ಮಹಿಳಾ ಕ್ರಿಕೆರ್ಟ್ಸ್‌ಗೂ ಇದೆ ಅಡ್ಡ ಹೆಸರು.

ಕ್ರಿಕೆಟ್ ಅಂದ್ರೆ ಸಾಕು ಪುರುಷರಿಗೆ ಎಂದು ಪ್ರಾಮುಖ್ಯತೆ ನೀಡುವ ಕಾಲ ಇತ್ತು. ಆದರೆ ಈಗ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೂ ಹೆಚ್ಚಿನ ಗೌರವ ಸಿಗುತ್ತಿರುವುದು ನಿಜಕ್ಕೂ ಗಮರ್ನಾಹ ಸಂಗತಿ. ಇನ್ನು ಅದೇ ರೀತಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ತಮ್ಮದೇ ಆದ ಅಡ್ಡಹೆಸರನ್ನು ಹೊಂದಿರುವ ಅನೇಕ ಆಟಗಾರರಿದ್ದಾರೆ.ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಸ್ಮೃತಿ ಮಂಧಾನ ಅವರ ಅಡ್ಡಹೆಸರು ಮ್ಯಾಂಡಿ, ಸ್ಮೃತಿ ಮತ್ತು ಎಸ್ ಎಂ ೧೮. ಎಡಗೈ ಬ್ಯಾಟರ್ ಮಂಧಾನ ಅತ್ಯಂತ ಸುಂದರ ಮಹಿಳಾ ಕ್ರಿಕೆಟ್ ಆಟಗಾರ್ತಿಯರಲ್ಲಿ ಒಬ್ಬರು.ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಹರ್ನಾಮ್ ಎಂದು ಕರೆಯಲಾಗುತ್ತದೆ. ಹರ್ಮನ್‌ಪ್ರೀತ್ ಅವರನ್ನು ತಂಡದ ಸಹ ಆಟಗಾರರು ಅವರ ಅಡ್ಡಹೆಸರಿನಿಂದ ಕರೆಯುತ್ತಾರೆ.
ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಅಡ್ಡ ಹೆಸರು ಮಿಥು. ಮನೆಯಲ್ಲಿ ಮತ್ತು ಸಹ ಆಟಗಾರರು ಈ ಹೆಸರಿನಿಂದ ಕರೆಯುತ್ತಾರಂತೆ.ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ಬೌಲರ್ ಜೂಲನ್ ಗೋಸ್ವಾಮಿ ಅವರನ್ನು ನಾಡಿಯಾ ಎಕ್ಸ್‌ಪ್ರೆಸ್, ಚಕ್ಡಾ ಎಕ್ಸ್‌ಪ್ರೆಸ್ ಮತ್ತು ಬಾಬುಲ್ ಎಂಬ ಅಡ್ಡಹೆಸರುಗಳಿಂದ ಕರೆಯಲಾಗುತ್ತಿತ್ತು.ಇತ್ತೀಚೆಗೆ ತನ್ನ ನಾಯಕತ್ವದಲ್ಲಿ ಭಾರತವನ್ನು ಅಂಡರ್-೧೯ ವಿಶ್ವ ಚಾಂಪಿಯನ್ ಮಾಡಿದ ಶಫಾಲಿ ವರ್ಮಾ ಅವರ ಅಡ್ಡಹೆಸರು ಸಾತ್ವಿಕ್. ಶೆಫಾಲಿ ಅದ್ಭುತ ಬ್ಯಾಟರ್ ಆಗಿದ್ದಾರೆ. ಜೆಮಿಮಾ ರಾಡ್ರಿಗಸ್ ಅವರ ಅಡ್ಡಹೆಸರು ಜೇಮೀ, ಬೇಬಿ ಮತ್ತು ಫೀಬ್ಸ್. ಜೆಮಿಮಾ ಹಲವು ಬಾರಿ ಅದ್ಭುತ ಪ್ರದರ್ಶನದ ಮೂಲಕ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.ಯಾಸ್ತಿಕಾ ಭಾಟಿಯಾ ಅವರ ಅಡ್ಡಹೆಸರು ಯಸ್ತಿ. ಯಾಸ್ತಿಕಾ, ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು ನಿಮ್ಮ ಕುಟುಂಬದ ಸದಸ್ಯ.

Sat Feb 11 , 2023
ದಾವೂದಿ ಬೊಹ್ರಾ ಸಮುದಾಯ ಶಿಕ್ಷಣ, ವ್ಯಾಪಾರ ಮತ್ತು ಉದ್ಯಮಶೀಲತೆ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಾವೂದಿ ಬೋಹ್ರಾಗಳು ಕುಟುಂಬದ ಸದಸ್ಯರಂತೆ ತಮ್ಮನ್ನು ನೋಡುತ್ತಾರೆ .ಯಾವಾಗಲೂ ಬೋಹ್ರಾಗಳ ಪ್ರೀತಿ ಮತ್ತು ವಾತ್ಸಲ್ಯ ಆನಂದಿಸಿದ್ದೇನೆ.”ನಾನು ನಿಮ್ಮ ನಡುವೆ ಇರುವಾಗ ಮುಖ್ಯಮಂತ್ರಿಯೂ ಅಲ್ಲ, ಪ್ರಧಾನಿಯೂ ಅಲ್ಲ. ನಾನು ನಿಮ್ಮ ಕುಟುಂಬದ ಸದಸ್ಯ ಎಂದು ಅವರು ತಿಳಿಸಿದ್ದಾರೆ.ಮುಂಬೈನಲ್ಲಿ ಮರೋಲ್ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು ನನಗೆ ನಾಲ್ಕು ತಲೆಮಾರಿನ […]

Advertisement

Wordpress Social Share Plugin powered by Ultimatelysocial