ಮತ್ತೊಂದು ವಿವಾದದ ಸುಳಿಯಲ್ಲಿ ರಶ್ಮಿಕಾ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಕಾಂತಾರ ಸಿನಿಮಾವನ್ನು ನೋಡಿಲ್ಲ ಎಂದು ಹೇಳುವ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದ ರಶ್ಮಿಕಾರನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಬ್ಯಾನ್ ಮಾಡ್ಬೇಕು ಅನ್ನೋ ಮಾತು ಕೇಳಿ ಬಂದಿತ್ತು. ಆ ಬಳಿಕ ಒಂದು ಮೆಟ್ಟಿಲು ಇಳಿದು ಬಂದಿದ್ದ ರಶ್ಮಿಕಾ, ಕಾಂತಾರ ಸಿನಿಮಾ ಬಗ್ಗೆ ಮಾತನಾಡಿ ಟ್ರೋಲ್​ಗೆ ಬ್ರೇಕ್​ ಹಾಕುವ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಸದ್ಯ ಅವರು ದಕ್ಷಿಣ ಭಾರತದ ಸಿನಿಮಾ ರಂಗದ ಕುರಿತಂತೆ ಮಾಡಿರುವ ಕಾಮೆಂಟ್ಸ್​​, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.ಬಾಲಿವುಡ್​​​ನಲ್ಲಿ ರಶ್ಮಿಕಾ ನಟಿಸಿರುವ ಮಿಷನ್ ಮಜ್ನು ಸಿನಿಮಾ ಜನವರಿಯಲ್ಲಿ ಓಟಿಟಿನಲ್ಲಿ ರಿಲೀಸ್​ ಆಗಲಿದೆ. ಸದ್ಯ ಈ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಬಾಲಿವುಡ್​, ದಕ್ಷಿಣ ಭಾರತದ ಸಿನಿಮಾಗಳ ಹಾಡುಗಳ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.ರೋಮ್ಯಾಂಟಿಕ್ ಹಾಡುಗಳನ್ನು ನಿರ್ಮಾಣ ಮಾಡುವುದರಲ್ಲಿ ಬಾಲಿವುಡ್ ಬೆಸ್ಟ್, ಚಿಕ್ಕಂದಿನಿಂದಲೂ ಈ ಹಾಡುಗಳನ್ನು ನೋಡುತ್ತಲೇ ಬೆಳೆದಿದ್ದೀನಿ ಎಂದ ರಶ್ಮಿಕಾ ಮಂದಣ್ಣ, ದಕ್ಷಿಣದ ಸಿನಿಮಾಗಳಲ್ಲಿ ಎಲ್ಲಾ ನಂಬರ್ ಸಾಂಗ್ಸ್, ಡ್ಯಾನ್ಸ್ ನಂಬರ್, ಐಟಂ ಹಾಡುಗಳೇ ಹೆಚ್ಚಿರುತ್ತವೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷಕ್ಕೆ ಪೊಲೀಸ್ ,ಹೋಂ ಗಾರ್ಡ್ ಜೊತೆ ಸಿವಿಲ್ ಡಿಫೆನ್ಸ್ ಸಾಥ್.

Thu Dec 29 , 2022
ಹೊಸ ವರ್ಷಕ್ಕೆ ಪೊಲೀಸ್ ,ಹೋಂ ಗಾರ್ಡ್ ಜೊತೆ ಸಿವಿಲ್ ಡಿಫೆನ್ಸ್ ಸಾಥ್ ಮೂರು ಡಿವಿಷನ್ ನಲ್ಲಿ 880ಕ್ಕೂ ಹೆಚ್ಚು ಸಿವಿಲ್ ಡಿಫೆನ್ಸ್ ಸಿಬ್ಬಂಧಿ ನೇಮಕ ಕೇಂದ್ರ ವಿಭಾಗಕ್ಕೆ ಅತಿ ಹೆಚ್ಚು ಸಿವಿಲ್ ಡಿಫೆನ್ಸ್ ನಿಯೋಜನೆ ಕೇಂದ್ರ ವಿಭಾಗಕ್ಕೆ 500 ಜನರ ನೇಮಕ ದಕ್ಷಿಣ ವಿಭಾಗಕ್ಕೆ 130 ಜನ ಸಿವಿಲ್ ಡಿಫೆನ್ಸ್ ಸಿಬ್ಬಂಧಿ ನೇಮಕ ಪೂರ್ವ ವಿಭಾಗದಲ್ಲಿ 250 ಜನ ಸಿವಿಲ್ ಡಿಫೆನ್ಸ್ ಸಿಬ್ಬಂಧಿ ಸದ್ಯ ಮೂರು ವಿಭಾಗಗಳಲ್ಲಷ್ಟೇ ಸಿವಿಲ್ ಡಿಫೆನ್ಸ್ […]

Advertisement

Wordpress Social Share Plugin powered by Ultimatelysocial