ಮಾಲೀಕನೊಂದಿಗೆ ಕುದುರೆಗೂ ಕ್ವಾರಂಟೈನ್​..!

ಶೋಪಿಯಾನ್ : ರೆಡ್​ ಝೋನ್​ನಿಂದ ಆಗಮಿಸಿದ್ದಕ್ಕಾಗಿ ಕುದುರೆ ಮತ್ತು ಅದರ ಮಾಲೀಕನನ್ನು ಅಧಿಕಾರಿಗಳು ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗಿರುವುದರಿಂದ ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ರಜೌರಿಯಿಂದ ಶೋಪಿಯಾನ್​ಗೆ ಆಗಮಿಸಿಸಿದ ಕುದುರೆ ಮತ್ತು ಅದರ ಮಾಲೀಕನನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.ಈ ಬಗ್ಗೆ ಮಾತನಾಡಿರುವ ತಹಶೀಲ್ದಾರ್ ​’ರಜೌರಿ ರೆಡ್​ ಝೋನ್ ಆಗಿದೆ. ಹೀಗಾಗಿ ಕುದುರೆ ಮತ್ತು ಅದರ ಮಾಲೀಕನನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಮಾಲೀಕನನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಿದ್ರೆ, ಮಾಲೀಕನ ಗಂಟಲು ದ್ರವ ಮಾದರಿಯ ವರದಿ ಬರುವವರೆಗೆ ಕುದುರೆಯನ್ನು ಹೋಂ ಕ್ವಾರಂಟೈನಲ್ಲಿ ಇರಿಸಲಾಗುವುದು ಎಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪಂಜಾಬ್ ನಲ್ಲಿ ಏರಿಕೆಯಾಗಲಿರುವ ತಾಪಮಾನ

Wed May 27 , 2020
ಪಂಜಾಬ್: ಲುದಿಯಾನದಲ್ಲಿ ಗರಿಷ್ಟ ತಾಪಮಾನ 44ಡಿಗ್ರಿ ಸೆಲ್ಷಿಯಸ್ ಗೆ ಏರಲಿದ್ದು,ಮುಂಬರುವ ದಿನಗಳಲ್ಲಿ ಮೋಡ ಕವಿದ ಆಕಾಶ ಮತ್ತು ಮಳೆಯಿಂದ ನಗರದಲ್ಲಿ, ತಾಪಮಾನ 29 ಡಗ್ರಿ ಸೆಲ್ಷಿಯಸ್ ಗೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಚಂಡೀಗಢದಲ್ಲಿ ಮಾತನಾಡಿದ ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ, ಸುರೇಂದ್ರ ಪೈ “ಮುಂದಿನ 3-4 ವಾರಗಳಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ತಾಪಮಾನ ಇನ್ನೂ ಹೆಚ್ಚಾಗಲಿದೆ” ಎಂದು ತಿಳಿಸಿದರು.   Please […]

Advertisement

Wordpress Social Share Plugin powered by Ultimatelysocial