ತುಂಡು ಭೂಮಿಯಲ್ಲೇ ಸಮಗ್ರ ಬೇಸಾಯ; ವಾರ್ಷಿಕ 5 ಲಕ್ಷ ರೂ. ಆದಾಯ

ಕೃಷಿಯಿಂದ ವಾರ್ಷಿಕ ಆದಾಯ ಮಾತ್ರವಲ್ಲ, ಅರೆ ವಾರ್ಷಿಕ ಲಾಭ, ಮಾಸಿಕ ವರಮಾನದ ಜತೆಗೆ ದಿನದ ಗಳಿಕೆಯ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದು. ಅದೂ ಕೇವಲ ಒಂದೂವರೆ ಎಕರೆ ಭೂಮಿಯಲ್ಲಿ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿಯ ಪ್ರಗತಿಪರ ರೈತ ಎಂ.ಕೆ.ದೇವರಾಜು. ಸಮಗ್ರ ಕೃಷಿ ಮೂಲಕ ಅವರು ಖುಷಿ ಕಂಡುಕೊಂಡಿದ್ದಾರೆ.ಯಾವುದೇ ರಾಸಾಯನಿಕ ಬಳಸದೆ ಕೇವಲ ಸಾವಯವ ಗೊಬ್ಬರ ತಯಾರಿಸಿ ವ್ಯವಸಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಒಂದೂವರೆ ಎಕರೆಯಲ್ಲಿ ಎಲ್ಲ ಖರ್ಚು ಕಳೆದು ವಾರ್ಷಿಕ 5 ಲಕ್ಷ ರೂ. ಆದಾಯ ಗಳಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. 6 ವರ್ಷದ ಹಿಂದೆ ಸಮಗ್ರ ಕೃಷಿಗೆ ಕೈಹಾಕಿದ ಇವರ ಶ್ರಮದ ಬೆವರಿಗೆ ಬೆಲೆ ಸಿಗುತ್ತಿದೆ. ಇನ್ನೆರಡು ವರ್ಷ ಕಳೆದರೆ ಆದಾಯ ದ್ವಿಗುಣವಾಗುವ ವಿಶ್ವಾಸವೂ ಇವರದ್ದಾಗಿದೆ.ಸರ್ಕಾರದ ಸಬ್ಸಿಡಿ ಯೋಜನೆಯಡಿ ಟ್ರಿಲ್ಲರ್​ ಖರೀದಿಸಿದ್ದು, ಈ ಯಂತ್ರದ ಮೂಲಕ ಖುದ್ದು ಭೂಮಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ವರ್ಷಕ್ಕೆ 2&3 ಬಾರಿ ಭೂಮಿ ಉಳುಮೆ ಮಾಡುವುದರಿಂದ ಕಳೆಗಳೆಲ್ಲ ಭೂಮಿ ಪದರದಡಿ ಸೇರಿ ಅಲ್ಲೆ ಕೊಳೆತು ಉತ್ತಮ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಉತ್ತಮ ಸಲು ಪಡೆಯಲು ಸಾಧ್ಯ ಎಂಬುದು ಇವರ ಬಲವಾದ ಅಭಿಪ್ರಾಯವಾಗಿದೆ. ಇದರೊಂದಿಗೆ ಜಮೀನಿನಲ್ಲೇ ಎರೆಹುಳು ಗೊಬ್ಬರ ತಯಾರಿಸುತ್ತಿದ್ದು, ಅದನ್ನು ಭೂಮಿಗೆ ಬಳಸಿಕೊಳ್ಳುತ್ತಿದ್ದಾರೆ.ನರ್ಸರಿಯಿಂದ ಕೈತುಂಬ ಆದಾಯ…ದೇವರಾಜು ಅವರು ಕೇಂದ್ರ ಸರ್ಕಾರದ ಸಂಜೀವಿನಿ ಯೋಜನೆಯೊಂದಿಗೆ ನರ್ಸರಿ ಆರಂಭಿಸಿದ್ದು, ಇದರಿಂದ ವಾರ್ಷಿಕವಾಗಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ರೈತಾಪಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೈತೋಟ ನಿರ್ಮಾಣದತ್ತ ಒಲವು ಮೂಡಿಸಿಕೊಳ್ಳುವಲ್ಲಿ ಈ ನರ್ಸರಿ ಕೃಷಿ ಸಹಕಾರಿಯಾಗಿದೆ. ಶ್ರೀಗಂಧ, ತುರುಬೇವು, ತೇಗ, ಮಹಾಗನಿ ಮತ್ತಿತರ ಅರಣ್ಯ ಕೃಷಿಯನ್ನೂ ಅಳವಡಿಸಿಕೊಂಡಿದ್ದಾರೆ. 10&15 ವರ್ಷದ ಬೆಳೆಯಾಗಿದ್ದು ಕಟಾವಿನ ವೇಳೆ ಲಾಂತರ ರೂ. ಆದಾಯ ಬರಲಿದೆ. ಇದು ಒಂದು ರೀತಿ ಬ್ಯಾಂಕ್​ನಲ್ಲಿ ಸ್​ೇ ಡಿಾಸಿಟ್​ ಇಟ್ಟಂತೆ ಎಂಬುದು ರೈತ ದೇವರಾಜು ಅಭಿಪ್ರಾಯವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷಕ್ಕೆ ದಕ್ಷಿಣ ವಿಭಾಗದಲ್ಲಿ ಬಿಗಿ ಬಂದೋಬಸ್ತ್!

Fri Dec 23 , 2022
ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್ ಹೇಳಿಕೆ 3 ಜನ ಎಸಿಪಿ , 18 ಇನ್ಸ್ಪೆಕ್ಟರ್ , 50 ಸಬ್ ಇನ್ಸ್ ಪೆಕ್ಟರ್ , 1000 ಜನ ಪೊಲೀಸ್ ಸಿಬ್ಬಂಧಿಗಳು , 200 ಜನ ಹೋಂಗಾರ್ಡ್ಸ್ , 100 ಜನ ಸಿವಿಲ್ ಡಿಫೆನ್ಸ್ ನಿಯೋಜನೆ ಪಬ್ ,ರೆಸ್ಟೋರೆಂಟ್ ಗಳಲ್ಲಿ ಸಿಸಿಟಿವಿಗಳನ್ನ ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡಲಾಗಿದೆ. ಹೊಸ ಬೌನ್ಸರ್ ಗಳನ್ನ ಹಾಗು ಕೆಲಸಗಾರನನ್ನ ತೆಗೆದುಕೊಂಡಿದ್ದರೆ ಪೊಲೀಸರ ಬಳಿ ಅವರ ವೆರಿಫಿಕೇಷನ್ ಮಾಡಿಸಬೇಕು […]

Advertisement

Wordpress Social Share Plugin powered by Ultimatelysocial