ಪವರ್ ಸ್ಟಾರ್ ವರ್ಕೌಟ್​ ಹೇಗಿದೆ ಗೊತ್ತಾ..!

ಕನ್ನಡದ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ಈಗಲೂ ತುಂಬ ಎರ‍್ಜಿಟಿಕ್. ವಯಸ್ಸು ೪೫ ಆದರೂ, ಇಂದಿಗೂ ಚರ‍್ಮಿಂಗ್​ ಮತ್ತು ಸದಾ ಆ್ಯಕ್ಟೀವ್. ಅದಕ್ಕೆ ಕಾರಣ ಅವರ ನಿತ್ಯದ ಜೀವನ ಶೈಲಿ. ಪುನೀತ್​ ಅತ್ಯುತ್ತಮ ಡಾನ್ಸರ್​ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತು. ಆ ಡಾನ್ಸ್​ನಿಂದಲೇ ಪುನೀತ್​ ಈಗಲೂ ಯಂಗ್​ ಆಗಿದ್ದಾರೆ. ಈ ಹಿಂದೆ ಸಂರ‍್ಶನವೊಂದರಲ್ಲಿ ಅವರೇ ಈ ಸತ್ಯವನ್ನು ಬಾಯ್ಬಿಟ್ಟಿದ್ದರು. ನನ್ನ ಫಿಟ್​ನೆಸ್​ಗೆ ಡಾನ್ಸ್ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದೀಗ ಡಾನ್ಸ್ ಬದಲು ಅವರ ರ‍್ಕೌಟ್​ ಸ್ಟೈಲ್​ ಹೇಗಿರುತ್ತದೆ.  ಪುನೀತ್​ ಹೇಗೆಲ್ಲ ರ‍್ಕೌಟ್​ ಮಾಡ್ತಾರೆ?  ಜಿಮ್​ನಲ್ಲಿ ಅವರ ಇಷ್ಟದ ವ್ಯಾಯಾಮ ಯಾವುದು? ಅಭಿಮಾನಿ ವಲಯದಲ್ಲಿ ಹೀಗೆ ಬಗೆಬಗೆ ಪ್ರಶ್ನೆಗಳಿರುತ್ತವೆ. ಆ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರವಿದೆ. ಮನೆಯಲ್ಲಿಯೇ ಇರುವ ಜಿಮ್​ನಲ್ಲಿ ಪುನೀತ್​ ಬೆವರಿಳಿಸುತ್ತಿದ್ದಾರೆ.

ಈ ಹಿಂದೆ ಕಿಕ್​ ಬಾಕ್ಸಿಂಗ್​, ಲೆಗ್​ ಪಂಚಿಂಗ್​, ಸ್ಕಿಪ್ಪಿಂಗ್​ ಮಾಡುವ ವಿಡಿಯೋ ಹಂಚಿಕೊಂಡಿದ್ದರು. ಈಗ ಸಿಕ್ಸ್ ಪ್ಯಾಕ್​ ರ‍್ಕೌಟ್​ ಮತ್ತು ಬೆಲ್ಲಿ ಫ್ಯಾಟ್​ ರ‍್ನಿಂಗ್​ ಹೇಗೆ ಮಾಡುವುದು ಎಂಬುದನ್ನು ಹೇಳಿಕೊಟ್ಟಿದ್ದಾರೆ. ‘ಕಿಲ್ಲಿಂಗ್​ ಮಂಡೇ ಮರ‍್ನಿಂಗ್​ ಬ್ಲೂಸ್​’ ಎಂದು ಬರೆದುಕೊಂಡಿದ್ದಾರೆ. ಈ ರೀತಿಯ ವಿಡಿಯೋ ಶೇರ್​ ಮಾಡಿದ್ದಕ್ಕೆ, ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ನಿಮ್ಮ ಈ ವಿಡಿಯೋ ನಮಗೂ ಸ್ಫರ‍್ತಿಯಾಗಲಿದೆ ಎಂದು ಕೆಲವರು ಹೇಳಿದರೆ, ಪವರ್ ಆಫ್​ ಫಿಟ್​ನೆಸ್​ ಎಂದು ಮತ್ತೊಂದಿಷ್ಟು ಮಂದಿ ಕಮೆಂಟಿಸಿದ್ದಾರೆ. ಸದ್ಯ ಲಾಕ್​ಡೌನ್​ ಹಿನ್ನೆಲೆಯಲ್ಲಿ ಪುನೀತ್​ ಫಿಟ್​ನೆಸ್​ ಕುರಿತ ಇದ್ದ ಅಭಿಮಾನಿಗಳ ಕುತೂಹಲವನ್ನು ಪವರ್​ಸ್ಟಾರ್ ತಣಿಸುತ್ತಿದ್ದಾರೆ. ಲಾಕ್​ಡೌನ್​ ತೆರವಾಗಿ ಶೂಟಿಂಗ್​ಗೆ ಅನುಮತಿ ಸಿಗುತ್ತಿದ್ದಂತೆ ‘ಯುವರತ್ನ’ ಮತ್ತು ‘ಜೇಮ್ಸ್’ ಸಿನಿಮಾಗಳ ಕೆಲಸಗಳಲ್ಲಿಯೂ ಅವರು ಬಿಜಿಯಾಗಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಂತೆ ಹಾಸ್ಯನಟ…!

Tue May 5 , 2020
ತೆಲುಗು ಚಿತ್ರರಂಗದ ಖ್ಯಾತ ಪೊಷಕರ ನಟಿಯರಲ್ಲೊಬ್ಬರಾದ ಪ್ರಗತಿ ಶಾಕಿಂಗ್ ವಿಷಯವನ್ನು ಹೊರಹಾಕಿದ್ದಾರೆ. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ, ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ. ಕಿರುತೆರೆಯಲ್ಲಿಯೂ ಹೆಸರು ಮಾಡಿರುವ ಪ್ರಗತಿ ದೊಡ್ಡ ಹಾಸ್ಯ ನಟರೊಬ್ಬರ ಮೇಲೆ ಅಪಾದನೆ ಹೊರಿಸಿದ್ದಾರೆ. ಪ್ರಗತಿ ಹೇಳಿರುವ ವಿಷಯ ಪ್ರಸ್ತುತ ಸಂಚಲನ ಸೃಷ್ಟಿಸಿದ್ದು, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆ ಹಿರಿಯ ನಟ ಯಾರು ಎಂಬ ಚರ್ಚೆ ಆರಂಭವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತೆಲುಗು ಸಿನಿ ರಂಗದಲ್ಲಿ ಹೆಸರು ಮಾಡಿರುವ ಖ್ಯಾತ […]

Advertisement

Wordpress Social Share Plugin powered by Ultimatelysocial