ಕಾನ್ಪುರದಲ್ಲಿನ 56 ವಿದ್ಯಾರ್ಥಿಗಳಿಗೆ ಕೊರೋನಾ

ಕಾನ್ಪುರ: ತಬ್ಲಿಘಿ ಸಮಾವೇಶದಿಂದ ಕೊರೋನಾ ವೈರಸ್ ಹರಡುತ್ತಿರುವ ಪ್ರಕರಣಗಳು ಕೊಂಚ ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಸದ್ದು ಮಾಡುತ್ತಿವೆ. ಉತ್ತರ ಪ್ರದೇಶದ ಕಾನ್ಪುರದಲ್ಲಿನ ಮೂರು ಮದರಸಾಗಳ ಒಟ್ಟು 56 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಇದಕ್ಕೆ ತಬ್ಲಿಘಿಯೇ ಕಾರಣ ಎನ್ನಲಾಗಿದೆ.ಕಾನ್ಪುರದಲ್ಲಿ ತಬ್ಲಿಘಿ​ ಜಮಾತ್​ನಲ್ಲಿ ಪಾಲ್ಗೊಂಡು ಬಂದ ಕೆಲವರಿಗೆ ಕೊರೊನಾ ಪಾಸಿಟಿವ್​ ಬಂದಿತ್ತು. ಅವರೊಂದಿಗೆ ವಿದ್ಯಾರ್ಥಿಗಳು ಸಂಪರ್ಕ ಬೆಳೆಸಿದ್ದರಿಂದ ಸೋಂಕು ಒಬ್ಬರಿಂದೊಬ್ಬರಿಗೆ ಹರಡಿ 56 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಸೊಂಕಿತರು ಕಾನ್ಪುರದ ಕುಲಿ ಬಜಾರ್‌ನಲ್ಲಿನ ಮದರಸಾ, ನೌಬಸ್ತಾದಲ್ಲಿನ ಮದರಸಾ ಮತ್ತು ಜಜ್ಮೌದಲ್ಲಿರುವ ಮದರಸಾದ 10 ರಿಂದ 20 ವರ್ಷದೊಳಗಿನ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಕೊರೋನಾ ಕುರಿತ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಕಾರಣ

Mon Apr 27 , 2020
ನ್ಯೂಯಾರ್ಕ್: ಕೊರೋನಾ ವೈರಸ್ ಕುರಿತಂತೆ ಸಾಧ್ಯವಾದಷ್ಟೂ ಮಟ್ಟಿಗೆ ಹರಡಿರುವ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಮೂಲ. ಆನ್ನೆನ್ಬರ್ಗ್ ವಿಜ್ಞಾನ ಸಮೀಕ್ಷೆಯಲ್ಲಿ ಮಾರ್ಚ್ ತಿಂಗಳಲ್ಲಿ ಕೋವಿಡ್-೧೯ ಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ, ಅಮೆರಿಕದ ೧,೦೦೮ ವಯಸ್ಕರನ್ನು ಪ್ರಶ್ನೆ ಕೇಳಲಾಗಿತ್ತು. ಈ ಪೈಕಿ ಪ್ರತಿಕ್ರಿಯೆ ನೀಡಿರುವವರ ಪೈಕಿ ಹಲವರು ಕೋವಿಡ್-೧೯ ಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಲಭ್ಯವಾಗಲು ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳೂ ಕಾರಣ ಎಂಬುದನ್ನು ಯೂನಿವರ್ಸಿಟಿ ಆಫ್ ಪೆನ್ಸಲ್ವೇನಿಯಾ ಹಾಗೂ […]

Advertisement

Wordpress Social Share Plugin powered by Ultimatelysocial