ಮಹಾರಾಷ್ಟ್ರಕ್ಕೆ ಕೊರೊನಾ ಕಂಟಕ.! ಚಿತ್ರಮಂದಿರಕ್ಕೆ 50% ಭರ್ತಿಗೆ ಆದೇಶ

ದೇಶದಲ್ಲಿ ಕ್ರೂರಿ ಕೊರೊನಾ 2ನೇ ಅಲೆಯ ಅರ್ಭಟ ಜೋರಾಗಿದ್ದು ಮಹಾರಾಷ್ಟ್ರ ರಾಜ್ಯವನ್ನು ತನ್ನ ತವರು ಮನೆಯಾಗಿ ಕೊರೊನಾ ಆವರಿಸಿಕೊಂಡಿದೆ. ದೇಶದಲ್ಲಿ ನಿನ್ನೆ ಒಂದೇ ದಿನ ಹೊಸದಾಗಿ 39,726 ಪ್ರಕರಣಗಳು ದಾಖಲಾಗಿದ್ದು, ಭಾರತದಲ್ಲಿ ಕೋವಿಡ್‌ ದಾಳಿಯ ನಂತರ ದಾಖಲಾದ ಅತಿ ಹೆಚ್ಚು ಪ್ರಕರಣ ಇದಾಗಿದೆ. ಇದರ ಬೆನ್ನಲ್ಲೆ ಎಚ್ಚೇತ ಮಹಾರಾಷ್ಟ್ರ ಸರ್ಕಾರ ಖಾಸಗಿ ಕಚೇರಿಗಳು ಮತ್ತು ಚಿತ್ರಮಂದಿರಗಳಿಗೆ ಶೇ.50% ಭರ್ತಿಗೆ ನಿರ್ಬಂಧ ಹೇರಿವೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಾರ್ಚ್ 31 ರವರೆಗೆ ಮಹಾರಾಷ್ಟ್ರದ ಎಲ್ಲಾ ಚಿತ್ರಮಂದಿರಗಳು, ಸಭಾಂಗಣಗಳು ಮತ್ತು ಕಚೇರಿಗಳು ತಮ್ಮ ಸಾಮರ್ಥ್ಯದ ಶೇಕಡಾ 50 ರಷ್ಟು ಭರ್ತಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.

 

 

 

Please follow and like us:

Leave a Reply

Your email address will not be published. Required fields are marked *

Next Post

ಪಂಜಾಬ್ ಪೊಲೀಸರ ಬಲೆಗೆ ಬಿದ್ದ ಡ್ರಗ್ ಪೆಡ್ಲರ್ ಗಳು

Fri Mar 19 , 2021
ಬರೋಬ್ಬರಿ 54 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪಂಜಾಬ್‌ ಲುಧಿಯಾನ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು 15 ಅಂತರರಾಜ್ಯ ಡ್ರಗ್‌ ಪೆಡ್ಲರ್‌ ಗಳು 67 ಲಕ್ಷ ಮಾದಕ ಮಾತ್ರೆಗಳು, ಕ್ಯಾಪ್ಸುಲ್ಗಳು, ಲಸಿಕೆಗಳು ಹಾಗೂ ಸಿರಪ್‌ ಗಳ ಸಾಗಾಟಕ್ಕೆ ಪ್ಲಾನ್‌ ಹಾಕಿದ್ರು. ಆದರೆ ಈ ವೇಳೆ ಖದೀಮರ ಪ್ಲಾನ್‌ ಗೆ ಪಂಜಾಬ್‌ ಪೊಲೀಸರು ತಣ್ಣೀರು ಎರಚಿದ್ದಾರೆ. ಪಂಜಾಬ್‌ ಲುಧಿಯಾನ ಗಡಿ ಭಾಗದಲ್ಲಿ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು 15 […]

Advertisement

Wordpress Social Share Plugin powered by Ultimatelysocial