ಮೊಬೈಲ್ ಮತ್ತು ಡಿಜಿಟಲ್ ಯುಗದಲ್ಲಿ ಯುವ ಜನತೆ ಮುಳುಗಿಹೋಗಿದೆ.

ಡಿಜಿಟಲ್ ಯುಗದಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆಗಳು ನಿರಂತರವಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಚುಂಚನಹಳ್ಳಿ ಗ್ರಾಮದಲ್ಲಿ ವಿಮೋಚನಾ ಯುವಕರ ಸಂಘದಿಂದ ಆಯೋಜನೆ ಮಾಡಲಾಗಿದ್ದ ಬುದ್ಧ ಬಸವ ಅಂಬೇಡ್ಕರ್ ಟೆನ್ನಿಸ್ ಬಾಲ್ ಕ್ರಿಕೆಟ್ ಸೀಸನ್ 3 ಪಂದ್ಯಾವಳಿಗೆ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು.

ಮೊಬೈಲ್ ಮತ್ತು ಡಿಜಿಟಲ್ ಯುಗದಲ್ಲಿ ಯುವ ಜನತೆ ಮುಳುಗಿಹೋಗಿದೆ. ಇಂತಹ ಸಂದರ್ಭದಲ್ಲೂ ಯುವಕರು ಕ್ರೀಡೆಗಳಲ್ಲಿ ತೊಡಗಿರುವುದು ಸಂತಸ ತಂದಿದೆ.
ಕ್ರೀಡೆಗಳಲ್ಲಿ ಯುವ ಜನತೆ ಮನಸು ತೋರಿಸಬೇಕು. ಕ್ರೀಡೆಯನ್ನು ನಿರ್ಲಕ್ಷ್ಯ ಮಾಡಬಾರದು ಇದು ಯುವಕರಲ್ಲಿ ಬಹಳ ಪರಿಣಾಮ ಬೀರುತ್ತದೆ. ಕ್ರೀಡೆಗೆ ಹೆಚ್ಚು ಒತ್ತು ನೀಡಬೇಕು. ಬುದ್ಧ ಬಸವ ಅಂಬೇಡ್ಕರ್ ಅವರ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿರುವುದು ಸಂತಸದ ವಿಚಾರ. ಸಾಮಾಜಿಕ ಪ್ರಜ್ಞೆ ಯುವಕರಲ್ಲಿ ಬೆಳೆಯಬೇಕು ಮಹನೀಯರ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಮಾಡಿದಾಗ ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಸ್ಮರಿಸಲು ಸಾಧ್ಯವಾಗುತ್ತದೆ ಎಂದು ಯುವಕರಿಗೆ ಕರೆ ನೀಡಿದರು.

ವಿಮೋಚನಾ ಯುವಕರ ಸಂಘದ ವತಿಯಿಂದ ಶಾಸಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಡಿ.ಎಂ.ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮೂಢಹಳ್ಳಿ ಮಹಾದೇವಸ್ವಾಮಿ, ಕಾಂಗ್ರೆಸ್ ಮುಖಂಡರಾದ ದಾಸನೂರು ನಾಗೇಶ್, ಪಿ. ಮಹದೇವಸ್ವಾಮಿ, ಲೋಕೇಶ್, ನಾಗಯ್ಯ, ಸಿದ್ದಯ್ಯಸ್ವಾಮಿ, ಕುಮಾರ್, ನಜಿಬುಲ್ಲಾಖಾನ್, ಗ್ರಾಮದ ಯುವಕರಾದ ಪ್ರಮೋದ್, ಪುಟ್ಟಸ್ವಾಮಿ, ಮಹೇಂದ್ರ, ಮಧು, ವಿಷಕಂಠಮೂರ್ತಿ, ಜಿ ಮಹೇಶ್, ಮಧುಕರ ಸೇರಿದಂತೆ ಕ್ರಿಕೆಟ್ ಪಂದ್ಯಾವಳಿಯ ತಂಡಗಳ ಆಟಗಾರರು ಭಾಗವಹಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ತಮ್ಮ ಸಮಯ ಮೀಸಲಿಡುತ್ತಾರೆ.

Mon Feb 20 , 2023
ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ತಮ್ಮ ಸಮಯ ಮೀಸಲಿಡುತ್ತಾರೆ. ಇದೀಗ ನೆಚ್ಚಿನ ನಟ ಧ್ರುವ ಸರ್ಜಾರನ್ನ ಮನೆ ಮುಂದೆ ಜಾತ್ರೆಯಂತೆ ಜನ ಸೇರಿದ್ದಾರೆ. ಈ ವೇಳೆ ಅಭಿಮಾನಿಯ ಮಗುವಿಗೆ ಮುದ್ದಾದ ಹೆಸರನ್ನ ಕೂಡ ಧ್ರುವ ಸರ್ಜಾ ಇಟ್ಟಿದ್ದಾರೆ. ಕಲಾವಿದರಿಗೂ ಮತ್ತು ಅಭಿಮಾನಿಗಳಿಗೂ ಅಭಿನಾಭಾವ ಸಂಬಂಧವಿದೆ. ಕಲಾವಿದರನ್ನ ದೇವರು ಎಂದು ಪೂಜಿಸುವ ಅಭಿಮಾನಿಗಳಿದ್ದಾರೆ. ಅಪಘಾತವೊಂದರಲ್ಲಿ ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ ಫೃಥ್ವಿರಾಜ್ ಶನಿವಾರ (ಫೆ.18)ರಂದು ಕೊನೆಯುಸಿರೆಳೆದರು. ಸಾಯುವ ಮುನ್ನ […]

Related posts

Advertisement

Wordpress Social Share Plugin powered by Ultimatelysocial