ಮಾನವನ ಮೂತ್ರದಿಂದ ಹೊಸ ಉಪಯೋಗ ಕಂಡುಕೊಂಡ ವಿಜ್ಞಾನಿಗಳು…

ಬರ್ಲಿನ್: ಚಂದ್ರನ ಮೇಲೆ ಕಾಂಕ್ರೀಟ್ ತಯಾರಿಸಲು ಮಾನವ ಮೂತ್ರವು ಒಂದು ದಿನ ಉಪಯುಕ್ತ ಘಟಕಾಂಶ ಆಗಲಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮೂತ್ರದಲ್ಲಿನ ಸಂಯುಕ್ತವಾದ ‘ಯೂರಿಯಾ’ವು ಅದರ ಗಟ್ಟಿಮುಟ್ಟಾದ ಅಂತಿಮ ಸ್ವರೂಪ ಗಟ್ಟಿ ಆಗುವ ಮೊದಲು ‘ಚಂದ್ರನ ಕಾಂಕ್ರೀಟ್’ ಗೆ ಉಪಯೋಗಕಾರಿಯಾಗಿದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದರಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ಸಂಸ್ಥೆ ಹೇಳಿದೆ. ಚಂದ್ರನ ಮೇಲ್ಭಾಗದಲ್ಲಿ ಲಭ್ಯವಿರುವ ವಸ್ತುಗಳನ್ನು ಮಾತ್ರ ಬಳಸುವುದರಿಂದ ಭೂಮಿಯಿಂದ ಸರಬರಾಜಾಗುವ ಅಗತ್ಯ ಸರಕುಗಳ ಸಾಗಣೆ ಕಡಿಮೆ ಆಗುತ್ತದೆ ಎಂದಿದೆ. ಒಬ್ಬ ವ್ಯಕ್ತಿಯು ಪ್ರತಿದಿನ ಉತ್ಪಾದಿಸುವ ೧.೫ ಲೀಟರ್ (೩.೨ ಪಿಂಟ್) ದ್ರವ ತ್ಯಾಜ್ಯವು ಬಾಹ್ಯಾಕಾಶ ಪರಿಶೋಧನೆಗೆ ಭರವಸೆಯ ಉಪ ಉತ್ಪನ್ನ ಆಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಭೂಮಿಯ ಮೇಲೂ ಯೂರಿಯಾವನ್ನು ಕೈಗಾರಿಕಾ ಗೊಬ್ಬರವಾಗಿ, ರಾಸಾಯನಿಕ ಮತ್ತು ವೈದ್ಯಕೀಯ ಕಂಪನಿಗಳು ಕಚ್ಚಾ ವಸ್ತುವಾಗಿ ಬಳಸುತ್ತಿವೆ. ಭವಿಷ್ಯದ ಚಂದ್ರನ ನೆಲೆಯಲ್ಲಿ ಇರುವಂತೆ ಗಗನಯಾತ್ರಿ ಮೂತ್ರವನ್ನು ಮೂಲಭೂತವಾಗಿ ಬಳಸಬಹುದೆಂಬುದು ಆಶಯವಾಗಿದೆ. ನೀರಿನ ವಿಷಯದಲ್ಲಿ ಸಣ್ಣ ಹೊಂದಾಣಿಕೆ ಹೊಂದಿದೆ. ಇದು ತುಂಬಾ ಪ್ರಾಯೋಗಿಕವಾಗಿದೆ. ಬಾಹ್ಯಾಕಾಶದಲ್ಲಿನ ಅತ್ಯಾಧುನಿಕ ನೀರಿನ ಮರುಬಳಕೆ ವ್ಯವಸ್ಥೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಅಗತ್ಯವನ್ನು ತಪ್ಪಿಸುತ್ತದೆ ಎಂದು ಅಧ್ಯಯನದ ಸಹ ಲೇಖಕ ಮಾರ್ಲೀಸ್ ಅರ್ನ್ಹೋಫ್ ಇಎಸ್‌ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಾನ್ ಕೋವಿಡ್ ಆಸ್ಪತ್ರೆಗಳಿಗೂ ಪಿಪಿಇ ಕಿಟ್ :ಶ್ರೀ ರಾಮುಲು

Sat May 9 , 2020
ನಾನ್ ಕೋವಿಡ್ ಆಸ್ಪತ್ರೆಗಳಿಗೂ ಪಿಪಿಇ ಕಿಟ್ ಗಳನ್ನು ಒದಗಿಸುತ್ತೇವೆ ಎಂದು ಸಚಿವ ಶ್ರೀ ರಾಮುಲು   ಹೇಳಿದ್ದಾರೆ. ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಗರ್ಭಿಣಿಯೊಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದ ಕಾರಣ ವಾಣಿವಿಲಾಸ ಆಸ್ಪತ್ರೆಯ ಸಿಬ್ಬಂದಿಯಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಅಲ್ಲಿ ಪಿಪಿಇ ಕಿಟ್ ಇರಲಿಲ್ಲ ಎಂಬುದು ಸತ್ಯ. ಇದರಿಂದಾಗಿ ಆತಂಕ ಮನೆಮಾಡಿತ್ತು. ಈಗ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿದ್ದೇವೆ. ಪಾಸಿಟಿವ್ ಬಂದ ಗರ್ಭಿಣಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಗಾಬರಿಯಾಗುವ […]

Advertisement

Wordpress Social Share Plugin powered by Ultimatelysocial