟೈಪಿಂಗ್ ಮಾಡೋದನ್ನ ಕಲ್ತೀರ್ತೀವಿ. ಟೈಪಿಂಗ್ ಮಧ್ಯ ಎಮೋಜಿಗಳನ್ನ ಕೂಡ ಬಳಸ್ತೀವಿ. ಆದ್ರೆ ನೀವೇನಾದ್ರೂ ಈ ದೇಶದಲ್ಲಿ ರೆಡ್ ಹಾರ್ಟ್ ಎಮೋಜಿ ಯ್ಯೂಸ್ ಮಾಡಿದ್ರೆ, ಜೈಲು ಶಿಕ್ಷೆ ಗ್ಯಾರಂಟಿ. ಯಾಕಂದ್ರೆ ಇಲ್ಲಿನ ಕಾನೂನಿನ ಪ್ರಕಾರ, ರೆಡ್ ಹಾರ್ಟ್ ಕಳಿಸೋದು, ಕಿರುಕುಳ ನೀಡಿದಂತೆ ಅಂತಾ ಹೇಳಲಾಗಿದೆ. ಹಾಗಾಗಿ ರೆಡ್ ಹಾರ್ಟ್ ಕಳುಹಿಸಿದ್ದಲ್ಲಿ, ಆ ಬಗ್ಗೆ ತಮಗೆ ಕಂಪ್ಲೇಂಟ್ ಬಂದಲ್ಲಿ, ಅಂಥವರಿಗೆ 5 ವರ್ಷ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗಿದೆ.ಅಲ್ಲದೇ 20 ಲಕ್ಷ ರೂಪಾಯಿ ದಂಡ ಕೂಡಾ ಕಟ್ಟಬೇಕಾಗುತ್ತದೆ. ಯಾವುದು ಆ ದೇಶ ಅನ್ನೋ ಪ್ರಶ್ನೆಗೆ ಉತ್ತರ, ಸೌದಿ ಅರೇಬಿಯಾ. ಇನ್ನು ಇದು ಯಾವಾಗ ಸಾಧ್ಯ ಅಂತಾ ಹೇಳಿದ್ರೆ, ನೀವು ಯಾರಿಗೆ ರೆಡ್ ಹಾರ್ಟ್ ಕಳುಹಿಸಿರ್ತೀರೋ, ಅವರು ನಿಮ್ಮ ವಿರುದ್ಧ ದೂರು ದಾಖಲಿಸಿದಲ್ಲಿ ಮಾತ್ರ. ಹಾಗಾಗಿ ನಂಬಿಕಸ್ಥರಿಗೆ, ಪ್ರೀತಿ ಪಾತ್ರರಿಗಷ್ಟೇ ರೆಡ್ ಹಾರ್ಟ್ ಎಮೋಜಿ ಕಳುಹಿಸಬಹುದು.ಸೌದಿ ಅರೇಬಿಯಾದಲ್ಲಿ ಸೋಶಿಯಲ್ ಮೀಡಿಯಾ ಬಳಸುವವರಿಗೆ ಹಲವು ನೀತಿ ನಿಯಮಗಳಿದೆ. ಅಂಥ ನಿಯಮಗಳಲ್ಲಿ ಇದೂ ಕೂಡಾ ಒಂದು. ಅಲ್ಲದೇ ಹೆಣ್ಣಿನ ಮೇಲೆ ಶೋಷಣೆ ಮಾಡಿದರೆ, ಆ ವಿರುದ್ಧ ಆಕೆ ಕಂಪ್ಲೇಂಟ್ ಕೊಟ್ಟರೆ, ಅವರಿಗೆ ಕ್ರೂರ ಶಿಕ್ಷೆ ವಿಧಿಸಲಾಗತ್ತೆ. ಅದರಲ್ಲೂ ಸಾಕ್ಷಿ ಸಿಕ್ಕರೆ, ಅಪರಾಧಿಗೆ ಶಿಕ್ಷೆ ಗ್ಯಾರಂಟಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ವಿದ್ಯಾರ್ಥಿಗಳು, ಪ್ರಜೆಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸಲಹೆ!

Mon Feb 21 , 2022
ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳು ಮತ್ತು ಅಲ್ಲಿ ಉಳಿಯುವುದು ಅನಿವಾರ್ಯವಲ್ಲ ಎಂದು ಪರಿಗಣಿಸಲ್ಪಟ್ಟಿರುವ ಭಾರತೀಯ ಪ್ರಜೆಗಳಿಗೆ ಅಲ್ಲಿನ ಉದ್ವಿಗ್ನತೆ ಮತ್ತು ಅನಿಶ್ಚಿತತೆಯ ದೃಷ್ಟಿಯಿಂದ ಪೂರ್ವ ಯುರೋಪಿಯನ್ ದೇಶವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಭಾನುವಾರ ಸೂಚಿಸಲಾಗಿದೆ. “ಉಕ್ರೇನ್‌ನಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಮುಂದುವರಿದ ಹೆಚ್ಚಿನ ಮಟ್ಟದ ಉದ್ವಿಗ್ನತೆ ಮತ್ತು ಅನಿಶ್ಚಿತತೆಯ ದೃಷ್ಟಿಯಿಂದ ಎಲ್ಲಾ ಭಾರತೀಯ ಪ್ರಜೆಗಳು ಉಳಿಯುವುದು ಅನಿವಾರ್ಯವಲ್ಲ ಮತ್ತು ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿದೆ” ಎಂದು ಕ್ಸಿನ್ಹುವಾ ಸುದ್ದಿ […]

Advertisement

Wordpress Social Share Plugin powered by Ultimatelysocial