ಕೆ.ಎಲ್.ರಾಹುಲ್ ಸೆಂಚೂರಿ. ಹಲವು ದಾಖಲೆಗಳು ಚಿಂದಿ

ಕೆ.ಎಲ್.ರಾಹುಲ್ ಸೆಂಚೂರಿ. ಹಲವು ದಾಖಲೆಗಳು ಚಿಂದಿ

ಕೆ.ಎಲ್.ರಾಹುಲ್ ಸೆಂಚೂರಿ. ಹಲವು ದಾಖಲೆಗಳು ಚಿಂದಿ .ಟೀಂ ಇಂಡಿಯಾ ಓಪನರ್ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.ಪ್ರೋಟೀಸ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ರಾಹುಲ್ ಸೆಂಚೂರಿ ದಾಖಲಿಸಿದ್ದಾರೆ.219 ಎಸೆತಗಳಲ್ಲಿ ಶತಕ ಸಿಡಿಸಿದ ರಾಹುಲ್ ಇನ್ನಿಂಗ್ಸ್ ನಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಇದೆ.ಬಾಕ್ಸಿಂಗ್ ದಿನದಂದು ಶತಕ ಸಿಡಿಸಿದ ಕೆಎಲ್ ರಾಹುಲ್ ಗೆ ಇದು ಏಳನೇ ಟೆಸ್ಟ್ ಶತಕವಾಗಿದೆ.ವಿದೇಶಿ ನೆಲದಲ್ಲಿ ಇದು ಐದನೇ ಶತಕ. ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಟೆಸ್ಟ್ ಓಪನರ್ ಆಗಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.ಟೀಂ ಇಂಡಿಯಾದ ಟೆಸ್ಟ್ ಓಪನರ್ ಆಗಿ ವಿದೇಶದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ.ಈ ಪಟ್ಟಿಯಲ್ಲಿ 12 ಶತಕಗಳೊಂದಿಗೆ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಅಗ್ರಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.ಮೂರನೇ ಸ್ಥಾನದಲ್ಲಿ ವೀರೇಂದ್ರ ಸೆಹ್ವಾಗ್,ನಾಲ್ಕನೇ ಸ್ಥಾನದಲ್ಲಿ ವಿನೂ ಮಂಕಡ್, ರವಿಶಾಸ್ತ್ರಿ ನಾಲ್ಕನೇ ಸ್ಥಾನದಲ್ಲಿದ್ದಾರೆ.ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಎರಡನೇ ಆರಂಭಿಕ ಆಟಗಾರ ಕೆಎಲ್ ರಾಹುಲ್.ಈ ಹಿಂದೆ 2006-07ರಲ್ಲಿ ಕೇಪ್ ಟೌನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ವಾಸಿಂ ಜಾಫರ್ 116 ರನ್ ಗಳಿಸಿದ್ದರು.ಕೆಎಲ್ ರಾಹುಲ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ನೆಲದಲ್ಲಿ ಪ್ರವಾಸಿ ತಂಡದ ಆರಂಭಿಕರಾಗಿ ಶತಕ ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.ಈ ಹಿಂದೆ ಸಯೀದ್ ಅನ್ವರ್  ಮತ್ತು ಕ್ರಿಸ್ ಗೇಲ್ ಮಾತ್ರ ಈ ಸಾಧನೆ ಮಾಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದ್ವಾರಕಾ ದ್ವೀಪಸಮೂಹದಲ್ಲಿನ ಎರಡು ದ್ವೀಪಗಳ ಮೇಲೆ ಮಾಲೀಕತ್ವವನ್ನು ಹೇಳುವ ಸುನ್ನಿ ವಕ್ಫ್ ಬೋರ್ಡ್ ನ ಅರ್ಜಿಯನ್ನು ತಿರಸ್ಕರಿಸಿದ ಗುಜರಾತಿನ ಉಚ್ಚ ನ್ಯಾಯಾಲಯ !

Mon Dec 27 , 2021
* ಯಾವುದು ಸತ್ಯವಲ್ಲವೋ, ಇತಿಹಾಸದಲ್ಲಿ ಇಲ್ಲವೋ ಅದನ್ನು ಸಹ ಸುನ್ನಿ ವಕ್ಫ್ ಬೋರ್ಡ್ ಈ ರೀತಿಯ ಹೇಳಿಕೆ ನೀಡಿ ನೇರವಾಗಿ ನ್ಯಾಯಾಲಯಕ್ಕೆ ಹೋಗುವ ಧೈರ್ಯವನ್ನು ತೋರಿಸುತ್ತಿದೆ, ಇದನ್ನು ಹಿಂದೂಗಳು ಯಾವಾಗ ಗಮನಿಸುವರು ? ಹಿಂದೂಗಳು ಯಾವಾಗಲಾದರೂ ಕನಸಿನಲ್ಲಾದರೂ ಮೆಕ್ಕಾದ ಮೇಲೆ ಹಕ್ಕು ಚಲಾಯಿಸುವ ಧೈರ್ಯವನ್ನು ಮಾಡಬಹುದೇ ?- ಸಂಪಾದಕರು * ನ್ಯಾಯಾಲಯವು ಇಂತಹ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಅರ್ಜಿಯನ್ನು ದಾಖಲಿಸಿದ ವಕ್ಫ್ ಬೋರ್ಡಿನ ಮೇಲೆ ಕಾರ್ಯಾಚರಣೆಯನ್ನು ಮಾಡಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ […]

Advertisement

Wordpress Social Share Plugin powered by Ultimatelysocial