ಬೀಜಿಂಗ್: ಎಲಿವೇಟರ್ನಲ್ಲಿ ಮಗುವೊಂದು ಅಪಾಯಕ್ಕೆ ಸಿಲುಕಿದ ಘಟನೆ ಹುಬೇ ಪ್ರಾಂತ್ಯದ ದಯೆ ಎಂಬಲ್ಲಿ ನಡೆದಿದೆ. ಈ ಹೃದಯವಿದ್ರಾವಕ ಘಟನೆಯು ಸಿಸಿ ಟಿವಿ ವಿಡಿಯೋವನ್ನು ಅಲ್ಲಿನ ಸುದ್ದಿ ಸಂಸ್ಥೆ ಪೀಪಲ್ಸ್ ಡೇಲಿ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದೆ. 2 ವರ್ಷದ ಹೆಣ್ಣು ಮಗು ಏಕಾಂಗಿಯಾಗಿ ಎಲಿವೇಟರ್(ಲಿಫ್ಟ್) ನೊಳಗೆ ನಡೆದು ಬರುತ್ತದೆ. ಎಲಿವೇಟರ್ ನ ಬಾಗಿಲ ಮೇಲೆ ಇರುವ ಸುರಕ್ಷಾ ಹಗ್ಗವು ಇದ್ದಕ್ಕಿದ್ದಂತೆ ಬಾಲಕಿಯ ಕೈಯ್ಯನ್ನು ಎಳೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಬಾಲಕಿಯನ್ನು ಬಾಗಿಲ ಮೇಲೆವರೆಗೂ ಎಳೆದು ಸುಮಾರು ಎರಡು ನಿಮಿಷ ಹಿಡಿದುಕೊಳ್ಳುತ್ತದೆ. ನಂತರ ಬಾಲಕಿಯ ಅಸಮರ್ಪಕ ಚಲನೆ ಗ್ರಹಿಸಿದ ಎಲಿವೇಟರ್ ತನ್ನಿಂದತಾನೆ ಸ್ಥಗಿತವಾಗಿ, ಲಿಫ್ಟ್ ಕೆಳಗಿಳಿಯಲು ಪ್ರಾರಂಭಿಸಿದ್ದರಿಂದ ಬಾಲಕಿ ಬಚಾವಾಗುತ್ತಾಳೆ. ಆಕೆಗೆ ಯಾವುದೇ ಗಾಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೈ ನಡುಗಿಸುತ್ತೇ ಈ ಪುಟ್ಟ ಬಾಲಕಿಯ ಕೆಲಸ

Please follow and like us: