ಮೆಕ್ಯಾನಿಕ್ ಮಗಳನ್ನ ವರಿಸಲು ಭಾರತಕ್ಕೆ ಬಂದ ಆಸ್ಟ್ರೇಲಿಯ ವ್ಯಕ್ತಿ

 

ಈ ಪ್ರೀತಿಯೇ ಹೀಗೆ ನೋಡಿ.. ಯಾರ ಜೊತೆ? ಯಾವಾಗ? ಎಲ್ಲಿ? ಆಗುತ್ತೆ ಅಂತ ಊಹೆ ಸಹ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರೀತಿ ಒಮ್ಮೆ ಆದರೆ ಸಾಕು, ಆಗ ಪ್ರೀತಿಯಲ್ಲಿರುವವರು ಎಂತಹ ತ್ಯಾಗಕ್ಕೂ ಸಹ ಸಿದ್ದರಾಗಿರುತ್ತಾರೆ ಅಂತ ಹೇಳಿದರೆ ಸುಳ್ಳಲ್ಲ. ನಾವು ಈಗಾಗಲೇ ಎಷ್ಟೋ ಪ್ರೀತಿಯ ಕಥೆಗಳಲ್ಲಿ ವಿದೇಶಿ ವ್ಯಕ್ತಿ  ತನ್ನ ಪ್ರೀತಿಯನ್ನು ಹುಡುಕಿಕೊಂಡು ಭಾರತಕ್ಕೆ  ಬಂದಿದ್ದು, ಭಾರತದಲ್ಲಿರುವ ಹುಡುಗಿ ತನ್ನ ಪ್ರೀತಿಯನ್ನು ಅರಿಸಿ ಬೇರೆ ದೇಶಕ್ಕೆ ಹೋಗಿದ್ದ ಅನೇಕ ಪ್ರಸಂಗಗಳನ್ನು ನೋಡಿರುತ್ತೇವೆ. ಪ್ರೀತಿ ನಮ್ಮನ್ನು ಇಷ್ಟ ಪಡುವವರ ಬಳಿಗೆ ನಮ್ಮನ್ನು ಒಳ್ಳೆ ಅಯಸ್ಕಾಂತದ  ರೀತಿಯಲ್ಲಿ ತನ್ನೆಡೆಗೆ ಸೆಳೆದುಕೊಳ್ಳುತ್ತದೆ ಎಂಬುದಕ್ಕೆ ಇಲ್ಲೊಂದು ಜ್ವಲಂತ ಸಾಕ್ಷಿ ಇದೆ ನೋಡಿ.ಇಲ್ಲಿಬ್ಬರು ಪ್ರೇಮಿಗಳು ಇದ್ದಾರೆ ನೋಡಿ, ಅವರಿಗೆ ಈ ‘ದೂರ’ ಅಂತ ಹೇಳುವ ಮಾತು ಬಹುಶಃ ಗೊತ್ತಿರಲಿಕ್ಕಿಲ್ಲ ಅಂತ ಅನ್ನಿಸುತ್ತದೆ. ಆಸ್ಟ್ರೇಲಿಯಾದ ಬ್ರಿಸ್ಬೇನ್ ಮೂಲದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗೆ ಮದುವೆಯಾಗಲು ಮಧ್ಯಪ್ರದೇಶದ ಧಾರ್ ನ ಮನವಾರ್ ಎಂಬ ಸಣ್ಣ ಪಟ್ಟಣಕ್ಕೆ ಬಂದಿಳಿದಿದ್ದಾರೆ.ಇಲ್ಲಿಗೆ ಈ ಪ್ರಿಯಕರ ಬಂದಿಳಿದಿದ್ದು ಅಲ್ಲದೆ, ಡಿಸೆಂಬರ್ 18 ರಂದು ಭಾರತೀಯ ವಿವಾಹ ವಿಧಿವಿಧಾನಗಳ ಪ್ರಕಾರ ತಬಸ್ಸುಮ್ ಹುಸೇನ್ ಅವರನ್ನು ಮದುವೆಯಾಗಿದ್ದಾರೆ.ಇವರಿಬ್ಬರ ನಡುವಿನ ಪ್ರೀತಿಯನ್ನು ನೋಡಿ ಆ ಪಟ್ಟಣದಲ್ಲಿರುವ ಸ್ಥಳೀಯರು ಸಹ ಮದುವೆಯಲ್ಲಿ ತುಂಬಾನೇ ಉತ್ಸಾಹದಿಂದ ಓಡಾಡಿ ಮದುವೆ ಮಾಡಿಸಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ತನ್ನ ವರದಿಯಲ್ಲಿ ತಿಳಿಸಿದೆ.ವಿದೇಶಿ ವರನನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲು ಜನರೆಲ್ಲರೂ ಒಟ್ಟುಗೂಡಿದರು. ಅವರ ಮದುವೆ ಭಾರತದಲ್ಲಿ ನಡೆದಿರಬಹುದು, ಆದರೆ ಆಶ್ ಮತ್ತು ತಬಸ್ಸುಮ್ ಅವರ ಪ್ರೇಮಕಥೆ ಸಾವಿರಾರು ಕಿಲೋಮೀಟರ್ ದೂರದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಮತ್ತೊಂದು ವಿವಾದದ ಸುಳಿಯಲ್ಲಿ ರಶ್ಮಿಕಾ

Thu Dec 29 , 2022
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಕಾಂತಾರ ಸಿನಿಮಾವನ್ನು ನೋಡಿಲ್ಲ ಎಂದು ಹೇಳುವ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದ ರಶ್ಮಿಕಾರನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಬ್ಯಾನ್ ಮಾಡ್ಬೇಕು ಅನ್ನೋ ಮಾತು ಕೇಳಿ ಬಂದಿತ್ತು. ಆ ಬಳಿಕ ಒಂದು ಮೆಟ್ಟಿಲು ಇಳಿದು ಬಂದಿದ್ದ ರಶ್ಮಿಕಾ, ಕಾಂತಾರ ಸಿನಿಮಾ ಬಗ್ಗೆ ಮಾತನಾಡಿ ಟ್ರೋಲ್​ಗೆ ಬ್ರೇಕ್​ ಹಾಕುವ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಸದ್ಯ ಅವರು ದಕ್ಷಿಣ ಭಾರತದ ಸಿನಿಮಾ […]

Advertisement

Wordpress Social Share Plugin powered by Ultimatelysocial