ಕ್ವಾರಂಟೈನ್ ನಲ್ಲೂ ಬೆಳಗಿದ ಜ್ಞಾನ ದೇಗುಲ

ಪಾಟ್ನಾ:ಬಿಹಾರದ ಬಾಗಾಹಾದ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರುವ ವಲಸೆ ಕಾರ್ಮಿಕರು ಶಾಲೆಗೆ ಬಣ್ಣ ಬಳಿದು, ಚಿತ್ರ ಬಿಡಿಸಿ ಸುಂದರವಾಗಿಸಿದ್ದಾರೆ. ನೇಪಾಳದಿಂದ ಹಿಂದಿರುಗಿದ ರಾಂಪುರ್ವಾ ಪಂಚಾಯತ್‌ನ ಲಕ್ಷ್ಮಿಪುರ ಸರ್ಕಾರಿ ಮಧ್ಯಮ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರುವ ಸುಮಾರು ೫೨ ಕಾರ್ಮಿಕರು ತಮ್ಮ ಬಿಡುವಿನ ವೇಳೆಯಲ್ಲಿ ಬಣ್ಣ ಬಳಿಯುವ ಮೂಲಕ ಶಾಲೆಯನ್ನು ನವೀಕರಿಸಿದ್ದಾರೆ. ಸಾಮಾಜಿಕ ಅಂತರ ಪಾಲಿಸೊಕೊಂಡೇ, ಕಾರ್ಮಿಕರು ಕ್ಯಾಂಪಸ್ ಹಾಗೂ ಆಟದ ಮೈದಾನವನ್ನು ಸ್ವಚ್ಛಗೊಳಿಸಿ, ಶಾಲೆಯ ಆವರಣದಲ್ಲಿ ತರಕಾರಿ ಮತ್ತು ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ಬಳಿಕ ಶಾಲೆಯ ಗೋಡೆಗಳಿಗೆ ಬಣ್ಣ ಬಳಿದಿದ್ದಾರೆ.”ಕೇವಲ ಕುಳಿತು ತಿನ್ನುವುದರ ಬದಲು, ನಾವು ಶಾಲೆಯನ್ನು ಸುಂದರವಾಗಿಸಿದ್ದೇವೆ. ಗಿಡ ನೆಟ್ಟಿರುವುದರಿಂದ ಭವಿಷ್ಯದಲ್ಲಿ ಅದು ಶಾಲಾ ವಿದ್ಯಾರ್ಥಿಗಳಿಗೆ ಫಲ ನೀಡಲಿದೆ” ಎಂದು ಕಾರ್ಮಿಕರು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬುಟ್ಟ ಬೊಮ್ಮ ಹಾಡಿಗೆ ಡೇವಿಡ್ ವಾರ್ನರ್ ಸಖತ್ ಸ್ಟೇಪ್ಸ್

Fri May 1 , 2020
ವಿಶ್ವದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನೂ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ಸ್ಟಾರ್ ಓಪನರ್ ಡೇವಿಡ್ ವರ‍್ನರ್, ತಮ್ಮ ಟಿಕ್ ಟಾಕ್ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.  ಇತ್ತಿಚೆಗಷ್ಟೇ ತಮ್ಮ ಮಗಳಿಗಾಗಿ ಅಧಿಕೃತವಾಗಿ ಟಿಕ್ಟಾಕ್ ಆಪ್ಗೆ ಪಾದರ‍್ಪಣೆ ಮಾಡಿದ್ದ ಎಡಗೈ ಬ್ಯಾಟ್ಸ್ಮನ್ ವರ‍್ನರ್, ಹಲವು ಡ್ಯಾನ್ಸ್ ಗಳ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅದರಲ್ಲಿ ಭಾರತೀಯ ಹಾಡುಗಳೂ ಸೇರಿವೆ. ಐಪಿಎಲ್ ನಲ್ಲಿ ಸನ್ರೈರ‍್ಸ್ […]

Advertisement

Wordpress Social Share Plugin powered by Ultimatelysocial