ಮುತ್ತಪ್ಪ ರೈ ಸ್ಥಿತಿ ಗಂಭೀರ

ತೀವ್ರ ಅನಾರೋಗ್ಯ ಹಿನ್ನೆಲೆ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.ಎರಡು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿರುವ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ವಿಷಮಗೊಂಡಿದ್ದು, ಅವರನ್ನು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಜಯ ಕರ್ನಾಟಕ ಸಂಘಟನೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮುತ್ತಪ್ಪ ರೈ ಅವರಿಗೆ 2018ರಲ್ಲಿ ಕ್ಯಾನ್ಸರ್ ರೋಗ ದೃಢಪಟ್ಟಿತ್ತು ಎಂದು ಹೇಳಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊನೆಗೂ ರಿವೀಲ್ ಆಯಿತು ಯಶ್ ಮಗನ ಪೋಟೋ

Thu Apr 30 , 2020
ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿಯ ಪುತ್ರನ ಹೇಗಿದ್ದಾನೆಂಬ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಧಿಕಾ ಮತ್ತು ಯಶ್ ದಂಪತಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪುತ್ರನ ಫೋಟೋ ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.ನಿನ್ನೆಯೇ ರಾಧಿಕಾ ತಮ್ಮ ಪುತ್ರನ ಫೋಟೋ ರಿವೀಲ್ ಮಾಡುವುದಾಗಿ ಹೇಳಿದ್ದರು. ಅದರಂತೆ ಇಂದು ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮುದ್ದು ಮಗನ ಫೋಟೋ ಹಂಚಿಕೊಂಡಿದ್ದು ನಿಮ್ಮ ಆಶೀರ್ವಾದ, ಹಾರೈಕೆ ಈ ನಮ್ಮ ಮುದ್ದು […]

Advertisement

Wordpress Social Share Plugin powered by Ultimatelysocial