ಬ್ರಿಟಿಷರ ವಿರುದ್ಧ ಚಳವಳಿಗೆ ಹುಟ್ಟಿದ ಸಂಘಟನೆಯೇ ಕಾಂಗ್ರೆಸ್ ಪಕ್ಷ :ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಬ್ರಿಟಿಷರ ವಿರುದ್ಧ ಚಳವಳಿಗೆ ಹುಟ್ಟಿದ ಸಂಘಟನೆಯೇ ಕಾಂಗ್ರೆಸ್ ಪಕ್ಷ :ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಮಂಡ್ಯ :- ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಚಳವಳಿಗೆ ಹುಟ್ಟಿದ ಸಂಘಟನೆಯೇ ಕಾಂಗ್ರೆಸ್ ಪಕ್ಷ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಶಿವಪುರದಲ್ಲಿ ನಡೆದ 137 ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿ 136 ವರ್ಷ ಕಳೆದಿದೆ ಇಂದು 137ನೇ ವರ್ಷಾಚರಣೆ ಮಾಡ್ತಿದ್ದೇವೆ.

ಸ್ವಾತಂತ್ರ್ಯ ಹೋರಾಟ ಮಾಡಲಿಕ್ಕೆ ಮಾತ್ರ ಹುಟ್ಟಿದ್ದಲ್ಲ ಕಾಂಗ್ರೆಸ್ ಪಕ್ಷ ಭಾರತೀಯರ ಕಷ್ಟ ಸುಖ ಆಲಿಸೋಕೆ ಮತ್ತು ಬ್ರಿಟಿಷ್ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟಕ್ಕೆ ಹುಟ್ಟಿದ ಸಂಘಟನೆಯೇ ಕಾಂಗ್ರೆಸ್ ಪಕ್ಷ ಎಂದರು. ಕಾಂಗ್ರೆಸ್ ನ ಇತಿಹಾಸ ಈ ದೇಶದ ಇತಿಹಾಸವಾಗಿದ್ದು, ಪಕ್ಷದ ಹೋರಾಟ, ತ್ಯಾಗ, ಬಲಿದಾನ ಸ್ಮರಣೆಯನ್ನು ನಾವು ಮಾಡಬೇಕಾಗಿದೆ.

ಸ್ವಾತಂತ್ರ್ಯದ ಸಮಯದಲ್ಲಿ ಆರ್ ಎಸ್ ಎಸ್ ಸಂಘಟನೆಯವರು ಯಾರೂ ಕೂಡ ಹೋರಾಟ ಮಾಡಲಿಲ್ಲ, ಪ್ರಾಣ ಕೊಡಲಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿಗರ ಪಾಲು ದೊಡ್ಡ ಶೂನ್ಯ. ಅಂತಹವರು ಇಂದು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡ್ತಾರೆ ಕಿಡಿಕಾ ರಿದರು. ಬ್ರಿಟಿಷರ ವಿರುದ್ಧ ಎದೆ ಕೊಟ್ಟು, ರಕ್ತ ಸುರಿಸಿದ ಮಹಾನ್ ನಾಯಕರ ಶ್ರಮದ ಫಲವೇ ಇಂದು ನರೇಂದ್ರ ಮೋದಿ ಈ ದೇಶದ ಪ್ರಧಾನಿ ಆಗಿರೋದು ಎಂದರು.

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಕೊಡುಗೆ ಏನು ಅಂತಾ ಪ್ರಶ್ನೆ ಮಾಡ್ತಾರೆ. ಅವರಿಗೆ ಇತಿಹಾಸ ಗೊತ್ತಿಲ್ಲದಿರಬಹುದು. ಅಥವಾ ಗೊತ್ತಿದ್ದು, ರಾಜಕೀಯಕ್ಕಾಗಿ ಸುಳ್ಳು ಹೇಳ್ತಿರಬಹುದು. ನಾನು ಮೋದಿಯನ್ನ ಕೇಳ್ತೀನಿ. ಈ ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು. ದೇಶಕ್ಕೆ ಸಾಮಾಜಿಕ, ಆರ್ಥಿಕವಾಗಿ ಕೊಡುಗೆ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ರೈತರಿಗೆ ವಿರುದ್ಧವಾದ ಮೂರು ಕಾಯ್ದೆಗಳನ್ನು ಜಾರಿಗೆ ತಂದು ಹಲವು ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಸೋಲುಂಡ ಮೇಲೆ ಈಗ ಮೂರು ರಾಜ್ಯಗಳ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಈಗ ಕಾಯ್ದೆ ವಾಪಸ್ ಪಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷ ಸದಾ ರೈತರು, ದೇಶದ ಜನರ ಪರವಾದ ಕಾನೂನುಗಳನ್ನು ಜಾರಿಗೆ ತಂದಿದ್ದರೆ. ಈ ಬಿಜೆಪಿ ಸರ್ಕಾರ ದೇಶಕ್ಕೆ ಮಾರಕವಾದ ಕಾನೂನುಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮತಾಂತರ ನಿಷೇಧ ಕಾಯ್ದೆ ಆರ್ ಎಸ್ ಎಸ್ ಅಜೆಂಡಾ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು ಯಡಿಯೂರಪ್ಪ ಸರ್ಕಾರ ಆರ್ ಎಸ್ ಎಸ್ ಹೇಳಿದಂತೆ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಜಾರಿಗೆ ತಂದಿದೆ.

ಡಿ.ಕೆ.ಶಿವಕುಮಾರ್ ಹೇಳಿಕೆ.

ಕಾವೇರಿ ಉಳಿವಿಗಾಗಿ ಮೇಕೆದಾಟು ಯೋಜನೆ ಅಗತ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಮುಂಭಾಗ ಧ್ವಜಾರೋಹಣ ಮಾಡಿ ನಂತರ ಮಾತನಾಡಿದರು. ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಇಲ್ಲಿ ಶುರುವಾದ ಹೋರಾಟದ ಕಿಚ್ಚು ಕೇಳಿದ್ದೇನೆ.

ಮತ್ತೊಮ್ಮೆ ಆ ರೀತಿಯ ಹೋರಾಟದ ಕಿಚ್ಚು ನಿಮ್ಮ ಮೇಲಿದೆ. ಮೇಕೆದಾಟು ಯೋಜನೆಗೆ ಹೆಚ್.ಡಿ.ಕುಮಾರ ಸ್ವಾಮಿ ಟೀಕೆ ಮಾಡ್ತಿದ್ದಾರೆ. ಅವರ ಟೀಕೆ ಬಗ್ಗೆ ನಮಗೆ ಬೇಸರವಿಲ್ಲ. ಇದು ಪಕ್ಷಾತೀತವಾಗಿ ನಡೆಯುತ್ತಿರುವ ಪಾದಯಾತ್ರೆ. ಎಲ್ಲಾ ಪಕ್ಷದವರಿಗೂ ಅವಶ್ಯಕತೆ ಇರುವ ಯೋಜನೆ ಇದು. ಈ ಯೋಜನೆ ಪಕ್ಷಾತೀತವಾದದ್ದು. ಪಾದಯಾತ್ರೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

''ಕರ್ನಾಟಕ ಬಂದ್ ಗೆ ಬೆಳಗಾವಿ ಜಿಲ್ಲೆಯ ಕೆಲವು ಕನ್ನಡಪರ ಸಂಘಟನೆಗಳ ವಿರೋಧ''

Tue Dec 28 , 2021
ಬೆಳಗಾವಿ : ಗಡಿ ಭಾಗದಲ್ಲಿ ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ಸಂಘಟ‌ನೆ ನಿಷೇಧ ಮಾಡಲು ನಮ್ಮ ಆಗ್ರಹವಿದೆ. ಆದರೆ, ಕರ್ನಾ ಟಕ ಬಂದ್ ಮಾಡಲು ನಮ್ಮ ಬೆಂಬಲ ಇಲ್ಲ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ‌ಅಶೋಕ‌ ಚಂದರಗಿ ಹೇಳಿದರು. ನಗ ರದಲ್ಲಿ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮೇಲೆ ನಿಷೇಧ ಹೇರ ಬೇಕೆಂದು ಬೆಂಗಳೂರಿನ ಕೆಲ ಕನ್ನಡ ಪರ ಸಂಘಟನೆಗಳು ಡಿ.31 ರಂದು ಕರ್ನಾಟಕ ಬಂದ್‌ಗೆ […]

Advertisement

Wordpress Social Share Plugin powered by Ultimatelysocial