ಇಡ್ಲಿ ಸಾಂಬಾರ್, ಬಿಸಿ ಬೇಳೆ ಬಾತ್ ಮಾಡಿದ ಯುಕೆಯ ವ್ಯಕ್ತಿ

ದಕ್ಷಿಣ ಭಾರತೀಯರಿಗೆ ಇಡ್ಲಿ ಸಾಂಬಾರ್ ಹೊಸದೇನೂ ಅಲ್ಲ. ಹಲವರ ಬೆಳಗ್ಗಿನ ಉಪಹಾರದ ಮೊದಲ ಆಯ್ಕೆಯೇ ಇಡ್ಲಿ ಸಾಂಬಾರ್. ಘಮಘಮಿಸುವ ಸಾಂಬಾರ್ ಜತೆಗೆ ಇಡ್ಲಿಯನ್ನು ಸವಿಯುವ ಖುಷಿಯೇ ಅದ್ಭುತ. ಭಾರತದ ಇಡ್ಲಿ ಸಾಂಬಾರ್‌ಗೆ ಮನಸೋಲದವರೇ ಇಲ್ಲ.ಭಾರತೀಯ ಪಾಕ ಪದ್ಧತಿಗೆ ವಿದೇಶಿಗರು ಮನಸೋಲುವುದು ಹೊಸದೇನೂ ಅಲ್ಲ. ಇದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಮೊದಲ ಬಾರಿಗೆ ಭಾರತೀಯ ಖಾದ್ಯಗಳನ್ನು ಸವಿದು ಸಂಭ್ರಮಿಸಿದ ವಿದೇಶಿಗರ ಸಾಕಷ್ಟು ವಿಡಿಯೋಗಳು ನಿಮಗೆ ಇಂಟರ್‌ನೆಟ್‌ನಲ್ಲಿ ಕಾಣಸಿಗುತ್ತವೆ. ಬರೀ ಅಷ್ಟೇ ಅಲ್ಲ, ಕೆಲ ವಿದೇಶಿಗರು ತಾವೇ ಸ್ವತಃ ಭಾರತೀಯ ಶೈಲಿಯ ಅಡುಗೆಗಳನ್ನು ತಯಾರಿಸಿ ಮನಗೆದ್ದಿದ್ದಾರೆ. ಇದಕ್ಕೆ ಸಾಕ್ಷಿ ಈ ವಿಡಿಯೋ. ಇಲ್ಲೊಬ್ಬರು ಯುಕೆಯ ವ್ಯಕ್ತಿ ರವೆ ಇಡ್ಲಿ ಮತ್ತು ಸಾಂಬಾರ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಯುಕೆ ಮೂಲದ ಜೇಕ್ ಡ್ರೈಯಾನ್ ಅವರಿಗೆ ಅಡುಗೆ ಮಾಡುವುದೆಂದರೆ ಬಲು ಇಷ್ಟ. ಅದರಲ್ಲೂ ಭಾರತೀಯ ಶೈಲಿಯ ಅಡುಗೆ ಎಂದರೆ ಇವರಿಗೆ ಅಚ್ಚುಮೆಚ್ಚು. ಈ ಹಿಂದೆ ಕೂಡಾ ಇವರು ಗುಜರಾತ್, ರಾಜಸ್ಥಾನ, ಕರ್ನಾಟಕ ಮತ್ತು ಪಂಜಾಬ್ ಸೇರಿದಂತೆ ಸಾಕಷ್ಟು ರಾಜ್ಯಗಳ ವಿಶೇಷ ಖಾದ್ಯಗಳನ್ನು ತಯಾರಿಸಿದ್ದಾರೆ. ಇದೀಗ ಜೇಕ್ ದಕ್ಷಿಣ ಭಾರತದ ಫೇಮಸ್ ರವೆ ಇಡ್ಲಿಯನ್ನು ತಯಾರಿಸಿದ್ದಾರೆ. ತಾವು ಇಡ್ಲಿ ಮತ್ತು ಸಾಂಬಾರ್ ತಯಾರಿಸಿದ ವಿಧಾನವನ್ನು ಇವರು ರೆಕಾರ್ಡ್ ಮಾಡಿದ್ದು, ಈ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟೀಂ ಇಂಡಿಯಾಗೆ ಬಿಗ್ ಶಾಕ್.

Mon Jan 9 , 2023
  ಕೆಎನ್‌ಎನ್ಡಿಜಿಟಲ್ ಡೆಸ್ಕ್ : ಟೀಂ ಇಂಡಿಯಾಗೆ ಶಾಕ್ ಎದುರಾಗಿದ್ದು, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅದ್ರಂತೆ, ಬುಮ್ರಾ ಫಿಟ್ನೆಸ್ ಕಾರಣದಿಂದಾಗಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಕಳೆದ ವಾರವಷ್ಟೇ ಅವರಿಗೆ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದ್ರೆ, ಸಧ್ಯ ಬಿಸಿಸಿಐ ಅವರೊಂದಿಗೆ ‘ಆತುರ ಪಡಲು’ ಬಯಸುವುದಿಲ್ಲ, ಈ ಕಾರಣದಿಂದಾಗಿ ಅವರನ್ನ ಸರಣಿಯಿಂದ ಹೊರಗಿಡಲಾಗಿದೆ […]

Advertisement

Wordpress Social Share Plugin powered by Ultimatelysocial