ಖಾಸಗಿ ಆಸ್ಪತ್ರೆ ಬಂದ್ ಹಿನ್ನೆಲೆ ಗರ್ಭಿಣಿ ಸಾವು

ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆ ಲಾಕ್‌ ಡೌನ್ ಜಾರಿಗೊಳಿಸಿದೆ, ನಗರದಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದು, ಚಿಕಿತ್ಸೆ ಸಿಗದೆ ಗರ್ಭಿಣಿ ಸಾವನ್ನಪ್ಪಿದ ಘಟನೆ‌ ಬುಧವಾರ ನಡೆದಿದೆ. ಕಡಪಟ್ಟಿ ಗ್ರಾಮದ ನಿವಾಸಿ ರೂಪಾ ಶಿವಾನಂದ ಹೊಸಮನಿ(23) ಮೃತ ಗರ್ಭಿಣಿ. ಕೊರೊನಾ ಹಿನ್ನೆಲೆ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಖಾಸಗಿ ಆಸ್ಪತ್ರೆ ವೈದ್ಯರ ಹಿಂದೇಟು ಹಾಕುತ್ತಿದ್ದಾರೆ.  ಆಂಬುಲೆನ್ಸ್ ನಲ್ಲಿ ಗರ್ಭಿಣಿಯನ್ನು ಹೊತ್ತು  ವಿವಿಧ ಖಾಸಗಿ ಆಸ್ಪತ್ರೆಗೆ ಸಂಬಂಧಿಕರ ಅಲೆದಾಟ ನಡೆಸಿದ್ದಾರೆ. ಆದ್ರೆ‌ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕದ ಕಾರಣ ಕೊನೆಗೆ ಮಹಿಳೆಯನ್ನು ಜಮಖಂಡಿ ತಾಲ್ಲೂಕಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು,  ಪ್ರಾಥಮಿಕ ಚಿಕಿತ್ಸೆ ನೀಡಿ ವಿಜಯಪುರ ಖಾಸಗಿ ಆಸ್ಪತ್ರಗೆ ಹೊರಟ ವೇಳೆ ಜಮಖಂಡಿ ಹೊರವಲಯದಲ್ಲಿ ಗರ್ಭಿಣಿ ಕೊನೆಯುಸಿರೆಳೆದಿದ್ದಾರೆ. ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ

 

 

Please follow and like us:

Leave a Reply

Your email address will not be published. Required fields are marked *

Next Post

ದಾಖಲೆಯ ಮಟ್ಟದಲ್ಲಿ ವಾಯು ಮಾಲಿನ್ಯ ನಿಯಂತ್ರಣ..!

Thu Apr 23 , 2020
ವಾಷಿಂಗ್ಟನ್: ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್ ಹಿನ್ನಲೆಯಲ್ಲಿ ಉತ್ತರ ಭಾರತದಲ್ಲಿ ಏರೋಸಾಲ್ ಪ್ರಮಾಣ ೨೦ ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ನಾಸಾ ಹೇಳಿದೆ. ನಾಸಾದ ಸ್ಯಾಟಲೈಟ್ ಸೆನ್ಸಾರ್‌ನಲ್ಲಿ ಇದು ಪತ್ತೆಯಾಗಿದ್ದು, ಕಳೆದ ೨೦ ವರ್ಷಗಳಲ್ಲಿ ಭಾರತದಲ್ಲಿ ಏರೋಸಾಲ್ ಪ್ರಮಾಣ ಇಷ್ಟು ಕಡಿಮೆ ಆಗಿರಲಿಲ್ಲ. ಈಗ ಲಾಕ್‌ಡೌನ್ ಇರುವುದರಿಂದಾಗಿ ಫ್ಯಾಕ್ಟರಿಗಳು ಬಂದಾಗಿವೆ, ಬಸ್, ಕಾರು, ಟ್ರಕ್, ವಿಮಾನಗಳ ಸಂಚಾರ ಕೂಡ ಕಡಿಮೆಗೊಂಡಿರುವುದರಿಂದ ಇಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯ ಕಡಿಮೆಯಾಗಲು ಸಾಧ್ಯವಾಗಿದೆ ಎಂದು ನಾಸಾ ಹೇಳಿದೆ. […]

Advertisement

Wordpress Social Share Plugin powered by Ultimatelysocial