ಅನ್ನದಾತನಿಗೆ ಗಾಯದ ಮೇಲೆ ಬರೆ.

ಅನ್ನದಾತನಿಗೆ ಗಾಯದ ಮೇಲೆ ಬರೆ.

ಈಗಾಗಲೇ ಅತಿವೃಷ್ಟಿಯಿಂದ ಕಂಗಾಲಾಗಿದ್ದ ರೈತನಿಗೆ ಮತ್ತೊಂದು ಬರ ಸಿಡಿಲು.

ರೈತರ ಕಣ್ಣೀರು ಒರೆಸಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ಗಾಡನಿದ್ರೆಯಲ್ಲಿ.

ರೈತರ ಪಾಲಿಗೆ ಇದ್ದು ಇಲ್ಲದಂತಾದ ಕೃಷಿ ಸಚಿವರು.

ಇದರಿಂದಾಗಿ ದಿಕ್ಕು ತೋಚದಂತಾದ ರೈತಾಪಿ ವರ್ಗ.

ಕಡಲೆ ಬೆಳೆಗೆ ಸಿಡಿ ರೋಗ,

ಶೇ.75ಕ್ಕೂ ಹೆಚ್ಚಿನ ಪ್ರಮಾಣದ ಬೆಳೆಗೆ ರೋಗ.

ಪರಿಹಾರ ನೀಡಲು ರೈತರ ಆಗ್ರಹ.

ಕಡಲೆ ಬೆಳೆಗೆ ಸಿಡಿ (ಬೆಂಕಿ) ರೋಗ ಬಾಧಿಸುತ್ತಿದ್ದು, ಧಾರವಾಡ ಜಿಲ್ಲೆಯ ರೈತರು ಕಂಗಾಲು.

ಕೆಲವು ತಿಂಗಳ ಹಿಂದೆ ಮಳೆ ಬಿಟ್ಟು ಬಿಡದೆ ಸುರಿದ ಪರಿಣಾಮ ಕಡಲೆ ಬಿತ್ತನೆಯಲ್ಲೂ ಸಾಕಷ್ಟು ವಿಳಂಬ.

ಇದೀಗ ಬಿತ್ತನೆ ಮಾಡಿದ ಬೆಳೆಯೂ ಕೈ ಜಾರುತ್ತಿದೆ.

ಧಾರವಾಡ ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಅಣ್ಣಿಗೇರಿ, ಕುಂದಗೋಳ ತಾಲೂಕಗಳ ವ್ಯಾಪ್ತಿಯಲ್ಲಿ ಒಟ್ಟು 1.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ.

ಇದರಲ್ಲಿ ಶೇ. 75ಕ್ಕೂ ಹೆಚ್ಚಿನ ಪ್ರಮಾಣದ ಬೆಳೆಗೆ ಸಿಡಿ ರೋಗ ಬಾಧಿಸುತ್ತಿದೆ.

ಇದರಿಂದ ರೈತ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ.

ಜಿಲ್ಲೆಯಾದ್ಯಂತ ಬೆಳೆದ ಕಡಲೆ ಬೆಳೆಯಲ್ಲಿ ಕೆಲವೆಡೆ ಅರ್ಧಕ್ಕಿಂತ ಹೆಚ್ಚಿನ ಬೆಳೆ ಸಿಡಿ ರೋಗಕ್ಕೆ ತುತ್ತಾಗಿದೆ.

ಇದರಿಂದ ಸಾವಿರಾರು ಖರ್ಚು ಮಾಡಿದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಟ್ರ್ಯಾಕ್ಟರ್ ಬಾಡಿಗೆ, ಕಡಲೆ ಬೀಜ ಮತ್ತು ಗೊಬ್ಬರ, ಎಡೆ ಹೊಡೆಯಲು, ಕಸ ತೆಗೆಯಲು, ಕೀಟನಾಶಕ ಸಿಂಪಡಣೆಗೆ ಹೀಗೆ ಕಡಲೆ ಬೆಳೆಯಲು ಸಾವಿರಾರು ರುಪಾಯಿ ವ್ಯಯಿಸಿದ್ದಾರೆ.

ಆದ್ರೆ ಇದೀಗ ರೋಗ ಬಾಧಿಸಿದ ಪರಿಣಾಮ ಖರ್ಚು ಮಾಡಿದಷ್ಟು ಹಣವೂ ಬರುವ ಲಕ್ಷಣ ಕಾಣುತ್ತಿಲ್ಲ.

ಹೀಗೆ ಆದರೆ ಬದುಕು ನಡೆಸುವುದು ಹೇಗೆ ಎಂಬುದು ರೈತರ ಪ್ರಶ್ನೆ.

ರೋಗದಿಂದ ಬೆಳೆ ಹಾನಿಯಾದ್ರೂ ರೈತರ ಜಮೀನುಗಳಿಗೆ ಭೇಟಿ ನೀಡದ ಕೃಷಿ ಇಲಾಖೆ ಅಧಿಕಾರಿಗಳು.

ವಿಮಾ ಕಂಪನಿಯ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು.

ಜತೆಗೆ ಕೃಷಿ ಇಲಾಖೆ
ಅಧಿಕಾರಿಗಳು ಜಮೀನುಗಳಿಗೆ ಭೇಟಿ ಮಾಡಿ ರೋಗ ಹತೋಟಿಗೆ ಕ್ರಮಕೈಗೊಳ್ಳುವ ಕುರಿತು ಮಾಹಿತಿ ನೀಡಬೇಕು.

ಆದ್ರೆ ಯಾವೊಬ್ಬ ಕೃಷಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಸಿಕೊಂಡಿಲ್ಲ.

ಇದೆ ಕಾರಣಕ್ಕೆ ರೈತರ ಕೆಂಗಣ್ಣಿಗೆ ಗುರಿಯಾದ ಬಸವರಾಜ್ ಬೊಮ್ಮಾಯಿ ಸರ್ಕಾರ.

ತಕ್ಷಣ ಸರ್ಕಾರ ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂಬುದು ರೈತರ ಆಗ್ರಹ.

ಕಡಲೆ ಬಿತ್ತನೆ ವೇಳೆ ನಿರಂತರ ಸುರಿದ ಪರಿಣಾಮ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಬಿತ್ತನೆಗೆ ಹಿನ್ನಡೆಯಾಗಿತ್ತು.

ಆದ್ರೂ ರೈತರು ಬಿತ್ತನೆ ಕೈಗೊಂಡು ಸಮೃದ್ಧ ಬೆಳೆ ಬೆಳೆದಿದ್ದರು.

ಆದರೆ, ಇದೀಗ ರೋಗಬಾಧೆಯಿಂದ ಕೈಗೆ ಬಂದ ತುತ್ತು ಬರದಂತಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಇಲಿಯಾನಾ ಡಿಕ್ರೂಸ್​ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Tue Jan 31 , 2023
ನಟಿ ಇಲಿಯಾನಾ ಡಿಕ್ರೂಸ್​ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial