ತವರಿಗೆ ಮರಳಿದ ಸಾಕಾನೆಗಳು

ಬ್ಯಾಂಕಾಕ್ : ಕೊರೊನಾ ಸೋಂಕು ಕಾರಣದಿಂದಾಗಿ ಥೈಲ್ಯಾಂಡ್‌ನಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ಉದ್ಭವಿಸಿದೆ. ಮನುಷ್ಯರಿಗಷ್ಟೇ ಅಲ್ಲ, ಆನೆಗಳಿಗೂ ಈ ಕೊರೊನಾ ಬಿಸಿ ತಟ್ಟಿದೆ ಅಂರೆ ತಪ್ಪಾಗಲಾರದು. ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಪ್ರವಾಸಿಗರನ್ನು ಅವಲಂಭಿಸಿರುವ ಆನೆಗಳು ಈಗ ಹಸಿವಿನಿಂದ ತೊಂದರೆಗೊಳಗಾಗಿವೆ. ಈ ಹಿನ್ನೆಲೆ ಅವುಗಳನ್ನು ಮತ್ತೇ ತಮ್ಮ ನೈಸರ್ಗಿಕ ವಾಸಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ೧೦೦ಕ್ಕೂ ಹೆಚ್ಚು ಪ್ರಾಣಿಗಳನ್ನು ೧೫೦ ಕಿ.ಮೀ(೯೫ ಮೈಲಿ) ದೂರದ ತಮ್ಮ ಮೂಲ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಉತ್ತರ ಪ್ರಾಂತ್ಯದ ಚಿಯಾಂಗ್ ಮಾಯ್‌ನಲ್ಲಿರುವ ಸೇವ್ ಎಲಿಫೆಂಟ್ ಫೌಂಡೇಶನ್ ಆನೆಗಳ ಈ ಸ್ಥಿತಿ ಕಂಡು ಈ ನಿರ್ಧಾರ ಮಾಡಲಾಗಿದೆ. ಪ್ರವಾಸಿ ಉದ್ಯಾನವನಗಳಲ್ಲಿರುವ ಈ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗಿದ್ದರಿಂದ ಅವುಗಳನ್ನು ನೈಸರ್ಗಿಕ ಅವಾಸಸ್ಥಾನಕ್ಕೆ ಕಳುಹಿಸಿವುದು ಒಳ್ಳೆಯದು ಎಂಬ ನಿರ್ಧಾರವನ್ನು ಮಾಡಿದೆ. ಆನೆಗಳ ಮಾಲೀಕರು ಆನೆಗಳಿಗೆ ಸರಿಯಾದ ಆಹಾರವನ್ನು ಒದಗಿಸಲು ಆಗದ ಹಿನ್ನೆಲೆ ೨,೦೦೦ ಪಳಗಿದ ಆನೆಗಳು ಹಸಿವಿನಿಂದ ಬಳಲುತ್ತಿವೆ ಎಂದು ಲಂಡನ್ ಮೂಲದ ವರ್ಲ್ಡ್ ಅನಿಮಲ್ ಪ್ರೊಟೆಕ್ಷನ್ ಸಂಸ್ಥೆ ಹೇಳಿದೆ. ಕಳೆದ ತಿಂಗಳಿನಿಂದ ೧೦೦ಕ್ಕೂ ಹೆಚ್ಚು ಆನೆಗಳು ಚಿಯಾಂಗ್ ಮಾಯ್‌ನ ಹಲವು ಕಡೆಯಿಂದ ತಮ್ಮ ಆವಾಸಸ್ಥಾನಗಳಿಗೆ ತೆರಳಿವೆ

Please follow and like us:

Leave a Reply

Your email address will not be published. Required fields are marked *

Next Post

ವಿಷಾನಿಲ ದುರಂತ: ಮೃತರಿಗೆ ೧ ಕೋಟಿ, ತೀವ್ರ ಅಸ್ವಸ್ಥರಿಗೆ ೧೦ಲಕ್ಷ ಪರಿಹಾರ

Thu May 7 , 2020
ವಿಶಾಖ ಪಟ್ಟಣ : ವಿಶಾಖ ಪಟ್ಟಣಂನ ಗೋಪಾಲಪಟ್ಟಣದ ನಾಯ್ಡು ತೋಟಾ ಸಮೀಪದಲ್ಲಿನ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ಇಂದು ಮುಂಜಾನೆ ಸುಮಾರು ೩ ಗಂಟೆಗೆ ವಿಷಾನಿಲ ಸೋರಿಕೆಯಾದ ಪರಿಣಾಮ, ೧೩ ಜನರು ಸಾವನ್ನಪ್ಪಿದ್ದರು. ೩೦೦ಕ್ಕೆ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಇದೀಗ ಆಂಧ್ರಪ್ರದೇಶ ಸರ್ಕಾರ ಮೃತರಿಗೆ ೧ ಕೋಟಿ, ತೀವ್ರವಾಗಿ ಅಸ್ವಸ್ಥಗೊಂಡವರಿಗೆ ೧೦ ಲಕ್ಷ ಪರಿಹಾರವನ್ನು ಘೋಷಣೆ ಮಾಡಿದೆ. ಈ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ […]

Advertisement

Wordpress Social Share Plugin powered by Ultimatelysocial