ಕೊರೊನಾ ಲಾಕ್ಡೌನ್ ಹಂತದಲ್ಲಿ ಎಲ್ಕೆಜಿ, ಯುಕೆಜಿ ಸೇರಿದಂತೆ ಎಲ್ಲಾ ಶಾಲೆಗಳು, ವಿದ್ಯರ್ಥಿಗಳಿಗೆ ಆನ್ಲೈನಲ್ಲಿ ಪಾಠ ಪ್ರವಚನ ನಡೆಸುತ್ತಿರುವುದನ್ನು ನಿಮ್ಹಾನ್ಸ್ ವಿರೋಧಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನ್ವಯ ೬ ರ್ಷ ಒಳಪಟ್ಟ ಮಕ್ಕಳು ಒಂದು ಗಂಟೆಗಿಂತ ಅಧಿಕ ಸಮಯ ಡಿಜಿಟಲ್ ಸ್ಕ್ರೀನ್ಗಳನ್ನು ನೋಡಬಾರದು. ಇದರಿಂದ ಮಕ್ಕಳ ಕಣ್ಣುಗಳಿಗೆ ಪರಿಣಾಮ ಬೀರುವುದರ ಜತೆಗೆ, ಅವರನ್ನು ದೈಹಿಕ ಮತ್ತು ಮಾನಸಿಕವಾಗಿಯೂ ತೊಂದರೆಗೀಡು ಮಾಡುತ್ತದೆ. ಆದ್ದರಿಂದ ೬ ರ್ಷದ ಒಳಗಿನ ಮಕ್ಕಳನ್ನು ಆನ್ಲೈನ್, ಸ್ಕ್ರೀನ್ ಆಧಾರಿತ ಶಿಕ್ಷಣ ಅಥವಾ ತರಬೇತಿಯಿಂದ ಆದಷ್ಟು ದೂರ ಇಡುವುದು ತುಂಬಾ ಒಳ್ಳೆಯದೆಂದು ಪ್ರತಿಪಾದಿಸಿದೆ. ಈ ಆನ್ ಲೈನ್ ಶಿಕ್ಷಣ ನೀಡುವ ಪದ್ಧತಿ ಇತ್ತೀಚೆಗೆ ಚಾಲನೆಗೊಂಡಿದೆ. ಅದಲ್ಲದೇ ಎಲ್ಕೆಜಿ ಮತ್ತು ಯುಕೆಜಿ ಸೇರಿದಂತೆ ೬ ರ್ಷ ಒಳಪಟ್ಟಿರುವ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ಕಲಿಸುವ ತರಬೇತಿಯನ್ನು ನಮ್ಮ ಶಿಕ್ಷಕರು ಪಡೆದಿಲ್ಲ, ಹಾಗೆಯೇ ಅಂತಹ ಕಲೆ ಅವರಿಗೆ ತಿಳಿದಿಲ್ಲ. ನಮ್ಮ ಶಿಕ್ಷಕರಿಗೆ ಇಲ್ಲಿವರೆಗೆ ಆನ್ಲೈನ್ನಲ್ಲಿ ಪಾಠ ಮಾಡಿರುವ ಅನುಭವವಿಲ್ಲ. ಈ ಸಂರ್ಭದಲ್ಲಿ ಆನ್ಲೈನ್ ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಪ್ರಯೋಗಕ್ಕೆ ಒಳಪಡಿಸುವುದು ಕ್ರಿಮಿನಲ್ ಅಪರಾಧವಾಗಲಿದೆ,” ಎಂದು ನಿಮ್ಹಾನ್ಸ್ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಿಗೆ ಆನ್ ಲೈನ್ ಪಾಠ ಬೇಡ

Please follow and like us: