ಜೈರಾ ವಾಸಿಮ್​ ಹಿಜಾಬ್​ ಆಯ್ಕೆಯಲ್ಲ, ಅದು ಇಸ್ಲಾಂನ ಒಂದು ಬಾಧ್ಯತೆ ಎಂದು ಹೇಳಿದ್ದಾರೆ.

ನವದೆಹಲಿ: ಕರ್ನಾಟಕದಲ್ಲಿ ಮುಂದುವರಿದಿರುವ ಹಿಜಾಬ್​ ವಿವಾದ ಕುರಿತು ರಾಜಕೀಯ ನಾಯಕರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಆ ಸಾಲಿಗೆ ಆಮೀರ್​ ಖಾನ್​ ನಟನೆಯ ಸೂಪರ್​ ಹಿಟ್​ ‘ದಂಗಲ್​’ ಸಿನಿಮಾದಲ್ಲಿ ನಟಿಸಿದ್ದ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಜೈರಾ ವಾಸಿಮ್​ ಕೂಡ ಸೇರಿದ್ದಾರೆ.ಇನ್​ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್​ ಮಾಡಿರುವ ಜೈರಾ, ಕರ್ನಾಟಕದ ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್​ ಬ್ಯಾನ್​ ಮಾಡಿರುವುದನ್ನು ಖಂಡಿಸಿದ್ದಾರೆ. ಹಿಜಾಬ್​ ಆಯ್ಕೆಯಲ್ಲ, ಅದು ಇಸ್ಲಾಂನ ಒಂದು ಬಾಧ್ಯತೆ ಎಂದು ಹೇಳಿದ್ದಾರೆ. ನಾನು ಕೃತಜ್ಞತೆ ಮತ್ತು ನಮ್ರತೆಯಿಂದ ಹಿಜಾಬ್ ಧರಿಸಿರುವ ಓರ್ವ ಮಹಿಳೆಯಾಗಿ, ಕೇವಲ ಧಾರ್ಮಿಕ ಬದ್ಧತೆಯನ್ನು ನಿರ್ವಹಿಸುವ ಮಹಿಳೆಯರನ್ನು ಬೀದಿಯಲ್ಲಿ ನಿಲ್ಲಿಸಿ ಕಿರುಕುಳ ನೀಡುತ್ತಿರುವ ಈ ಸಂಪೂರ್ಣ ವ್ಯವಸ್ಥೆಯನ್ನು ವಿರೋಧಿಸುತ್ತೇನೆ ಎಂದಿದ್ದಾರೆ.ಹಿಜಾಬ್ ಒಂದು ಆಯ್ಕೆಯಷ್ಟೇ ಎಂಬ ಕಲ್ಪನೆಯೇ ಅಪ್ರಬುದ್ಧವಾಗಿದೆ. ಹಿಜಾಬ್​ ಒಂದು ಆಯ್ಕೆಯಲ್ಲ ಬದಲಾಗಿ ಇಸ್ಲಾಂನ ಒಂದು ಕರ್ತವ್ಯ. ಓರ್ವ ಮಹಿಳೆ ಹಿಜಾಬ್​ ಧರಿಸಿದ್ದಾಳೆ ಅಂದರೆ ಆಕೆ ಪ್ರೀತಿಸುವ ಮತ್ತು ತನ್ನನ್ನು ಅರ್ಪಿಸಿಕೊಂಡ ದೇವರ ಕರ್ತವ್ಯವನ್ನು ಖುಷಿಯಿಂದಲೇ ನೆರವೇರಿಸುತ್ತಿರುತ್ತಾಳೆ ಎಂದರ್ಥ. ಆದರೆ, ಹಿಜಾಬ್​ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಈ ರೀತಿ ಕಿರುಕುಳ ನೀಡುತ್ತಿರುವುದನ್ನು ಓರ್ವ ಹಿಜಾಬ್​ ಧರಿಸುವ ಮಹಿಳೆಯಾಗಿ ಖಂಡಿಸುತ್ತೇನೆ ಎಂದಿದ್ದಾರೆ.ಮುಸ್ಲಿಂ ಮಹಿಳೆಯರನ್ನು ಶಿಕ್ಷಣ ಮತ್ತು ಹಿಜಾಬ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಅಂತಾ ಹೇಳುವುದು ಅನ್ಯಾಯವಾಗಿದೆ. ಇದೊಂದು ಪಕ್ಷಪಾತದ ನಿಲುವಾಗಿದೆ. ಮಹಿಳೆಯ ಸಬಲೀಕರಣದ ಹೆಸರಿನಲ್ಲಿ ಹಿಜಾಬ್​ ಕಳಚುವಂತೆ ಮಾಡುತ್ತಿರುವುದು ದುಃಖಕರವಾಗಿದೆ ಎಂದು ಜೈರಾ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಬ್ಬು ತಿನ್ನುವ ಆಸೆಯಿಂದಾಗಿ ಪ್ರಾಣ ಕಳ್ಕೊಂಡ ಬಾಲಕ; ಟ್ರ್ಯಾಕ್ಟರ್​ ಅಡಿಗೆ ಸಿಲುಕಿ ಸಾವು.

Sun Feb 20 , 2022
ಬೆಳಗಾವಿ: ಈ ದುರಂತದ ವಿಡಿಯೋವನ್ನು ನೋಡಿದರೆ ಎಂಥವರ ಕರುಳು ಕೂಡ ಒಮ್ಮೆ ಚುರುಕ್ ಎನ್ನದೇ ಇರಲಾರದು. ಅಂಥ ದುರ್ಮರಣವಿದು. ಬರೀ ಒಂದು ಕಬ್ಬು ತಿನ್ನುವ ಆಸೆಯಿಂದಾಗಿ 8 ವರ್ಷದ ಬಾಲಕನೊಬ್ಬ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ನಿನ್ನೆ ಸಂಜೆಯ ಸುಮಾರಿಗೆ ಇಂಥದ್ದೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ 8 ವರ್ಷದ ಅನಿಲ್ ಹಣಬರ್ ಎಂಬಾತ ಸಾವಿಗೀಡಾಗಿದ್ದಾನೆ. ಕಬ್ಬು ತುಂಬಿಕೊಂಡು ಹೋಗುತ್ತಿದ್ದ […]

Advertisement

Wordpress Social Share Plugin powered by Ultimatelysocial