ಮಾರುಕಟ್ಟೆಗೆ ಎಂಟ್ರಿ ಕೊಡಲು ‘ಶಿಯೋಮಿ 12’ ಮತ್ತು ‘ಶಿಯೋಮಿ 12 ಪ್ರೊ’ ಸಜ್ಜು!

 

ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಶಿಯೋಮಿ ಕಂಪನಿಯು ಭಿನ್ನ ಮಾದರಿಯಲ್ಲಿ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಶಿಯೋಮಿ ರೆಡ್ಮಿ ನೋಟ್ ಫೋನ್‌ಗಳು ಹಾಗೂ ಶಿಯೋಮಿಯ 11 ಸರಣಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡಿವೆ.

ಅವುಗಳ ಮುಂದುವರಿದ ಭಾಗವಾಗಿ ಸಂಸ್ಥೆಯು ಇದೀಗ ನೂತನವಾಗಿ ಶಿಯೋಮಿ 12 ಮತ್ತು ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸಜ್ಜಾಗಿದೆ.

ಹೌದು, ಶಿಯೋಮಿ ಸಂಸ್ಥೆಯು ಹೊಸದಾಗಿ ಶಿಯೋಮಿ 12 ಮತ್ತು ಶಿಯೋಮಿ 12 ಪ್ರೊ ಫೋನ್‌ಗಳನ್ನು ಇದೇ ಡಿಸೆಂಬರ್ 28 ರಂದು ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಬಗ್ಗೆ ಶಿಯೋಮಿ ಸಂಸ್ಥೆಯೇ ಸ್ವತಃ ಈ ಎರಡೂ ಫೋನ್‌ಗಳ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ. ಶಿಯೋಮಿ 12 ಕಾಂಪ್ಯಾಕ್ಟ್‌ ರಚನೆಯನ್ನು ಹೊಂದಿದ್ದು, ಶಿಯೋಮಿ 12 ಪ್ರೊ ದೊಡ್ಡ ಸ್ಕ್ರೀನ್ ರಚನೆ ಹೊಂದಿರುವ ಅಂಶ ಟೀಸರ್ ಚಿತ್ರದಲ್ಲಿ ಕಾಣಬಹುದಾಗಿದೆ.

Weibo ನಲ್ಲಿ ಶಿಯೋಮಿ ಹಂಚಿಕೊಂಡ ಟೀಸರ್ ಚಿತ್ರವು ಶಿಯೋಮಿ 12 ಮತ್ತು ಶಿಯೋಮಿ 12 ಪ್ರೊ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಮುಂಭಾಗವನ್ನು ಮಾತ್ರ ತೋರಿಸುತ್ತದೆ. ಶಿಯೋಮಿ 12 ಫೋನ್ ಚಿಕ್ಕ ಡಿಸ್‌ಪ್ಲೇ ಯೊಂದಿಗೆ ತೋರಿಸಲಾಗಿದೆ. ಪವರ್ ಬಟನ್ ಮತ್ತು ಬಲ ಭಾಗದಲ್ಲಿ ವಾಲ್ಯೂಮ್ ರಾಕರ್ ಇದೆ. ಹಾಗೆಯೇ ಶಿಯೋಮಿ 12 ಫೋನ್ 6.2 ಇಂಚಿನ ಪೂರ್ಣ HD + AMOLED ಡಿಸ್‌ಪ್ಲೇ ಅನ್ನು ಹೊಂದಿದೆ ಎಂದು ಸೂಚಿಸಲಾಗಿದೆ. ಇನ್ನು ಶಿಯೋಮಿ 12 ಪ್ರೊ ಮಾಡೆಲ್‌ ಫೋನ್ ಡಿಸ್‌ಪ್ಲೇ ದೊಡ್ಡದಾಗಿದ್ದು, ಎಡ ಭಾಗದಲ್ಲಿ ಯಾವುದೇ ಬಟನ್ ಆಯ್ಕೆ ಕಾಣಿಸಿಲ್ಲ. ಈ ಫೋನ್ ಮಾದರಿಯು 6.9 ಇಂಚಿನ QHD + AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರುವ ನಿರೀಕ್ಷೆಗಳಿವೆ. ಇದರೊಂದಿಗೆ ಈ ಫೋನ್‌ಗಳ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಹೊಂದಿರಬಹುದು ಎನ್ನಲಾಗಿದೆ.

ಶಿಯೋಮಿ 12 ಮತ್ತು ಶಿಯೋಮಿ 12 ಪ್ರೊ ಈ ಎರಡೂ ಫೋನ್‌ಗಳು ಕ್ವಾಲ್ಕಮ್ ನ ಇತ್ತೀಚಿನ ಸ್ನ್ಯಾಪ್‌ಡ್ರಾಗನ್ 8 ಜೆನ್‌ 1 ಪ್ರೊಸೆಸರ್‌ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಆದರೆ ಶಿಯೋಮಿ 12X ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 870 SoC ನೊಂದಿಗೆ ಬರಬಹುದು. ಶಿಯೋಮಿ 12 ಮತ್ತು ಶಿಯೋಮಿ 12X 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಧ್ಯತೆಗಳಿವೆ. ಆದರೆ ಶಿಯೋಮಿ 12 ಪ್ರೊ ಫೋನ್ 120W ರಾಪಿಡ್ ಚಾರ್ಜಿಂಗ್ ನ ಸೌಲಭ್ಯ ಹೊಂದಿರುವ ಸಾಧ್ಯತೆಗಳು ಇವೆ. ಇನ್ನು ಈ ಎರಡು ಶಿಯೋಮಿ 12 ಮತ್ತು ಶಿಯೋಮಿ 12 ಪ್ರೊ ಫೋನ್‌ಗಳು ಆಂಡ್ರಾಯ್ಡ್‌ 12 ಓಎಸ್‌ ಬೆಂಬಲ ಪಡೆದಿರಲಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

2021ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

Fri Dec 24 , 2021
2021ರಲ್ಲಿ ಭಾರತೀಯ ಇಂಟರ್‌ನೆಟ್ ಬಳಕೆದಾರರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ಎಲೆಕ್ಟ್ರಿಕ್ ಕಾರುಗಳು(Electric Cars) ಮಾಹಿತಿಗೆ ಸಂಬಂಧಿಸಿದಂತೆ ಆಟೋ ಟ್ರೆಂಡಿಂಗ್ ಪಟ್ಟಿಯು ಬಿಡುಗಡೆಗೊಂಡಿದ್ದು, ಟಾಪ್ 10ರ ಪಟ್ಟಿಯಲ್ಲಿ ದೇಶಿಯವಾಗಿ ಉತ್ಪಾದನೆಯಾಗುತ್ತಿರುವ ಇವಿ ಕಾರುಗಳೇ ಮುಂಚೂಣಿಯಲ್ಲಿವೆ. ಇಂಧನ ಚಾಲಿತ ವಾಹನಗಳಿಂದಾಗಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಇಂಧನಗಳ ಬೆಲೆ ಏರಿಕೆ ಪರಿಣಾಮ ವಿವಿಧ ರಾಷ್ಟ್ರಗಳು 2030ರಿಂದಲೇ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮಾರಾಟವನ್ನು ಶೇ.50 ರಷ್ಟು ತಗ್ಗಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ […]

Advertisement

Wordpress Social Share Plugin powered by Ultimatelysocial