ಜಪಾನ್ ಪ್ರಧಾನಿ ಕೊಟ್ಟ ಉಚಿತ ಮಾಸ್ಕ್ ಗುಣಮಟ್ಟದ ಬಗ್ಗೆ ಟೀಕೆ

ಟೋಕಿಯೋ (ಜಪಾನ್): ಅಪಹಾಸ್ಯ ಹಾಗೂ ಟೀಕೆಯ ಕಾರಣದಿಂದಾಗಿ ಜಪಾನ್ ಸರ್ಕಾರವು ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ನಿಲ್ಲಿಸಿದೆ. ಜಪಾನ್ ಪ್ರಧಾನಿ ಶಿಂಜೊ ಅಬೆ ಪ್ರಾರಂಭಿಸಿದ ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ಪ್ರಶ್ನಿಸಲು ಆರಂಭಿಸಿದ ಜನ, “ಅಬೆನೊಮಾಸ್ಕ್” ಎಂದು ಗೇಲಿ ಮಾಡಲು ಪ್ರಾರಂಭಿಸಿದ್ದರು.ಒಬ್ಬರಿಗೆ ಒಂದು ಮಾಸ್ಕ್ ಕೊಡುವ ಬದಲು, ಒಂದು ಮನೆಗೆ ೨ ಮಾಸ್ಕ್ ಕೊಡುವ ಕ್ರಮವನ್ನು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು ಮಾಸ್ಕ್ನ ಗುಣಮಟ್ಟ ಹಾಗೂ ಪರಿಣಾಮವನ್ನು ಅನುಮಾನಿಸಿದರು.ಮಾಸ್ಕ್ಗಳು ಬಟ್ಟೆಯಿಂದ ಮಾಡಲ್ಪಟ್ಟಿದ್ದು, ಮೂಗು ಅಥವಾ ಮುಖದ ಕೆಳಭಾಗವನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ ಎಂದು ಜನರು ಆರೋಪಿಸಿದರು. ಶಿಂಜೊ ಅಬೆ ಸ್ವತಃ ಮಾಸ್ಕ್ ಧರಿಸಿ ಕಾಣಿಸಿಕೊಂಡರೂ, ಅದರ ಕುರಿತು ಹಲವು ಜೋಕ್ ಹಾಗೂ ಮೀಮ್‌ಗಳು ಸೃಷ್ಟಿಯಾದವು. ಹೀಗಾಗಿ ಜಪಾನ್ ಸರ್ಕಾರವು ಮಾಸ್ಕ್ ವಿತರಣಾ ಕಾರ್ಯವನ್ನು ನಿಲ್ಲಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ದೇಶಕ್ಕೆ ೪೦ ಪದಕ ತಂದ್ಕೊಟ್ಟ ಖೋ ಖೋ ತಂಡದ ನಾಯಕಿ ಊಟಕ್ಕಿರದೆ ಪರದಾಟ!!

Wed Apr 29 , 2020
ನವದೆಹಲಿ : ಭಾರತ ಖೋ ಖೋ ತಂಡದ ನಾಯಕಿ ಲಾಕ್‌ಡೌನ್‌ನಿಂದಾಗಿ ಆಹಾರ ಸಮಸ್ಯೆ ಎದುರಿಸುತ್ತಿದ್ದು, ನೆರವಿಗೆ ಬರುವಂತೆ ಸರ್ಕಾರಕ್ಕೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೌತ್ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದ ನಾಯಕಿ ನಸ್ರೀನ್ ಶೇಖ್ ತಮ್ಮ ಅಸಹಾಯಕತೆಯನ್ನು ವಿಡಿಯೋ ಮೂಲಕ ಹೊರ ಹಾಕಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಪಾತ್ರೆಗಳ ಮಾರಾಟ ಮಾಡುತ್ತಿದ್ದ ಅವರ ತಂದೆ ಮೊಹಮ್ಮದ್ ಗಫೋರ್ ವ್ಯಾಪಾರವಿಲ್ಲದೆ ಮನೆಯಲ್ಲಿದ್ದಾರೆ. ಇದರಿಂದ ಹಣಕಾಸಿನ ಸಮಸ್ಯೆ […]

Advertisement

Wordpress Social Share Plugin powered by Ultimatelysocial