ಮತ್ತೆ ಚೀನಾ ಪರ ನಿಂತ WHO

ನ್ಯೂಯಾರ್ಕ್: ಕೊರೊನಾ ವೈರಸ್ ಮಾನವ ನಿರ್ಮಿತ ಇದು ಚೀನಾ ಲ್ಯಾಬ್‌ನಲ್ಲಿಯೇ ಸೃಷ್ಟಿಯಾಗಿದೆ ಎಂದು ಅಮೆರಿಕ ಹೇಳುತ್ತಿದ್ದು, ಆದರೆ ಯಾವುದೇ ಸಾಕ್ಷ್ಯಗಳು ಅವರ ಬಳಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಮೆರಿಕಾದಲ್ಲಿ ನಾವು ಆತಂಕದಿಂದ ಬದುಕ್ತಿದ್ದೀವಿ, ಭಾರತ ನೋಡಿ ಅಮೆರಿಕಾ ಬುದ್ಧಿ ಕಲಿಯಬೇಕು ಎಂದು ಭಾರತೀಯ ಮೂಲದ ಅಮೇರಿಕಾ ನಿವಾಸಿ ಹೇಳಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಕೊರೊನಾ ನೈಸರ್ಗಿಕವೇ ಅಥವಾ ಮಾನವ ನಿರ್ಮಿತವೇ ಎಂಬ ವಾದ ವಿವಾದಗಳು ನಡೆಯುತ್ತಲೇ ಇವೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಮೊದಲಿನಿಂದಲೂ ಕೊರೊನಾ ವೈರಸ್ ವುಹಾನ್‌ನಲ್ಲಿ ಲ್ಯಾಬ್‌ನಲ್ಲಿ ಉತ್ಪಾದಿಸಿ ಬಿಡಲಾಗಿದೆ ಇದು ಮಾನವ ನಿರ್ಮಿತ ಎಂದು ಹೇಳುತ್ತಲೇ ಬಂದಿದ್ದಾರೆ. ಚೀನಾ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಸೃಷ್ಟಿಯಾಗಿದೆ ಎಂಬ ಅಮೆರಿಕಾದ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಊಹಾತ್ಮಕ ಆರೋಪಗಳಿಗೆ ಸಮರ್ಪಕವಾದ ಸಾಕ್ಷ್ಯಾಧಾರಗಳಿಲ್ಲ ಎಂದು ಡಬ್ಲ್ಯುಹೆಚ್‌ಒ ಹೇಳಿದೆ. ಈ ಮೂಲಕ ಕೊರೋನಾಗೆ  ಸಂಬಂಧಿಸಿದಂತೆ ಅಮೆರಿಕ-ವಿಶ್ವಸಂಸ್ಥೆ ನಡುವೆ ನಡೆಯುತ್ತಿದ್ದ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪಿದೆ.


ಕೊರೊನಾ ವೈರಸ್ ಚೀನಾದ ವುಹಾನ್ ಪ್ರಯೋಗಾಲಯದಲ್ಲೇ ಸೃಷ್ಟಿಯಾಗಿದ್ದು ಎಂಬುದಕ್ಕೆ ಅಮೆರಿಕ ಈ ವರೆಗೂ ಸ್ಪಷ್ಟ ದಾಖಲೆಗಳನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕಾ ಹೇಳುತ್ತಿರಿವ ಕೊರೊನಾ ಜನ್ಮ ರಹಸ್ಯ ಈ ವರೆಗೂ ಊಹಾತ್ಮಕವಾಗಿಯೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಅಗತ್ಯತೆಗಳ ವಿಭಾಗದ ನಿರ್ದೇಶಕ ಮೈಕಲ್ ರಿಯಾನ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಚೀನಾದ ಪ್ರಯೋಗಾಲಯದಲ್ಲಿಯೇ ಸೃಷ್ಟಿಯಾದ ವೈರಾಣು ಎಂದು ನಿರಂತರವಾಗಿ ಹೇಳುತ್ತಾ ಬಂದಿದ್ದಾರೆ. ಇತ್ತೀಚೆಗೆ ಕೊರೊನಾ ಸೃಷ್ಟಿಯಾಗಿದ್ದು ಹೇಗೆ ಎಂಬ ಬಗ್ಗೆ ಅಮೆರಿಕ ಸರ್ಕಾರ ತನಿಖೆಯನ್ನೂ ಪ್ರಾರಂಭಿಸಿದ್ದಾಗಿ ಅಧ್ಯಕ್ಷರು ಹೇಳಿದ್ದರು.
ಅಮೆರಿಕ, ಪ್ರತಿವರ್ಷ ೪೦೦ರಿಂದ ೫೦೦ ದಶಲಕ್ಷ ಡಾಲರ್ ಹಣಕಾಸು ಸಹಾಯವನ್ನು ಡಬ್ಲೂö್ಯಹೆಚ್‌ಒಗೆ ಒದಗಿಸುತ್ತಿತ್ತು.ಅಮೆರಿಕಾದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಪಸರಿಸಿದ್ದರೂ ಕೂಡ ಅದರ ಅಪಾಯದ ಬಗ್ಗೆ ಅರಿವಿದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ತಮ್ಮ ದೇಶಕ್ಕೆ ಮುನ್ನೆಚ್ಚರಿಕೆ ನೀಡಿರಲಿಲ್ಲ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ನೇರವಾಗಿಯೇ ತಮ್ಮ ಅಸಮಾಧಾನವನ್ನು ಈ ಹಿಂದೆ ವ್ಯಕ್ತಪಡಿಸಿತ್ತು.

Please follow and like us:

Leave a Reply

Your email address will not be published. Required fields are marked *

Next Post

ಗ್ಲಾಮರಸ್ ನಟಿ ನಿಧಿ ಕ್ರಿಕೆಟಿಗನ ಜೊತೆ ಡೇಟಿಂಗ್?

Tue May 5 , 2020
ಸಿನಿಮಾಗಳಲ್ಲಿ ಬೋಲ್ಡ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಈ ನಟಿ ಲಾಕ್‌ಡೌನ್ ಸಮಯದಲ್ಲಿ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಟೈಂ ಪಾಸ್ ಮಾಡ್ತಿದಾರೆ. ಈ ವೇಳೆ ತಮ್ಮ ವ್ಯಯಕ್ತಿಕ ವಿಷಯಗಳ ಬಗ್ಗೆಯೂ ತುಟಿ ಬಿಚ್ಚಿದ್ದಾರೆ. ತಮ್ಮ ಹಾಟ್‌ಪೋಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುವ ನಿಧಿ ಇನ್ಸಾ÷್ಟಗ್ರಾಂನಲ್ಲಿ ೫ಮಿಲಿಯನ್ ಫಾಲೋವರ್ಸ್ನ್ನು ಹೊಂದಿದ್ದಾರೆ. ಅಷ್ಟೊಂದು ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಗ್ಲಾಮರಸ್ ನಟಿ ಕ್ರಿಕೆಟಿಗ ಕೆ.ಎಲ್. ರಾಹುಲ್ ಜೊತೆ ಡೇಟಿಂಗ್‌ನಲ್ಲಿ ಇದ್ದಾರೆ ಅನ್ನೋ […]

Advertisement

Wordpress Social Share Plugin powered by Ultimatelysocial