ರಶ್ಮಿಕಾ ಬ್ಯಾನ್ ಮಾಡಿದ್ರೆ ಇಂಡಸ್ಟ್ರಿಗೆ ನಷ್ಟ – ನಿರ್ದೇಶಕ ನಾಗಶೇಖರ್ ಹೇಳಿಕೆ

ನ್ಯಾಷನಲ್ ಕ್ರಷ್ ರಶಿಮಕಾ ಮಂದಣ್ಣ ಏನೇ ಮಾಡಿದ್ರೂ ಸುದ್ದಿಯಾಗುತ್ತೆ. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುವ ರಶ್ಮಿಕಾಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಕೂಡ ಇದೆ. ರಶ್ಮಿಕಾ ಏನಾದ್ರೂ ಪೋಸ್ಟ್ಗಳನ್ನ ಶೇರ್ ಮಾಡಿದ್ರೆ ಅದಕ್ಕೆ ಕಮೇಂಟ್ಗಳ ಸುರಿಮಳೆಗೈತಾರೆ. ಅದರಲ್ಲಿ ನೆಗೆಟಿವ್ ಆಂಡ್ ಪಾಸಿಟಿವ್ ಎರಡೂ ಕಮೇಂಟ್ಗಳು ಇರುತ್ತೆ.

ಪ್ರಮುಖವಾಗಿ ರಶ್ಮಿಕಾ ಮೇಲೆ ಯಾವಗಲೂ ಅಭಿಮಾನಿಗಳು ಮಾಡುವ ಒಂದು ಆರೋಪ ಅಂದ್ರೆ ರಶ್ಮಿಕಾ ಅವರಿಗೆ ತುಂಬಾನೇ ಕೊಬ್ಬು. ನಮ್ಮ ಕನ್ನಡದ ಹುಡುಗಿ ಆಗಿದ್ರೂ ಅವರಿಗೆ ಕನ್ನಡದ ಮೇಲೆ ಗೌರವ ಇಲ್ಲ. ಕನ್ನಡ ಮಾತನಾಡಲ್ಲ ರಶ್ಮಿಕಾ .ಪರಭಾಷೆಗಳನ್ನ ಚೆನ್ನಾಗಿ ಮಾತನಾಡುತ್ತಾರೆ. ತಾವು ಅಂಬೆಗಾಲಿಟ್ಟು ನಟನೆ ಕಲಿತ ಕನ್ನಡ ಇಂಡಸ್ಟರಿಯನ್ನೇ ರಶ್ಮಿಕಾ ಕಡೆಗಣಿಸುತ್ತಾರೆ. ಹೀಗಿರುವಾಗ ರಶ್ಮಿಕಾರಿಗೆ ಕನ್ನಡದಲ್ಲಿ ಅವಕಾಶ ಕೊಡಬಾರದು ಅವರನ್ನ ಕನ್ನಡದಿಂದ ಬ್ಯಾನ್ ಮಾಡಬೇಕು ಅನ್ನೋದು ಸಿನಿಪ್ರೇಕ್ಷಕರ ಅಭಿಪ್ರಾಯ ಹಾಗೂ ಒತ್ತಾಯ.

ಾದ್ರೆ ಇತ್ತೀಚಿನ ದಿಗಳಲ್ಲಿ ಈ ಒತ್ತಾಯ ಜೋರಾಗಿ ಕೇಳಿಬರ್ತಿದೆ. ಕಾರಣ ಅಂದ್ರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುವಾಗ ರಶ್ಮಿಕಾ ತಾಮಗೆ ಚಾನ್ಸ್ ಕೊಟ್ಟ ಮೊದಲ ನಿರ್ಮಾಣ ಸಂಸ್ಥೆ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದರು. ಕೈಯ್ಯಲ್ಲಿ ಒಂದು ಸಿಗ್ನಲ್ ಮಾಡುತ್ತಾ ಆ ಸಸ್ತೇಯಿಂದ ನನಗೆ ಮೊದಲು ಆಫರ್ ಬಂದಿತದತು ಎಂದು ಹೇಳಿದ್ದರು. ಅದರರ್ಥ “ಸೋ ಕಾಲ್ಡ್ ಸಂಸ್ಥೆ” ಎಂದು. ಆ ನಿರ್ಮಾಣ ಸಂಸ್ಥೆಯ ಹೆಸರನ್ನೂ ಹೇಳದೆ ಸಿಗ್ನಲ್ ಬಳಸಿ ಬೆಳೆದುಬಂದ ಮಾತೃ ಸಂಸ್ಥೆಗೆ ಅವಮಾಣ ಮಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಿರ್ಧೇಶಕ ನಾಗಶೇಖರ್ ಮಾತನಾಡಿದ್ದು, ಅವಕಾಶ ಕೊಟ್ಟವರನ್ನ ಮರೆಯಬಾರದು ಅಂತ ನಾವು ನಿರೀಕ್ಷೇ ಮಾಡೋದು ತಪ್ಪು. ಒಂದು ವೇಳೆ ಆ ರೀತಿ ಬ್ಯಾನ್ ಮಾಡಿದರೆ ಅದರಿಂದ ಚಿತ್ರರಂಗಕ್ಕೆ ನಷ್ಟ. ಒಬ್ಬ ಒಳ್ಳೆ ಕಲಾವಿದರನ್ನು ಬ್ಯಾನ್ ಮಾಡುವುದು ಸರಿಯಲ್ಲ. ಅದಕ್ಕೆ ಕಾರಣ ಏನೋ ನನಗೆ ಗೊತ್ತಿಲ್ಲ. ಯಾರೇ ಮಾಡಿದರೂ ನಷ್ಟ ಅಲ್ಲವೇ. ಉದಾಹರಣೆಗೆ ನಾನು ಕನ್ನಡದಲ್ಲಿ ಒಂದು ಸಿನಿಮಾ ಕೈಗೆತ್ತಿಕೊಳ್ಳುತ್ತೀನಿ. ರಶ್ಮಿಕಾ ಮಂದಣ್ಣ ರೀತಿ ನಟಿ ಬೇಕು ಎಂದುಕೊಳ್ಳುತ್ತೇನೆ. ನೀವು ಆಕೆಯನ್ನು ಬ್ಯಾನ್ ಮಾಡಿದರೆ ಫಿಲ್ಮ್ ಮೇಕರ್ ಕ್ರಿಯೇಟಿವಿಟಿಗೆ ತೊಂದರೆ ಆಗುತ್ತದೆ.” ಎಂದು ನಾಗಶೇಖರ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Please follow and like us:

Leave a Reply

Your email address will not be published. Required fields are marked *

Next Post

ರಿಷಬ್ ಶೆಟ್ಟಿ ಮುಂದಿನ ಸಿನಿಮಾ ರೆಡಿ – ಕಾಂತಾರ ಮುನ್ನವೇ ರೆಡಿಯಾಗಿದ್ದ ಚಿತ್ರ

Mon Dec 5 , 2022
ರಿಷಬ್‌ ಶೆಟ್ಟಿ ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಾಯಕನಟ. ಅವರ ನಿರ್ದೇಶನ ಹಾಗೂ ನಟನೆಯ ಸಿನಿಮಾಗಳೇ ಡಿಫರೆಂಟ್‌ ಆಗಿರುತ್ತೆ. ರಿಷಬ್‌ ಸಿನಿಮಾ ಬರ್ತಾ ಇದೆ ಅಂದ್ರೆ ವೀಕ್ಷಕರು ಕ್ಯೂರಿಯಸ್‌ ಆಗಿ ಕಾಯ್ತಿರ್ತಾರೆ. ಕಾಂತಾರ ಬಂದ್ಮೇಲಂತೂ ರಿಷಬ್‌ ಶೆಟ್ಟಿ ಫ್ಯಾನ್ಸ್‌ ಇಡೀ ವಿಶ್ವದಾದ್ಯಂತ ಹುಟ್ಟಿಕೊಂಡಿದ್ದಾರೆ. ರಿಷಬ್‌ ಮುಂದಿನ ಸಿನಿಮಾ ಯಾವುದಿರುತ್ತೆ? ಕಾಂತಾರ -2 ಮಾಡ್ತಾರಾ? ಅನ್ನೋ ಪ್ರಶ್ನೆ ವೀಕ್ಷಕರಲ್ಲಿ ಇರೋವಾಘಲೇ ಶೆಟ್ರ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯದಲ್ಲಿಯೇ ರಿಷಬ್‌ […]

Advertisement

Wordpress Social Share Plugin powered by Ultimatelysocial