ಮಂಡ್ಯದ ಮೈಶುಗರ್ ಕಾರ್ಖಾನೆ ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾದರೆ ಹೋರಾಟ ನಡೆಸಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿದ ಅವರು, ಜನರಿಗೂ ಮೈಶುಗರ್ ಕಾರ್ಖಾನೆಗೂ ಇರುವ ಬಾಂಧವ್ಯದ ಬೆಸುಗೆ ಇಂದು ನಿನ್ನೆಯದಲ್ಲ. ಹೀಗಿರುವಾಗ ನ್ಯೂನತೆ ಸರಿಪಡಿಸಿ ಸರ್ಕಾರವೇ ಕಾರ್ಖಾನೆಯನ್ನು ನಡೆಸಬೇಕು. ಅದನ್ನು ಬಿಟ್ಟು ಮಾರಾಟ ಮಾಡುವುದು ಸರಿಯಲ್ಲ. ಅದಕ್ಕೆ ಬಿಡುವುದೂ ಇಲ್ಲ. ಈ ವಿಚಾರದಲ್ಲಿ ಮಂಡ್ಯ ರೈತರ ಪರ ಹೋರಾಟಕ್ಕೆ ಸಿದ್ಧ ಎಂದಿದ್ದಾರೆ. ಸರ್ಕಾರದ ನಡೆಯನ್ನು ಜೆಡಿಎಸ್ ಕೂಡಾ ಖಂಡಿಸಿದೆ. ಕಾರ್ಖಾನೆಯನ್ನು ಮಾರಾಟ ಮಾಡಲು ಮುಂದಾಗುವುದು ರೈತ ವಿರೋಧಿ ನಡೆ ಎಂದಿದೆ. ಮಂಡ್ಯದಲ್ಲಿ ರೈತ ಮುಖಂಡರೂ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಮಂಡ್ಯ ಶುಗರ್ ಕಾರ್ಖಾನೆ ಮಾರಾಟ ಬೇಡ: ಡಿಕೆಶಿ ಎಚ್ಚರಿಕೆ

Please follow and like us: