ಯಾವ ರಾಜ್ಯಕ್ಕೆ ಯಾರು ರಾಜ್ಯಪಾಲರು ?

ಭಾನುವಾರದಂದು ಕೇಂದ್ರ ಸರ್ಕಾರ 12 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಇದರ ಜೊತೆಗೆ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಲಾಗಿದೆ. ನೇಮಕಾತಿಯಾದ ರಾಜ್ಯಪಾಲರ ಪೈಕಿ ಕರ್ನಾಟಕದ ಎಸ್. ಅಬ್ದುಲ್ ನಜೀರ್ ಕೂಡ ಒಬ್ಬರು.

ಯಾವ ರಾಜ್ಯಕ್ಕೆ ಯಾರು ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.

1. ಆಂಧ್ರ ಪ್ರದೇಶ – ಎಸ್ ಅಬ್ದುಲ್ ನಜೀರ್

2. ಮಹಾರಾಷ್ಟ್ರ – ರಮೇಶ್ ಬೈಸ್ – (ಜಾರ್ಖಂಡ್ ನಿಂದ ವರ್ಗ)

3. ಅಸ್ಸಾಂ – ಗುಲಾಬ್ ಚಂದ್ ಕಠಾರಿಯಾ (ರಾಜಸ್ಥಾನ ವಿಧಾನಸಭೆ ಪ್ರತಿಪಕ್ಷ ನಾಯಕ)

4. ಅರುಣಾಚಲ ಪ್ರದೇಶ ಲೆ.ಜ. ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ (ನಿವೃತ್ತ ಸೇನಾಧಿಕಾರಿ)

5. ಸಿಕ್ಕಿಂ – ಲಕ್ಷ್ಮಣ್ ಪ್ರಸಾದ್ ಆಚಾರ್ಯ (ಉತ್ತರ ಪ್ರದೇಶ ಬಿಜೆಪಿ ವಿಧಾನ ಪರಿಷತ್ ಸದಸ್ಯ)

6. ಜಾರ್ಖಂಡ್ – ಸಿ.ಪಿ. ರಾಧಾಕೃಷ್ಣ (ತಮಿಳುನಾಡು – ಕೇಂದ್ರದ ಮಾಜಿ ಕೃಷಿ ಸಚಿವ)

7. ಹಿಮಾಚಲ ಪ್ರದೇಶ – ಶಿವ ಪ್ರತಾಪ್ ಶುಕ್ಲ (ಬಿಜೆಪಿ ರಾಜ್ಯಸಭಾ ಸದಸ್ಯ)

8. ಛತ್ತೀಸ್ ಗಢ – ಬಿಸ್ವಾಸ್ ಭೂಷಣ್ ಹರಿಚಂದನ್ (ಆಂಧ್ರಪ್ರದೇಶದಿಂದ ವರ್ಗ)

9. ಮಣಿಪುರ – ಸುಶ್ರೀ ಅನುಸೂಯ ಉಕೈ (ಛತ್ತೀಸ್ಗಡದಿಂದ ವರ್ಗ)

10. ನಾಗಾಲ್ಯಾಂಡ್ – ಲಾ ಗಣೇಶನ್ (ಮಣಿಪುರದಿಂದ ವರ್ಗ)

11. ಮೇಘಾಲಯ – ಪಾಗು ಚವಾಣ್ (ಬಿಹಾರದಿಂದ ವರ್ಗ)

12. ಬಿಹಾರ – ರಾಜೇಂದ್ರ ವಿಶ್ವನಾಥ್ ಅಲೇಕರ್ (ಹಿಮಾಚಲ ಪ್ರದೇಶದಿಂದ ವರ್ಗ)

13. ಲಡಾಕ್ ಲೆಫ್ಟಿನೆಂಟ್ ಗವರ್ನರ್ – ಬ್ರಿಗೇಡಿಯರ್ ಡಾ. ಎಂ.ಡಿ. ಮಿಶ್ರಾ (ಅರುಣಾಚಲದಿಂದ ವರ್ಗ)

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮೆಟಾ ಚಿಂತನೆ;

Mon Feb 13 , 2023
ಟೆಕ್ ದೈತ್ಯ ಮೆಟಾ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಕಂಪನಿಯು ಅನೇಕ ತಂಡಗಳ ಬಜೆಟ್​ ಅನ್ನು ಅಂತಿಮಗೊಳಿಸಿಲ್ಲ. ಬಜೆಟ್ ಅನ್ನು ಮುಂದೂಡಿಕೆ ಮಾಡಿದ್ದು, ಮತ್ತೊಂದು ಸುತ್ತಿನ ಉದ್ಯೋಗ ಕಡಿತದ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಬ್ರಿಟನ್​ನ ಮಾಧ್ಯಮವೊಂದು ವರದಿ ಮಾಡಿದೆ. ನವದೆಹಲಿ: ಕಳೆದ ವರ್ಷ ಜಾಗತಿಕವಾಗಿ 11,000 ಉದ್ಯೋಗಿಗಳನ್ನು ವಜಾಗೊಳಿಸಿ ಸುದ್ದಿಯಾಗಿದ್ದ ಟೆಕ್ ದೈತ್ಯ ಮೆಟಾ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಫೇಸ್​​ಬುಕ್ ಮಾಲೀಕತ್ವ […]

Advertisement

Wordpress Social Share Plugin powered by Ultimatelysocial