ಪ್ರೊ. ಎಸ್. ಬಾಲಚಂದ್ರರಾವ್ ವಿಜ್ಞಾನ ಕ್ಷೇತ್ರದಲ್ಲಿ ಬರಹಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ.

ಪ್ರೊ. ಎಸ್. ಬಾಲಚಂದ್ರರಾವ್ ವಿಜ್ಞಾನ ಕ್ಷೇತ್ರದಲ್ಲಿ ಬರಹಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ.
ಬಾಲಚಂದ್ರರಾವ್ ಅವರು 1944ರ ಡಿಸೆಂಬರ್ 30ರಂದು ಜನಿಸಿದರು. ಮೂಲತಃ ಸಾಗರದವರಾದ ಬಾಲಚಂದ್ರರಾವ್ ಬೆಂಗಳೂರಿನ ಶೇಷಾದ್ರಿಪುರಂ ಹೈಸ್ಕೂಲಿನಲ್ಲಿ ಓದಿದ ನಂತರ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುದೇ ಅಲ್ಲದೆ, ಸೆಂಟ್ರಲ್ ಕಾಲೇಜಿನಿಂದ ಫ್ಲುಯಿಡ್ ಮೆಕಾನಿಕ್ಸ್ ಅಧ್ಯಯನಗಳನ್ನು ಸಾಧಿಸಿದವರು.
ಬಾಲಚಂದ್ರರಾವ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಧ್ಯಾಪಕರಾಗಿ, ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ಹಾಗೂ ಪ್ತಿನ್ಸಿಪಾಲರಾಗಿ ಸೇವೆ ಸಲ್ಲಿಸಿ 2002ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರದಲ್ಲಿ ಭಾರತೀಯ ವಿದ್ಯಾಭವನದ ಭವಾನ್ಸ್ ಗಾಂಧೀ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಅಧ್ಯಯನ ವಿಭಾಗದ ನಿರ್ದೇಶಕರಾಗಿ ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಪ್ರೊ. ಬಾಲಚಂದ್ರರಾವ್ ಅವರು ಕಳೆದ ಕೆಲವು ದಶಕಗಳಿಂದ ಪ್ರಾಚೀನ ಭಾರತೀಯ ಗಣಿತ ಮತ್ತು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ‘ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡಮಿ’ (INSA) ಆಶ್ರಯದಲ್ಲಿ ಸಂಶೋಧನಾ ಯೋಜನೆಗಳನ್ನು ಕೈಗೊಂಡಿದ್ದಲ್ಲದೆ, ಆ ಸಂಸ್ಥೆಯ ಭಾಗವಾದ ರಾಷ್ಟ್ರೀಯ ಇತಿಹಾಸ ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಳೆದ 2019 ವರ್ಷ ರಾವ್ ಅವರಿಗೆ International Astronomical Union ಸದಸ್ಯತ್ವ ಗೌರವ ಸಂದಿದೆ.
ಭಾರತೀಯ ಖಗೋಳ ಶಾಸ್ತ್ರದ ಮಹತ್ವದ ಸಂಶೋಧಕರಾದ ಬಾಲಚಂದ್ರರಾವ್ ಅವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ 30ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಹಲವಾರು ಸಂಶೋಧನಾ ಪ್ರಬಂಧಗಳನ್ನೂ ಮಂಡಿಸಿರುವ ರಾವ್ ಅವರು ಖಗೋಳಶಾಸ್ತ್ರದ ಅನೇಕ ಪಿಎಚ್.ಡಿ ಪ್ರಬಂಧಕಾರರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.
ಡಾ. ಬಾಲಚಂದ್ರರಾವ್ ಅವರ ಕನ್ನಡ ಕೃತಿಗಳಲ್ಲಿ ಆರ್ಯಭಟ; ಗಣಿತಶಾಸ್ತ್ರದ ಪ್ರವರ್ತಕರು ಮತ್ತು ಸ್ವಾರಸ್ಯಗಳು; ವೇದಾಂಗ ಜ್ಯೋತಿಷ – ಲಗಧ ಮಹರ್ಷಿಯ ಖಗೋಳವಿಜ್ಞಾನ; ಭಾರತೀಯ ಖಗೋಳವಿಜ್ಞಾನದಲ್ಲಿ ಗ್ರಹಣಗಳು; ಗ್ರಹಗಣಿತ (ಗಣೇಶದೈವಜ್ಞನ ‘ಗ್ರಹಲಾಘವಮ್’); ಸಂಪ್ರದಾಯ ವಿಜ್ಞಾನ ಮತ್ತು ಸಮಾಜ; ಫಲಜ್ಯೋತಿಷ-ನಂಬುವಿರಾ; ವೇದಿಕ್ ಮ್ಯಾಥಮೆಟಿಕ್ಸ್ ಮತ್ತು ವೇದಗಳಲ್ಲಿ ವಿಜ್ಞಾನ; ಭಾಸ್ಕರಾಚಾರ್ಯ ವಿರಚಿತ ಲೀಲಾವತಿ – 108 ಆಯ್ದ ಲೆಕ್ಕಗಳು; ಆರ್ಯಭಟ ವಿರಚಿತ ಆರ್ಯಭಟೀಯಮ್; ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ; ಭಾರತದಲ್ಲಿ ಸಂಖ್ಯಾಪದ್ಧತಿ ಮತ್ತು ರೇಖಾಗಣಿತ; ಮಾಯಾಚೌಕಗಳ ರಹಸ್ಯ; ಭಾರತದ ಪ್ರಸಿದ್ಧ ಗಣಿತಜ್ಞರು ಮುಂತಾದವು ಸೇರಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಚಿತ್ರಾ ಹೆಗಡೆ ನಮ್ಮ ನಡುವಿನ ಬರಹಗಾರ್ತಿ

Sun Jan 1 , 2023
ಡಿಸೆಂಬರ್ 30 ಸುಚಿತ್ರಾ ಹೆಗಡೆ ಅವರ ಜನ್ಮದಿನ. ಅವರು ಉತ್ತರ ಕನ್ನಡ ಜಿಲ್ಲೆಯ, ಕುಮಟಾದ, ಕತಗಾಲ ಗ್ರಾಮದವರು. ತಾಯಿ ಶಾರದಾ ಭಟ್. ತಂದೆ ಪಿ.ಆರ್ ಭಟ್ಟರು ಹೈಸ್ಕೂಲು ಉಪಾಧ್ಯಾಯರಾಗಿದ್ದರು. ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಶ್ರೇಷ್ಠ ದರ್ಜೆಯಲ್ಲಿ ಪದವಿ ಪಡೆದ ಸುಚಿತ್ರಾ ಕಮಲಾ ಬಾಳಿಗಾ ಕಾಲೇಜಿನಿಂದ ರ್‍ಯಾಂಕ್ ಸಾಧನೆಯೊಂದಿಗೆ ಬಿಎಡ್ ಪದವಿ ಪಡೆದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಮತ್ತೊಂದು ರ್‍ಯಾಂಕ್ ಕಿರೀಟದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. […]

Advertisement

Wordpress Social Share Plugin powered by Ultimatelysocial