ಕೊರೊನಾ ವೈರಸ್ ಹರಡುವ ಪ್ರಮಾಣ ತಿಳಿಯುವ ಯಂತ್ರ ಸಿದ್ಧ

ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಿಳಿಸುವ ಯಂತ್ರವನ್ನು ಐಐಟಿ ಸಂಶೋಧಕರು ತಯಾರಿಸಿದ್ದಾರೆ. ದೆಹಲಿ ಐಐಟಿಯ ಪ್ರೊಫೆಸರ್ ಅನೂಪ್ ಕೃಷ್ಣನ್ ಮತ್ತು ತಂಡ ಸೇರಿಕೊಂಡು ಪ್ರಕ್ರಿತಿ(pracriti) ವೆಬ್ ಆಧಾರಿತ ಡ್ಯಾಶ್‌ಬೋರ್ಡ್ಅನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಆರೋಗ್ಯ ಸಚಿವಾಲಯ, ಡಬ್ಲ್ಯೂಹೆಚ್‌ಒ, ಸರ್ಕಾರ ನೀಡಿದ ಮಾಹಿತಿ ಮೇರೆಗೆ ರಾಜ್ಯ ಹಾಗೂ ಜಿಲ್ಲೆಗಳನುಸಾರ ಕೊರೊನಾ ಸೋಂಕಿತರ ಪ್ರಮಾಣ ದರವನ್ನು ಪತ್ತೆ ಹಚ್ಚಬಹುದಾಗಿದೆ.  ಪ್ರಕ್ರಿತಿ ಎಂದರೆ ಪ್ರಿಡಿಕ್ಷನ್ ಅಂಡ್ ಅಸೆಸ್‌ಮೆಂಟ್ ಆಫ್ ಕೊರೊನಾ ಇನ್ಫೇಕ್ಷನ್ಸ್ ಅಂಡ್ ಟ್ರಾನ್ಸ್ಮಿಷನ್ ಇನ್ ಇಂಡಿಯಾ ಅಂದರೆ ಭಾರತದ ಕೊರೊನಾ ಸೋಂಕು ಮತ್ತು ಹರಡುವಿಕೆಯ ಮನ್ಸೂಚನೆ ಮತ್ತು ಮೌಲ್ಯಮಾಪನ ಪತ್ತೆ ಹಚ್ಚುವ ವೆಬ್ ಆಧಾರಿತ ಡ್ಯಾಶ್‌ಬೋರ್ಡ್. ಈ ಮೂಲಕ ಯಾವುದೇ ಸ್ಥಳದ ಸೋಂಕಿನ ಪ್ರಮಾಣ ದರವನ್ನು ಗ್ರಹಿಸಬಹುದು, ಇದರಿಂದ ಸೋಂಕಿತರ ಸಂಖ್ಯೆ ಹೆಚ್ಚಿರುವ ಜಿಲ್ಲೆ ಅಥವಾ ರಾಜ್ಯ ಗುರುತಿಸಿ ಎಚ್ಚರಿಕೆವಹಿಸಬಹುದು.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾದಿಂದ ಹೆಚ್ಚಿದ ಸಾವಿನ ಸಂಖ್ಯೆ

Sun Apr 26 , 2020
ಪ್ಯಾರಿಸ್: ಡೆಡ್ಲಿ ಕೊರೊನಾದಿಂದ ಜಗತ್ತಿನ ೧೯೩ ದೇಶಗಳಲ್ಲಿ ೨೮,೬೪,೦೭೦ಕ್ಕಿಂತಲೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ ಕೊರೊನಾ ಸೋಂಕಿನಿAದ ಮೃತಪಟ್ಟವರ ಸಂಖ್ಯೆ ೨೦೦,೭೩೬ಕ್ಕೆ ಏರಿಕೆಯಾಗಿದ್ದು, ೭೭೨,೯೦೦ಜನ ಸೋಂಕಿತರು ಗುಣಮುಖರಾಗಿದ್ದಾರೆ.  ವಿಶ್ವದಲ್ಲಿ ಕೊರೊನಾದಿಂದಾಗಿ ಅಮೆರಿಕದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ಎರಡನೇ ಸ್ಥಾನದಲ್ಲಿ ಇಟಲಿ ಇದೆ. ಚೀನಾದಲ್ಲಿ ಒಟ್ಟು ೮೨,೮೧೬ ಪ್ರಕರಣಗಳು ವರದಿಯಾಗಿದ್ದು, ೪,೬೩೨ಜನ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. Please follow and […]

Advertisement

Wordpress Social Share Plugin powered by Ultimatelysocial