ಉಕ್ರೇನ್​ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರಿಗೆ ದೂರವಾಣಿ ಮೂಲಕ ಕರೆ ಮಾಡಿದ ಪ್ರಧಾನಿ !

ನವದೆಹಲಿ: ಯುದ್ಧ ಪೀಡಿತ ಉಕ್ರೇನ್​ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರಿಗೆ ಸೋಮವಾರ ಬೆಳಗ್ಗೆ ದೂರವಾಣಿ ಮೂಲಕ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸುಮಾರು 35 ನಿಮಿಷ ಮಾತುಕತೆ ನಡೆಸಿದರು.ರಷ್ಯಾ ಸೇನಾ ಪಡೆಯ ದಾಳಿಯ ಪರಿಣಾಮ ಯೂಕ್ರೇನ್​ನಲ್ಲಿರುವ ​ಭಾರತೀಯರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.ಈಗಾಗಲೇ ಬಹುಪಾಲು ವಿದ್ಯಾರ್ಥಿಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿದೆ. ಇದಕ್ಕೆ ಸಹಕರಿಸಿದ್ದಕ್ಕೆ ಧನ್ಯವಾದಗಳು. ಯುದ್ಧ ವಲಯದಲ್ಲಿ ಇನ್ನೂ ನೂರಾರು ಭಾರತೀಯರು ಇದ್ದಾರೆ. ಅವರಲ್ಲೆರನ್ನೂ ತಾಯ್ನಾಡಿಗೆ ಸ್ಥಳಾಂತರಿಸಲು ಸಹಕರಿಸಬೇಕು. ಸುಮಿಯಲ್ಲಿರುವ ಸುಮಾರು 500ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಸ್ಥಳಾಂತರಿಸುವ ಪ್ರಯತ್ನಕ್ಕೆ ನಿಮ್ಮ ಸರ್ಕಾರ ನಿರಂತರ ಬೆಂಬಲ ಕೊಡಬೇಕು ಎಂದು ಯೂಕ್ರೇನ್​ ಅಧ್ಯಕ್ಷರನ್ನು ನರೇಂದ್ರ ಮೋದಿ ಕೋರಿದರು ಎಂದು ಮೂಲಗಳು ತಿಳಿಸಿವೆ.ರಷ್ಯಾ-ಯೂಕ್ರೇನ್​ ನಡುವೆ ಯುದ್ಧ ಶುರುವಾರ ಬಳಿಕ ಉಕ್ರೇನ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತನಾಡಿದ್ದು ಇದು ಎರಡನೇ ಬಾರಿ. ಫೆಬ್ರವರಿ 26ರಂದು ಕೂಡ ಝೆಲೆನ್ಸ್ಕಿ ಜತೆ ಪ್ರಧಾನಿ ಮೋದಿ ಮಾತನಾಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜುಂಡ್ನ ಕೊಳೆಗೇರಿ ಮಕ್ಕಳಿಗೆ ಈಗ ಏನಾಗುತ್ತದೆ?

Mon Mar 7 , 2022
ನಾಗರಾಜ ಮಂಜುಳೆ ಅವರದು ಜುಂಡ್ ಅನೇಕ ಅಂಶಗಳಲ್ಲಿ ಗಮನಾರ್ಹವಾಗಿದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಮುಂಬೈನಿಂದ ಬಡ ಕೊಳೆಗೇರಿ ಮಕ್ಕಳ ಜೀವನವನ್ನು ಹೊರತೆಗೆಯಲು ಇದು ನೆನಪಿನಲ್ಲಿ ಉಳಿಯುತ್ತದೆ. ದುರಂತವೆಂದರೆ ಅವರ ಏಳು-ನಿಮಿಷಗಳ ಖ್ಯಾತಿಯು ಜುಂಡ್‌ನೊಂದಿಗೆ ಪ್ರಾರಂಭವಾಗುವ ಮತ್ತು ಕೊನೆಗೊಳ್ಳುವ ಸಾಧ್ಯತೆಯಿದೆ. ಹೌದು, ಈ ಸಮಯದಲ್ಲಿ ಎಲ್ಲರೂ ಝುಂಡ್ ಮಕ್ಕಳ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಅವರು ಕೂಡ ಸಿಕ್ಕಿದ್ದಾರೆ ಅಮೀರ್ ಖಾನ್ ಭೇಟಿ ಚಿತ್ರ ನೋಡಿದ ನಂತರ ಎಲ್ಲರನ್ನೂ ಒಬ್ಬೊಬ್ಬರಾಗಿ ತಬ್ಬಿಕೊಂಡರು. ಆದರೆ […]

Advertisement

Wordpress Social Share Plugin powered by Ultimatelysocial