ಶಾಲಾ ಕೊಠಡಿಗಳಲ್ಲಿ ಕುಡುಕರ ಹಾವಳಿ!

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ವಿದ್ಯಾ ಚೇತನ ಶಾಲಾ ಆವರಣದಲ್ಲಿನ ಶಾಲೆ ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ ಘಟನೆ.ಕುಡುಕರ ಗುಂಪು ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆದಿರುವದು.ಶಾಲಾ ಕೊಠಡಿಗಳಲ್ಲಿ ಬಿದ್ದಿರುವ ಬೀಡಿ, ಸಿಗರೇಟು ತ್ಯಾಜ್ಯಗಳನ್ನು ಎಸೆದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಭಯ ಉಂಟಾಗುತ್ತಿದೆ.ಇಗಷ್ಟೇ ಉದ್ಘಾಟನೆಯಾದ ಮೌಲಾನಾ ಆಜಾದ ಮಾದರಿ ಶಾಲೆಯ ಕೊಠಡಿಗಳು.ಈ ಶಾಲೆಯ ಹಿಂಭಾಗದಲ್ಲಿ ಯಾವುದು ಕಂಪೌಂಡ ಇಲ್ಲಾ.ಇದೆ ದಾರಿಯಿಂದ ಬಂದು ದುಷ್ಕೃತ್ಯ ಮಾಡಿದ್ದ ದುಷ್ಕರ್ಮಿಗಳು.ದ್ವಾರದ ಚಿಲಕ ಮುರಿದು ಕೊಠಡಿ ಒಳಗೆ ನುಗ್ಗಿ ಕೆಳಗಡೆ ತಟ್ಟಿನ ಚೀಲವನ್ನು ಹಾಸಿ ಸಾರಾಯಿ ಕುಡಿದು ಮತ್ತು ಸೆಗರೇಟ್ ಸೇವನೆ ಮಾಡಿ ಕಿಟಕಿಯ ಕಾಜಿನ ಗ್ಲಾಸಗಳು ಒಡೆದ ಘಟನೆ ನಡದಿದೆ.ಕುಡಿದ ಮತ್ತಿನಲ್ಲಿ ಶಾಲೆಯ ಆವರಣದಲ್ಲಿ ಖಾಲಿಯಾದ ಸಾರಾಯಿ ಬಾಟಲಿಗಳನ್ನು ಒಡೆದು ಹಾಕುವುದು ಮಾಮೂಲಾಗಿದ್ದು ಎಲ್ಲೆಂದರಲ್ಲಿ ಗಾಜಿನ ಚೂರುಗಳು ಬಿದ್ದಿರುತ್ತವೆ. ಗೊತ್ತಿಲ್ಲದೆ ಬರುವ ವಿದ್ಯಾರ್ಥಿಗಳು ಗಾಜಿನ ಮೇಲೆ ಕಾಲಿಟ್ಟು ಗಾಯಗೊಂಡ ಘಟನೆಯು ಸಾಕಷ್ಟಿವೆ.ಉತ್ತಮ ಕಟ್ಟಡವೆಂಬ ಪ್ರಶಂಸೆಗೆ ಪಾತ್ರವಾದ ಕೊಠಡಿಗಳುಳ್ಳ ಶಾಲಾ ಕಟ್ಟಡ, ಅಡಿಗೆ ಮನೆ , ಶೌಚಾಲಯವಿದೆ ಆದರೆ ಶಾಲೆ ಹಾಗೂ ಆಟದ ಮೈದಾನಕ್ಕೆ ಕಾಂಪೌಂಡ್ ವ್ಯವಸ್ಥೆ ಇಲ್ಲದಿರುವುದೇ ಇಲ್ಲಿನ ಎಲ್ಲಾ ಅವ್ಯವಸ್ಥೆಗೆ ಮುಖ್ಯ ಕಾರಣವಾಗಿದ್ದು ಕುಡುಕರ ಹಾವಳಿ ಹೇಳತೀರದಾಗಿದೆ.ಈ ಶಾಲಾ ಆವರಣಗಳಲ್ಲಿ ಹಾಗೂ ಕೊಟಡಿಗಳಲ್ಲಿ ಧೂಮಪಾನ ಮಧ್ಯಪಾನ ಹಾಗೂ ಕೊಠಡಿಯ ಕಿಡಿಕಿಗೆ ಗ್ಲಾಸ್ ಹೊಡೆಯುವುದು, ಕರೆಂಟ್ ವೈರಗಳು ಕಿತ್ತಿದ್ದಾರೆ ಈ ರೀತಿಯಾಗಿ ನಡೆಯುತ್ತಿದ್ದು ನಾವು ಉಪಾಧ್ಯಕ್ಷರ ಹಾಗೂ ಮೇಲಾಧಿಕಾರಿಗಳಿಗೆ ಗಮನಕ್ಕೆ ಕಾಂಪೌಂಡ್ ವ್ಯವಸ್ಥೆ ಮಾಡಿಕೊಡಿ ಅಂತ ಅವರ ಗಮನಕ್ಕೆ ನೀಡಿದ್ದೇವೆ ಅವರು ಮಾಡಿಕೊಡುವದಾಗಿ ಭರವಸೆ ನೀಡಿದ್ದಾರೆ ಈ ರೀತಿಯ ಕೃರ್ತ್ಯಗಳು ಹಲವಾರು ದಿನಗಳಿಂದ ನಡೆಯುತ್ತಲೇ ಇವೆ ಎಂದು ಮುಖ್ಯಶಿಕ್ಷಕರಾದ ಹುಡುದಮನಿ ತಿಳಿಸಿದರು.ಈ ಘಟನೆಯ ಬಗ್ಗೆ ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಕ್ರಮ ಜರಗಿಸುತ್ತಾರಾ ಮತ್ತು ಕಂಪೌಂಡ ವ್ಯವಸ್ಥೆ ಮಾಡುತ್ತಾರಾ ಎಂದು ಕಾದುನೋಡಬೇಕಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೆನ್ಸಾರ್ ಅಸ್ತು ಎಂದ ವೈಶಂಪಾಯನ ತೀರ...

Sat Dec 17 , 2022
ಸ್ವರಸಂಗಮ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಆರ್. ಸುರೇಶಬಾಬು ನಿರ್ಮಿಸಿ, ಮಲೆನಾಡ ಸುಪ್ರಸಿದ್ಧ ರಂಗಕರ್ಮಿ ರಮೇಶಬೇಗಾರ್ ನಿರ್ದೇಶಿಸಿರುವ “ವೈಶಂಪಾಯನ ತೀರ…” ಸಿನಿಮಾದ ಸೆನ್ಸಾರ್ ಇತ್ತೀಚಿಗೆ ನಡೆದು ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಎಲ್ಲರೂ ನೋಡಬಹುದಾದ ಸಿನಿಮಾ ಎಂದಿದೆ. ಪ್ರಸಿದ್ಧ ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕತೆಯನ್ನು ಆಧರಿಸಿರುವ ಈ ಸಿನಿಮಾದಲ್ಲಿ ಯಕ್ಷಗಾನದ ಹಿನ್ನೆಲೆಯಲ್ಲಿ ಪ್ರಕೃತಿ ಮತ್ತು ಪುರುಷನ ಸಂಬಂಧವನ್ನು ವಿಭಿನ್ನವಾದ ಕುತೂಹಲಕರ ಧಾಟಿಯಲ್ಲಿ ನಿರೂಪಿಸಲಾಗಿದೆ. ಸಂಪೂರ್ಣವಾಗಿ ಮಲೆನಾಡ ಭಾಷೆ, ಜನಜೀವನ ಮತ್ತು […]

Advertisement

Wordpress Social Share Plugin powered by Ultimatelysocial