ಮೇ.೩ರ ಬಳಿಕ ಲಾಕ್‌ಡೌನ್ ವಿಸ್ತರಣೆ

ನವದೆಹಲಿ: ದೇಶದಲ್ಲಿ ಹೇರಲಾಗಿರುವ ೨ನೇ ಹಂತದ ಲಾಕ್‌ಡೌನ್ ಮೇ ೩ಕ್ಕೆ ಮುಕ್ತಾಯಗೊಳ್ಳಲಿದ್ದು, ತದನಂತರ ದೇಶದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸುವುದಾಗಿ ಕೇಂದ್ರ ಗೃಹ ಇಲಾಖೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ವಿವಿಧ ರಾಜ್ಯಗಳಲ್ಲಿರುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ತಮ್ಮ ತಮ್ಮ ಊರಿಗೆ ತೆರಳಲು ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಕೆಲವೊಂದು ರಾಜ್ಯಗಳಲ್ಲಿ ಕೋವಿಡ್-೧೯ ಪ್ರಕರಣಗಳು ತಗ್ಗದ ಕಾರಣ ಮೇ.೩ರ ಬಳಿಕವೂ ನಿರ್ಬಂಧ ವಿಸ್ತರಣೆಗೊಳ್ಳುವುದು ಬಹುತೇಕ ಖಚಿತ. ಇನ್ನು, ಕಡಿಮೆ ಪ್ರಕರಣಗಳಿರುವ ರಾಜ್ಯಗಳಲ್ಲಿ ಹೊಸ ಮಾರ್ಗಸೂಚಿ ಹಾಗೂ ಯಾವುದೇ ಪ್ರಕರಣಗಳಿಲ್ಲದ ಜಿಲ್ಲೆಗಳು ಲಾಕ್‌ಡೌನ್ ಮುಕ್ತವಾಗುವ ಸಾಧ್ಯತೆ ಇದೆ. ಲಾಕ್‌ಡೌನ್ ವೇಳೆ ಕೆಂಪು ವಲಯ, ಹಸಿರು ವಲಯ ಹಾಗೂ ಕಿತ್ತಾಳೆ ವಲಯಗಳೆಂದು ವಿಭಾಗಿಸಲಾಗಿದೆ. ಆರಂಭದಲ್ಲಿದ್ದ ೧೭೦ ಕೆಂಪು ವಲಯಗಳ ಸಂಖ್ಯೆ ಇದೀಗ ೧೨೯ಕ್ಕೆ ಇಳಿಕೆಯಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಯುಎಇಯಲ್ಲಿರುವ ಭಾರತೀಯರಿಗೆ ಗುಡ್ ನ್ಯೂಸ್

Thu Apr 30 , 2020
ದುಬೈ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಅರಬ್ ರಾಷ್ಟ್ರದಲ್ಲಿ ಸಿಲುಕಿಕೊಂಡು ಮರಳಿ ಭಾರತಕ್ಕೆ ಬರಲು ಬಯಸುವ ವಲಸಿಗರಿಗೆ ಯುಎಇಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸಿದೆ. ಕಳೆದ ಬುಧವಾರ ರಾತ್ರಿ, ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಡೇಟಾ ಸಂಗ್ರಹಣೆಯ ವಿವರಗಳನ್ನು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್ ಮೂಲಕ ಪ್ರಕಟಿಸಿದೆ ಎಂದು ಇಲ್ಲಿನ ಸುದ್ದಿ ಮಾಧ್ಯಮ ವರದಿ ಮಾಡಿದೆ. ಲಾಕ್‌ಡೌನ್‌ನಿಂದಾಗಿ ಅರಬ್ ರಾಷ್ಟ್ರಗಳಲ್ಲಿ ಲಾಕ್ ಆಗಿರುವವರ ವಿವರಗಳನ್ನು ವೆಬ್‌ಸೈಟ್ […]

Advertisement

Wordpress Social Share Plugin powered by Ultimatelysocial