ತನ್ನ ಅತಿಯಾದ ಉದ್ದದ ಮೂತಿಯಿಂದಾಗಿ ನಾಯಿಯೊಂದು ಅಂತರ್ಜಾಲದಲ್ಲಿ ಫೇಮಸ್ ಆಗಿದೆ. ವರ್ಜಿನಿಯಾದ ಬೋರ್ಜಾಯ್ ತಳಿಯ ನಾಯಿಯೊಂದು 12 ಇಂಚು ಅಳತೆಯ ಮೂತಿ ಹೊಂದಿದೆ. ಅದರ ಮಾಲೀಕರಾದ ಲೀಲಿ ಕಾಂಬೌರಿನಾ ತಾವು ಮರಿಯನ್ನು ತಂದಾಗ ಮೇಡಂ ಎರಿಸ್ ಓವರ್ ಬೈಟ್, ಸ್ನೂಟ್ ರಾಣಿ ಎಂದು ಹೆಸರಿಟ್ಟಿದ್ದರಂತೆ. ಇನ್ಸ್ಟಾಗ್ರಾಮ್ ನಲ್ಲಿ 1.7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಎರಿಸ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಜನಪ್ರಿಯ ನಾಯಿಗಳಲ್ಲಿ ಒಂದಾಗಿದೆ. ಇದರ ಫೋಟೋ ನಿಯಮಿತವಾಗಿ ಇನ್ಸ್ಟಾ, ಫೇಸ್ ಬುಕ್ ನಲ್ಲಿ ಪ್ರಕಟಗೊಳ್ಳುತ್ತದೆ. ಇದನ್ನು ಕಂಡ ಜನರು ಉದ್ದನೆಯ ಮೂಗಿನ ಬಗ್ಗೆ ವಿಸ್ಮಯ ವ್ಯಕ್ತಪಡಿಸುತ್ತಾರೆ.
ಅಂತರ್ಜಾಲದಲ್ಲಿ ಫೇಮಸ್ ಆದ ಸ್ನೂಟ್ ರಾಣಿ

Please follow and like us: