ತನ್ನ ಹೆಂಡತಿಯನ್ನು ಕೊಲ್ಲಲು ಯತ್ನಿಸಿದ ವೇಳೆಯಲ್ಲಿ, ಆಕಸ್ಮಿಕವಾಗಿ ತನ್ನ ಕೈಯನ್ನು ಕತ್ತರಿಸಿಕೊಂಡ ವ್ಯಕ್ತಿಯ ಗಾಯಕ್ಕೆ £ 17,500 ಪರಿಹಾರವನ್ನು ನೀಡಲು ಕೋರ್ಟ್ ಆದೇಶ ಮಾಡಿರುವ ಘಟನೆ ನಡೆದಿದೆ. 36 ವರ್ಷದ ಡೊರಿನೆಲ್ ಕೊಜಾನು ಎಂದು ಗುರುತಿಸಲಾದ ವ್ಯಕ್ತಿ ಡಿಸೆಂಬರ್ 2015 ರಲ್ಲಿ ತನ್ನ ಹೆಂಡತಿಯನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ 11 ವರ್ಷಗಳ ಕಾಲ ಜೈಲಿನಲ್ಲಿದ್ದಾನೆ.ಕುಡಿದ ಅಮಲಿನಲ್ಲಿ ಕೋಜನು ಎಂಟು ಇಂಚಿನ ಬ್ಲೇಡ್ ಸಹಾಯದಿಂದ ತನ್ನ ಮಾಜಿ ಪತ್ನಿ ಡೇನಿಯಲಾ (35) ಎಂಬುವರನ್ನು ಹಿಂದೆ ಮತ್ತು ಮುಂಭಾಗದಲ್ಲಿ ಇರಿದಿದ್ದಾನೆ. ಚಾಕು ಬಲ ಸ್ತನದ ಮೂಲಕ ಹೋಗಿ ಎರಡು ಪಕ್ಕೆಲುಬುಗಳ ಮೂಲಕ ಹಾದುಹೋಗಿದ್ದರಿಂದ ಅವರ ಪತ್ನಿ ತೀವ್ರವಾಗಿ ಗಾಯಗೊಂಡಿದ್ದಳು, ಗಂಡನಿಂದ ದಾಳಿಯ ನಂತರ ಅವರು ಸುಮಾರು ನಾಲ್ಕು ತಿಂಗಳು ಆಸ್ಪತ್ರೆಯಲ್ಲಿ ಕಳೆದಿದ್ದಾಳಂತೆ. ತನ್ನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸುತ್ತಿರುವಾಗ, ಕೊಜಾನು ಬಲಗೈಯ ಎರಡು ಬೆರಳುಗಳಿಗೆ ತೀವ್ರತರಹದ ಗಾಯವಾಗಿದೆಯಂತೆ. ಕೊಜಾನು ಎನ್ಎಚ್ಎಸ್ ವಿರುದ್ಧ ಪರಿಹಾರದ ಹಕ್ಕನ್ನು ಸಲ್ಲಿಸಿದ್ದ. ಮೇ 2021 ರಲ್ಲಿ, ನಾರ್ವಿಚ್ ಕೌಂಟಿ ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶರು. ಆತನಿಗೆ £ 8,500 ಹಣವನ್ನು ನೀಡುವಂತೆ ಆದೇಶ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada