ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಲೆಗಳಿಂದ ಹಿಡಿದು ವಿವಿಧ ತರಗತಿಗಳು ಆನ್ ಲೈನ್ ನಲ್ಲಿ ನಡೆಯುತ್ತಿವೆ. ಆನ್ ಲೈನ್ ಕ್ಲಾಸ್ ಇರುವುದರಿಂದ ತಮ್ಮ ಬಳಿ ಸ್ಮಾರ್ಟ್ ಪೋನ್ ಇಲ್ಲ ಎಂದು 29 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಮೈದಾನಗರ್ಹಿಯಲ್ಲಿ ನಡೆದಿದೆ. ಜ್ಯೋತಿ ಮಿಶ್ರಾ ಅವರ ಮಕ್ಕಳಿಗೆ ಆನ್ ಲೈನ್ ತರಗತಿಗಳು ನಡೆಯುತ್ತಿದ್ದು, ಮಕ್ಕಳಿಗೆ ತರಗತಿಗಳು ಮಿಸ್ ಆಗಿ ಅವರ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅವರ ಬಳಿ ಸ್ಮಾರ್ಟ್ ಪೋನ್ ಇಲ್ಲದ ಕಾರಣ ಪತಿಯ ಬಳಿ ಸ್ಮಾರ್ಟ್ ಪೋನ್ ಬೇಡಿಕೆ ಇಟ್ಟಾಗ ಪತಿಯೂ ಇನ್ನೂ ಸ್ವಲ್ಪದಿನ ಹೋಗಲಿ ಎಂದಾಗ ಜಗಳವಾಗಿದೆ. ಫೋನ್ ತುರ್ತಾಗಿ ಕೊಡಿಸಲು ಗಂಡ ಒಪ್ಪದಿದ್ದ ಕಾರಣ, ಮನನೊಂದುಕೊಂಡಿರುವ ಜ್ಯೋತಿ ಅವರು ದುಗುಡದ ನಿರ್ಧಾರ ತೆಗೆದುಕೊಂಡೇ ಬಿಟ್ಟರು! ಮನೆಯಲ್ಲಿ ಇದ್ದ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ದುಗುಡದ ನಿರ್ಧಾರ ಎಂದು ಸಾಬೀತಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಆನ್ ಲೈನ್ ಕ್ಲಾಸ್ ಅವಾಂತರ : ಮಹಿಳೆ ಆತ್ಮಹತ್ಯೆ

Please follow and like us: