ಕೃಷ್ಣ ಮಠದಲ್ಲಿ 15 ದಿನಗಳ ಕಾಲ ದರ್ಶನಕ್ಕೆ ತಡೆ

ಉಡುಪಿ: ಜೂನ್ 1 ರಿಂದ ದೇವಾಲಯಗಳಲ್ಲಿ ಭಕ್ತರು ದೇವರ ದರ್ಶನ ಪಡೆಯಬಹುದು ಎಂದು ಸರ್ಕಾರ ಅವಕಾಶ ನೀಡಿದ್ದರೂ ಉಡುಪಿ ಕೃಷ್ಣ ಮಠದಲ್ಲಿ ಇನ್ನೂ 15 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶವಿಲ್ಲ ಎಂದು ಪರ್ಯಾಯ ಅದಮಾರು ಮಠ ತಿಳಿಸಿದೆ. ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಶ್ರೀ ಈಶಪ್ರಿಯ ತೀರ್ಥರು ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಮುಂದಿನ 10-15 ದಿನದಲ್ಲಿ ಪರಿಸ್ಥಿ ಅವಲೋಕಿಸಿ ನಂತರ ಭಕ್ತರ ದರ್ಶನಕ್ಕೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಶ್ರೀಕೃಷ್ಣ ಮಠದಲ್ಲಿ ಅಷ್ಟ ಮಠದ ಯತಿಗಳೇ ಪೂಜೆ ನಡೆಸುವ ಕ್ರಮ ಇದೆ. ಹಾಗಾಗಿ ಒಳಗಿನವರಿಗೆ ಏನಾದರೂ ತೊಂದರೆ ಆದರೆ ಪದ್ಧತಿಗೆ ಭಂಗ ಬರುವಂತಹ ಸಂದರ್ಭಗಳು ಇರುತ್ತವೆ. ಹಾಗಾಗಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಪಕ್ಷಾಂತರ ವಿಷಯದಲ್ಲಿ ಸ್ಪೀಕರ್ ನಿರ್ಣಯ ಅಂತಿಮ

Thu May 28 , 2020
ಪಕ್ಷಾಂತರ ವಿಷಯದಲ್ಲಿ ಸ್ಪೀಕರ್ ನಿರ್ಣಯವೇ ಅಂತಿಮವಾಗಬೇಕು. ಈ ವಿಷಯದಲ್ಲಿ ಸ್ಪೀಕರಿಗೆ ಸಂಪೂರ್ಣ ಅಧಿಕಾರ ಕೊಡಬೇಕು. ಜೊತೆಗೆ ಇಂತಹ ಕೇಸ್‌ಗಳು ಮೂರು ತಿಂಗಳ ಒಳಗೆ ಇತ್ಯರ್ಥ ಆಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.  ಸಂವಿಧಾನದ ಪರಿಚ್ಚೇದ ೧೦ಕ್ಕೆ ತಿದ್ದುಪಡಿ ತರುವ ವಿಚಾರವಾಗಿ ವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ವಿಶೇಷ ಚರ್ಚಾ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿ ನಮ್ಮ ಅಭಿಪ್ರಾಯವನ್ನ ಸ್ಪೀಕರ್‌ಗೆ ಹೇಳಿದ್ದೇವೆ. ಯಾರೇ ಪಕ್ಷಾಂತರಿಗಳು ಆದರೂ […]

Advertisement

Wordpress Social Share Plugin powered by Ultimatelysocial