ಅಹಮದಾಬಾದ್‌ ತಂಡದ ಮೂವರು ಅಪಾಯಕಾರಿ ಆಟಗಾರರು

ನವದೆಹಲಿ : ಐಪಿಎಲ್ 2022ರ (Ipl 2022) ಸೀಸನ್ ಹಿಂದೆಂದಿಗಿಂತಲೂ ಹೆಚ್ಚು ರೋಚಕವಾಗಿರಲಿದೆ. ಈ ಬಾರಿ ಐಪಿಎಲ್ ನಲ್ಲಿ ಹತ್ತು ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಈ ಬಾರಿ ಎರಡು ಹೊಸ ತಂಡಗಳಾದ ಅಹಮದಾಬಾದ್ ಮತ್ತು ಲಕ್ನೋ ಐಪಿಎಲ್‌ ಕಣದಲ್ಲಿವೆ (IPL Team).

ಅಹಮದಾಬಾದ್ ಮೂವರು ಅಪಾಯಕಾರಿ ಆಟಗಾರರನ್ನು ತನ್ನ ತಂಡದಲ್ಲಿ ಸೇರಿಸಿಕೊಂಡಿದೆ.

ಈ ಮೂವರು ಅಪಾಯಕಾರಿ ಆಟಗಾರರನ್ನು ಆಯ್ಕೆ ಮಾಡಿದ ಅಹಮದಾಬಾದ್ :
ಅಹಮದಾಬಾದ್ ಫ್ರಾಂಚೈಸಿಯು (Ahmedabad Franchise) ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ , ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ (Rashid Khan) ಮತ್ತು ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (Shubman Gill) ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್ ತಲಾ 15 ಕೋಟಿ ರೂ., ಶುಭಮನ್ ಗಿಲ್ 7 ಕೋಟಿ ರೂ. ಪಡೆಯಲಿದ್ದಾರೆ .

ಕಳೆದ ಐಪಿಎಲ್ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ 11 ಕೋಟಿ ಪಡೆದರೆ, ರಶೀದ್ ಖಾನ್ 9 ಕೋಟಿ ಸಭಾವನೆ ಪಡೆದಿದ್ದರು. ಈ ಮೂಲಕ ಹಾರ್ದಿಕ್ ಪಾಂಡ್ಯ ಈ ಬಾರಿ 4 ಕೋಟಿ ಲಾಭ ಪಡೆದರೆ ರಶೀದ್ ಖಾನ್ 6 ಕೋಟಿ ಗಳಿಸಿದ್ದಾರೆ. ಐಪಿಎಲ್ 2021ರಲ್ಲಿ ಶುಭಮನ್ ಗಿಲ್ 1.8 ಕೋಟಿ ಗಳಿಸಿದ್ದು, ಈ ಬಾರಿ ಅವರು 7 ಕೋಟಿ ರೂಪಾಯಿ ಪಡೆಯಲಿದ್ದಾರೆ.

ಶತ್ರು ತಂಡಗಳಿಗೆ ಎಚ್ಚರಿಕೆಯ ಗಂಟೆ :
ಅಹಮದಾಬಾದ್ ಫ್ರಾಂಚೈಸ್ (Ahmedabad Franchise) ಮೊದಲು ಇಶಾನ್ ಕಿಶನ್ (Ishan Kishan) ಅವರೊಂದಿಗೆ ಡೀಲ್ ಮಾಡಲು ಬಯಸಿತ್ತು. ಆದರೆ ಮಾತುಕತೆ ಸಫಲವಾಗದ ಕಾರಣ ಅಹಮದಾಬಾದ್ ತಂಡ, ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಈ ಮೂವರು ಅಪಾಯಕಾರಿ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಅಹಮದಾಬಾದ್ ತಂಡ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಶುಭಮನ್ ಗಿಲ್ ಕಳೆದ ಐಪಿಎಲ್ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪರ ಆಡಿದ್ದರು. ಆದರೆ, ತಂಡ ಅವರನ್ನು ಉಳಿಸಿಕೊಂಡಿರಲಿಲ್ಲ. ಅದೇ ಸಮಯದಲ್ಲಿ, ರಶೀದ್ ದೀರ್ಘಕಾಲದವರೆಗೆ ಸನ್ರೈಸರ್ಸ್ ಹೈದರಾಬಾದ್ (SRH) ನ ಭಾಗವಾಗಿದ್ದರು. ಇದಲ್ಲದೇ ಮುಂಬೈ ಇಂಡಿಯನ್ಸ್ (Mumbai Indians) ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರನ್ನೂ ಕೂಡಾ ತಂಡ ಉಳಿಸಿಕೊಂಡಿರಲಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID:ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಬಳಕೆಯಾದ ʼಡೋಲೋ 650ʼ;

Tue Jan 18 , 2022
ಅಂತೂ ಇಂತೂ, ಸಾಂಕ್ರಾಮಿಕ ರೋಗ ಕೊನೆಗೊಂಡಿದೆ ಎಂದು ನೀವು ನಂಬಿದ್ದರೆ, ಅದು ನಿಮ್ಮ ತಪ್ಪು ಕಲ್ಪನೆ. ಕೊರೋನಾ ವೈರಸ್, ಹೊಸ ರೂಪಾಂತರಗಳೊಂದಿಗೆ ಹೊಸ ದಾಖಲೆಗಳನ್ನ ಬರೆಯುತ್ತಲೆ ಇದೆ. ಒಮಿಕ್ರಾನ್ ರೂಪಾಂತರವಂತು ಇಡೀ ವಿಶ್ವವನ್ನೇ ವೈರಸ್ ಮತ್ತೊಂದು ಸುತ್ತು ಹೊಡೆಯುವಂತೆ ಮಾಡಿದೆ. ಭಾರತದಲ್ಲಿ, ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಡೋಲೋ 650 ಔಷಧಕ್ಕೆ ಬೇಡಿಕೆ ಹೆಚ್ಚಿದೆ. ಡೋಲೋ 650 ಒಂದು ಜನಪ್ರಿಯ ನೋವು ನಿವಾರಕವಾಗಿದ್ದು ಅದು ಬಹುತೇಕ ಪ್ರತಿಯೊಂದರಲ್ಲೂ ಕಂಡುಬರುತ್ತದೆ. ನೋವು […]

Advertisement

Wordpress Social Share Plugin powered by Ultimatelysocial