ಆರೋಗ್ಯ ಸೇತು ಆ್ಯಪ್‌ನ ಬೆನ್ನುಬಿದ್ದಿರುವ ಫ್ರೆಂಚ್ ಹ್ಯಾಕರ್..!

ನವದೆಹಲಿ: ಕೊವಿಡ್-೧೯ ಟ್ರ‍್ಯಾಕ್ ಮಾಡಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್‌ನಿಂದ ಸಾರ್ವಜನಿಕರ ಖಾಸಗಿ ಮಾಹಿತಿಗಳು ಸೋರಿಕೆ ಆಗುತ್ತದೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿಯವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದ ಬಿಜೆಪಿ, ಯಾರೂ ಹೆದರಬೇಕಿಲ್ಲ. ಆರೋಗ್ಯ ಸೇತು ಆ್ಯಪ್‌ನಲ್ಲಿ ಎಲ್ಲರ ಮಾಹಿತಿಗಳೂ ಭದ್ರವಾಗಿರುತ್ತವೆ. ಸೋರಿಕೆಯಾಗುವುದಿಲ್ಲ ಎಂದು ಭರವಸೆ ನೀಡಿತ್ತು.
ಆದರೆ ನಿನ್ನೆ ರಾತ್ರಿ ಫ್ರೆಂಚ್ ಹ್ಯಾಕರ್ ರಾಬರ್ಟ್ ಬ್ಯಾಪ್ಟಿಸ್ಟ್ ಎಂಬುವರು ಟ್ವೀಟ್ ಮಾಡುವ ಮೂಲಕ, ಭಾರತದ ಆರೋಗ್ಯ ಸೇತು ಆ್ಯಪ್‌ನಲ್ಲಿ ಡೇಟಾ ಸೆಕ್ಯೂರಿಟಿಗೆ ಸಂಬಂಧಪಟ್ಟ ಸಮಸ್ಯೆ ಇದೆ ಎಂದು ಹೇಳಿದ್ದರು. ಎಲಿಯಟ್ ಆಲ್ಡರ್ಸನ್ ಎಂಬ ಹೆಸರಿನಲ್ಲಿರುವ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಆರೋಗ್ಯ ಸೇತು ಆ್ಯಪ್‌ನ್ನು ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ್ದ ಫ್ರೆಂಚ್ ಹ್ಯಾಕರ್ ರಾಬರ್ಟ್ ಬ್ಯಾಪ್ಟಿಸ್ಟ್, ಆರೋಗ್ಯ ಸೇತು ಆ್ಯಪ್‌ನಲ್ಲಿ ಭದ್ರತೆಗೆ ಸಂಬಂಧಪಟ್ಟ ಸಮಸ್ಯೆ ಕಂಡುಬರುತ್ತಿದೆ. ೯೦ ಮಿಲಿಯನ್ ಭಾರತೀಯರ ಖಾಸಗಿ ಮಾಹಿತಿಗಳು ಅಪಾಯದಲ್ಲಿದೆ. ರಾಹುಲ್ ಗಾಂಧಿ ಹೇಳಿದ್ದು ಸರಿಯಾಗಿದೆ ಎಂದೂ ಉಲ್ಲೇಖಿಸಿದ್ದರು.


ಆ ಟ್ವೀಟ್ ಮಾಡಿ ಕೆಲವೇ ಹೊತ್ತಲ್ಲಿ ಇನ್ನೊಂದು ಟ್ವೀಟ್ ಮಾಡಿದ್ದ ಹ್ಯಾಕರ್, ನಾನು ಟ್ವೀಟ್ ಮಾಡಿದ ೪೯ ನಿಮಿಷಗಳ ನಂತರ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ ನನ್ನನ್ನು ಸಂಪರ್ಕಿಸಿತ್ತು. ಸಮಸ್ಯೆಯನ್ನು ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದರು. ಈಗ ರಾಬರ್ಟ್ ಬ್ಯಾಪ್ಟಿಸ್ಟ್ ಅವರ ಟ್ವೀಟ್‌ಗಳಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಆರೋಗ್ಯ ಸೇತು ಆ್ಯಪ್‌ನಲ್ಲಿ ಸಾರ್ವಜನಿಕರ ಮಾಹಿತಿ ಸುರಕ್ಷಿತವಲ್ಲ ಎಂದಿರುವ ಹ್ಯಾಕರ್‌ಗೆ ಉತ್ತರಿಸಿರುವ ಕೇಂದ್ರ, ಯಾವುದೇ ಡೇಟಾ ಆಗಲೀ, ಖಾಸಗಿ ಮಾಹಿತಿಗಳ ಸೋರಿಕೆಯಾಗಲೀ ಕಂಡುಬಂದಿಲ್ಲ.  ಭದ್ರತಾ ನಿಯಮ ಉಲ್ಲಂಘನೆಯಾಗಿಲ್ಲ ಎಂದಿದೆ.
ಆರೋಗ್ಯ ಸೇತು ಆ್ಯಪ್‌ನ ಯಾವುದೇ ಬಳಕೆದಾರನ ವೈಯಕ್ತಿಕ ಮಾಹಿತಿಗಳು ಅಪಾಯದಲ್ಲಿವೆ ಎಂಬುದನ್ನು ಈ ಎಥಿಕಲ್ ಹ್ಯಾಕರ್ ಸಾಬೀತು ಮಾಡಿಲ್ಲ. ನಾವು ನಮ್ಮ ಆ್ಯಪ್‌ನ್ನು ನಿರಂತರವಾಗಿ ಪರಿಶೀಲನೆ ಮಾಡುತ್ತಿದ್ದೇವೆ ಮತ್ತು ಅಪ್‌ಗ್ರೇಡ್ ಮಾಡುತ್ತಿದ್ದೇವೆ. ಯಾರೊಬ್ಬರ ಡೇಟಾ, ಖಾಸಗಿ ಮಾಹಿತಿಗಳು ಸೋರಿಕೆಯಾಗುವುದಿಲ್ಲ ಎಂದು ಆರೋಗ್ಯ ಸೇತು ಟೀಂ ಭರವಸೆ ಕೊಡುತ್ತದೆ ಎಂದು ಸರ್ಕಾರ ಹೇಳಿದೆ. ಅಲ್ಲದೆ, ಫ್ರೆಂಚ್‌ನ ಎಥಿಕಲ್ ಹ್ಯಾಕರ್ ನಮ್ಮನ್ನು ಎಚ್ಚರಿಸಿದ್ದಕ್ಕೆ ಧನ್ಯವಾದ. ಯಾವುದೇ ಬಳಕೆದಾರ ಆ್ಯಪ್‌ನಲ್ಲಿ ಸಮಸ್ಯೆ ಇದೆ ಎಂದು ಹೇಳಿದರೆ ಖಂಡಿತ ಶೀಘ್ರವೇ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದೆ. ಹಾಗೇ ನಿಮ್ಮ ಬೆಂಬಲ ನಮಗೆ ಇರಲಿ ಎಂದು ಫ್ರೆಂಚ್ ಹ್ಯಾಕರ್‌ಗೆ ಹೇಳಿದೆ.

Please follow and like us:

Leave a Reply

Your email address will not be published. Required fields are marked *

Next Post

ಡಿಕೆಶಿಗೆ, ಆರ್ ಅಶೋಕ್ ತಿರುಗೇಟು..!

Wed May 6 , 2020
ನಿನ್ನೆ ನೈಸ್ ರಸ್ತೆಯಲ್ಲಿ 5000ಕ್ಕೂಹೆಚ್ಚು ಕೂಲಿ ಕಾರ್ಮಿಕರು ಅಲ್ಲಿ ಜಮಾವಣೆಯಾಗಿದ್ದರು. ಅವರನ್ನು ಬಲವಂತವಾಗಿ ತಡೆಹಿಡಿಯಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿತ್ತು. ನಾವು ಯಾರನ್ನೂ ಕೂಡಿಕಾಕಿಲ್ಲ. ಬೇರೆ ರಾಜ್ಯಗಳಿಗೆ ಹೋಗುವ ಯಾರನ್ನೂ ತಡೆಯುವುದಿಲ್ಲ. ತಡೆಯುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಸಚಿವ ಆರ್. ಅಶೋಕ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಲ್ಲಿಗೆ ಬಂದ ಕಾರ್ಮಿಕರು ಫ್ಯಾಕ್ಟರಿ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು, ಅವರಲ್ಲಿ ಬಹಳಷ್ಟು ತುಮಕೂರಿನ ವಿಮಲ್ ಎಂಬ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. […]

Advertisement

Wordpress Social Share Plugin powered by Ultimatelysocial