BCCI:ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಈ ʼಇಬ್ಬರು ಯುವ ಆಟಗಾರರುʼ ಆಯ್ಕೆ;

 ಭಾರತ (IND) ಮತ್ತು ವೆಸ್ಟ್ ಇಂಡೀಸ್ (WI) ನಡುವಿನ ಏಕದಿನ ಸರಣಿಗೆ ಮುನ್ನ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ. ಕೋವಿಡ್ ಪರಿವರ್ತನೆಯನ್ನ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಯುವ ಆಟಗಾರರಾದ ಶಾರುಖ್ ಖಾನ್ ಮತ್ತು ಸಾಯಿ ಕಿಶೋರ್ ಅವರನ್ನ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರರನ್ನಾಗಿ ಸೇರಿಸಲು ನಿರ್ಧರಿಸಿದೆ.

ಈ ಇಬ್ಬರೂ ಆಟಗಾರರು ಟೀಮ್ ಇಂಡಿಯಾದೊಂದಿಗೆ ಬಯೋ ಬಬಲ್‌ನ ಭಾಗವಾಗಲಿದ್ದಾರೆ. ಅಗತ್ಯವಿದ್ದರೆ, ಅವರನ್ನ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಸಬಹುದು. ಇಬ್ಬರೂ ಆಟಗಾರರು ದೇಶಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಯುವ ಬ್ಯಾಟ್ಸ್‌ಮನ್ ಶಾರುಖ್ ಖಾನ್ ಮತ್ತು ಸ್ಪಿನ್ನರ್ ರವಿ ಶ್ರೀನಿವಾಸ್ ಸಾಯಿ ಕಿಶೋರ್ ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ ಆರು ಪಂದ್ಯಗಳ ಸೀಮಿತ ಓವರ್‌ಗಳ ಸರಣಿಗೆ ಮೀಸಲು ಆಟಗಾರರಾಗಿ ಭಾರತೀಯ ತಂಡವನ್ನ ಸೇರಿಕೊಳ್ಳಲಿದ್ದಾರೆ. ಶಾರುಖ್ ಮತ್ತು ಸಾಯಿ ಕಿಶೋರ್ ರಾಷ್ಟ್ರೀಯ ಮಟ್ಟದಲ್ಲಿ ತಮಿಳುನಾಡಿನ ಯಶಸ್ಸಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಕೋವಿಡ್-19 ಸೋಂಕಿನ ಅಪಾಯದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಇಬ್ಬರನ್ನೂ ತಂಡಕ್ಕೆ ಸೇರಿಸಲಾಗಿದೆ. ಪಂದ್ಯಾವಳಿಯ ಸಮಯದಲ್ಲಿ ಮುಖ್ಯ ತಂಡದ ಯಾವುದೇ ಆಟಗಾರನಿಗೆ ಕೋವಿಡ್ ಪಾಸಿಟಿವ್ ಕಂಡುಬಂದ್ರೆ, ಈ ಆಟಗಾರರನ್ನ ತಂಡಕ್ಕೆ ಸೇರಿಸಿಕೊಳ್ಳಬಹುದು. ಇದನ್ನ ದೃಢಪಡಿಸಿದ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಹೌದು, ಶಾರುಖ್ ಮತ್ತು ಸಾಯಿ ಕಿಶೋರ್ ಅವರನ್ನ ವೆಸ್ಟ್ ಇಂಡೀಸ್ ಸರಣಿಗೆ ‘ಸ್ಟ್ಯಾಂಡ್‌ಬೈ’ ಎಂದು ಕರೆಯಲಾಗಿದೆ. ಅವ್ರು ಮುಖ್ಯ ತಂಡದ ಆಟಗಾರರೊಂದಿಗೆ ಜೈವಿಕ-ಬಬಲ್ ಸಹ ಪ್ರವೇಶಿಸುತ್ತಾರೆ.

ಕಳೆದ ವರ್ಷ ಕೋಚ್ ರಾಹುಲ್ ದ್ರಾವಿಡ್ ಅವರ ಮೇಲ್ವಿಚಾರಣೆಯಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತೀಯ ತಂಡದಲ್ಲಿ ಸಾಯಿ ಕಿಶೋರ್ ನೆಟ್ ಬೌಲರ್‌ಗಳ ಗುಂಪಿನ ಭಾಗವಾಗಿದ್ದರು. ಅವ್ರು ಎರಡನೇ ಬಾರಿಗೆ ರಾಷ್ಟ್ರೀಯ ತಂಡದ ಭಾಗವಾಗುತ್ತಿದ್ದಾರೆ. ಶಾರುಖ್ ಕೆಲ ದಿನಗಳಿಂದ ಮುಖ್ಯ ತಂಡದಲ್ಲಿ ಸ್ಥಾನ ಪಡೆಯುವ ರೇಸ್ʼನಲ್ಲಿದ್ದಾರೆ. ಈ ಋತುವಿನಲ್ಲಿ ಕರ್ನಾಟಕ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್‌ನಲ್ಲಿ ಅವರು ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ತಂಡವನ್ನ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದಲ್ಲಿ ಸಾಯಿ ಕಿಶೋರ್ 3 ವಿಕೆಟ್ ಪಡೆದರು.

ODI ಮತ್ತು T20 ಸರಣಿ ಯಾವಾಗ ನಡೆಯಲಿದೆ?
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಫೆಬ್ರವರಿ 6 ರಂದು, ಎರಡನೇ ಏಕದಿನ ಫೆಬ್ರವರಿ 9ರಂದು ಮತ್ತು ಮೂರನೇ ಪಂದ್ಯ ಫೆಬ್ರವರಿ 11 ರಂದು ನಡೆಯಲಿದೆ. ಸರಣಿಯ ಎಲ್ಲಾ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30 ರಿಂದ ನಡೆಯಲಿವೆ. ಇದಾದ ಬಳಿಕ ಮೊದಲ ಟಿ20 ಪಂದ್ಯ ಫೆಬ್ರವರಿ 16ರಂದು ನಡೆಯಲಿದೆ. ಎರಡನೇ ಪಂದ್ಯ ಫೆಬ್ರವರಿ 18 ರಂದು ಮತ್ತು ಮೂರನೇ ಪಂದ್ಯ ಫೆಬ್ರವರಿ 20 ರಂದು ನಡೆಯಲಿದೆ. ಇನ್ನು ಸರಣಿಯ ಎಲ್ಲಾ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

bollywood: ನಿರ್ದೇಶಕರಾಗಿ 13 ವರ್ಷಗಳನ್ನು ಪೂರೈಸಿದ ,ಜೋಯಾ ಅಖ್ತರ್ ;

Sun Jan 30 , 2022
ಬಾಲಿವುಡ್ ನಿರ್ದೇಶಕ ಜೋಯಾ ಅಖ್ತರ್ ಭಾನುವಾರ ನಿರ್ದೇಶಕರಾಗಿ 13 ಯಶಸ್ವಿ ವರ್ಷಗಳನ್ನು ಪೂರೈಸಿದ್ದಾರೆ. ಸಹೋದರ ಮತ್ತು ನಟ ಫರ್ಹಾನ್ ಅಖ್ತರ್ ಮತ್ತು ‘ವೇಕ್ ಅಪ್ ಸಿದ್’ ಖ್ಯಾತಿಯ ಕೊಂಕಣ ಸೇನ್ ಶರ್ಮಾ ಅವರನ್ನು ಒಳಗೊಂಡ “ಲಕ್ ಬೈ ಚೇಂಜ್” ನೊಂದಿಗೆ ಅವರು ತಮ್ಮ ನಿರ್ದೇಶನದ ಚೊಚ್ಚಲ ಪ್ರವೇಶವನ್ನು ಗುರುತಿಸಿದರು. Instagram ಗೆ ತೆಗೆದುಕೊಂಡು, ಜೋಯಾ ತಮ್ಮ ಮೊದಲ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಹ್ಯಾಶ್‌ಟ್ಯಾಗ್‌ಗಳ ಜೊತೆಗೆ “ನನಗೆ 13 […]

Advertisement

Wordpress Social Share Plugin powered by Ultimatelysocial