ಅರ್ಜೆಂಟೀನಾ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಿಳಿಯ ಮಾತನ್ನು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿಸಿರುವ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. 46 ವರ್ಷದ ಎಲಿಜಬೆತ್ ಎಂಬ ಮಹಿಳೆ 2018ರ ಡಿಸೆಂಬರ್ನಲ್ಲಿ ಕೊಲೆಯಾಗಿದ್ದರು. ಅಪರಾಧ ಸ್ಥಳವನ್ನು ಹುಡುಕುತ್ತಿದ್ದ ಪೊಲೀಸರಿಗೆ ಅವರ ಮನೆಯಲ್ಲಿದ್ದ ಗಿಳಿಯ ಮಾತು ಸುಳಿವೊಂದನ್ನು ನೀಡಿತ್ತು. ಗಿಳಿಯು ತನ್ನ ಮಾಲೀಕರ ಕೊನೆಯ ಮಾತುಗಳನ್ನು ಪುನರಾವರ್ತಿಸುತ್ತಿತ್ತು. ಇದನ್ನು ಪೊಲೀಸರು ನಂಬಿದ್ದಾರೆ. ಜತೆಗೆ ನೆರೆ ಮನೆಯವರೂ ಸಹ ಗಿಳಿಯ ಮಾತನ್ನು ಪುನರುಚ್ಛರಿಸಿದ್ದಾರೆ. At, no, pot favour.. ಎಂದು ಗಿಳಿ ಉಲ್ಲೇಖಿಸಿತ್ತಂತೆ. ಎಲಿಜಬೆತ್ ಅವರು ತಮ್ಮಮನೆಯಲ್ಲಿ ಮೂವರಿಗೆ ಒಂದು ಕೊಠಡಿ ಬಾಡಿಗೆ ನೀಡಿದ್ದರಂತೆ. ಈ ರೂಮ್ ಮೇಟ್ ಗಳನ್ನು ಪೊಲೀಸರು ಬಂಧಿಸಿದ್ದರು. ವಿಶೇಷವೆಂದರೆ ಗಿಳಿಯ ಸಾಕ್ಷ್ಯವನ್ನು ಪ್ರಕರಣದ ಕಡತದಲ್ಲಿ ಪ್ರಾಸಿಕ್ಯೂಟರ್ ದಾಖಲು ಮಾಡಿದ್ದಾರೆ.
ಕೊಲೆ ಪ್ರಕರದಲ್ಲಿ ಸಾಕ್ಷಿಯಾದ ಅರಗಿಣಿ

Please follow and like us: