”ಕರ್ನಾಟಕ ಬಂದ್ ಗೆ ಬೆಳಗಾವಿ ಜಿಲ್ಲೆಯ ಕೆಲವು ಕನ್ನಡಪರ ಸಂಘಟನೆಗಳ ವಿರೋಧ”

''ಕರ್ನಾಟಕ ಬಂದ್ ಗೆ ಬೆಳಗಾವಿ ಜಿಲ್ಲೆಯ ಕೆಲವು ಕನ್ನಡಪರ ಸಂಘಟನೆಗಳ ವಿರೋಧ''

ಬೆಳಗಾವಿ ಗಡಿ ಭಾಗದಲ್ಲಿ ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ಸಂಘಟ‌ನೆ ನಿಷೇಧ ಮಾಡಲು ನಮ್ಮ ಆಗ್ರಹವಿದೆ. ಆದರೆ, ಕರ್ನಾ ಟಕ ಬಂದ್ ಮಾಡಲು ನಮ್ಮ ಬೆಂಬಲ ಇಲ್ಲ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ‌ಅಶೋಕ‌ ಚಂದರಗಿ ಹೇಳಿದರು.

ನಗ ರದಲ್ಲಿ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮೇಲೆ ನಿಷೇಧ ಹೇರ ಬೇಕೆಂದು ಬೆಂಗಳೂರಿನ ಕೆಲ ಕನ್ನಡ ಪರ ಸಂಘಟನೆಗಳು ಡಿ.31 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ‌.

ಆದರೆ ಬೆಳಗಾವಿಯಲ್ಲಿರುವ ಕನ್ನಡ ಪರ ಸಂಘಟ‌ನೆಗಳು ಈ ಬಂದ್‌ಗೆ ಬೆಂಬಲಿಸುವುದಿಲ್ಲ ಎಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದ ರು. ನಾಡ ದ್ರೋಹಿ ಚಟುವಟಿಕೆಗಳನ್ನು ನಡೆಸುವ ಯಾವುದೇ ಸಂಘಟನೆ ಆಗಿದ್ದರೂ ಅದನ್ನು ನಿಷೇಧಿಸಲೇಬೇಕು. ಆದರೆ, ಬಂದ್‌ನಿಂದ ಆಗುವ ದುಷ್ಪರಿಣಾಮ,ಜನಜೀವನ ಮೇಲೆ ಆಗುವ ಪರಿಣಾಮಗಳ ಬಗ್ಗೆ ಚಿಂತಿಸಬೇಕು. ಬೆಂಗಳೂರಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ‌ಕುಳಿತುಕೊಂಡು ರಾಜ್ಯದ ಇತರ ಕನ್ನಡಪರ ಸಂಘಟನೆಗಳನ್ನು,

ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೈಗೊಂಡ ನಿರ್ಧಾರಕ್ಕೆ ನಾವು ಬೆಂಬಲ ನೀಡಲಾಗುವುದಿಲ್ಲ. ಇದು ವಾಟಾಳ್ ನಾಗರಾಜ್ ಅವರು ಕೈಗೊಂಡ ಏಕಪಕ್ಷೀಯ ನಿರ್ಣಯ. ವಾಟಾಳ್ ಅವರ ಬಗ್ಗೆ ಗೌರವ ಇದೆ. ಆದರೆ ಇತ್ತೀಚೆಗೆ ಅವರ ವರ್ತನೆ ಸರಿ ಎನ್ನಿಸುತ್ತಿಲ್ಲ. ಅವರು ಹೇಳಿದ ಹಾಗೆ ಕರ್ನಾಟಕದ ಜನ ಇರಬೇಕು. ಅವರು ಹೇಳಿದ್ದೆ ಅಂತಿಮ ಎನ್ನುತ್ತಿರುವುದು ಬೇಸರದ ಸಂಗತಿ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಿತ್ರದುರ್ಗ: ರಸ್ತೆ ಬದಿಯಲ್ಲಿ ನೂರಾರು ಆಧಾರ್ ಕಾರ್ಡ್ ಪತ್ತೆ

Tue Dec 28 , 2021
ಚಿತ್ರದುರ್ಗ : ಖಾಲಿ ಜಾಗದಲ್ಲಿ ನೂರಾರು ಆಧಾರ್ ಕಾರ್ಡ್​ಗಳು ಚೆಲ್ಲಾಪಿಲ್ಲಿಯಾಗಿ ಬೀದಿಪಾಲು ಆಗಿರುವ ಘಟನೆಯೊಂದು ನಡೆದಿದೆ. ಈ ಘಟನೆಯು ಚಿತ್ರದುರ್ಗದ ಚಳ್ಳಕೆರೆಯ ಕಂದಾಯ ಬಡಾವಣೆ ಜಾಗದಲ್ಲಿ ನಡೆದಿದ್ದು, ​ವಿದ್ಯಾರ್ಥಿಗಳಿಗೆ ಸೇರಿದ ಆಧಾರ್ ಕಾರ್ಡ್​​ಗಳು ಬೀದಿಪಾಲು ಆಗಿದೆ. ಬೀದಿಪಾಲಾದ ಆಧಾರ್ ಕಾರ್ಡ್​ಗಳನ್ನು ಕಂಡು ಸ್ಥಳೀಯರ ಆಕ್ರೋಶವನ್ನೂ ಹೊರಹಾಕಿದ್ದು, ಸ್ಥಳೀಯರು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial