ಬೆಂಗಳೂರು: ಲಾಕ್ ಡೌನ್ ಮುಕ್ತಾಯದ ನಂತರ ಸರ್ಕಾರಿ ಸ್ವಾಮ್ಯದ ಬಸ್ ಸಂಚಾರ ಆರಂಭವಾಗಿದೆ. ಈ ನಡುವೆ ಇಂದು ರಾಜ್ಯ ಖಾಸಗಿ ಬಸ್ ಗಳ ಮಾಲೀಕರ ನಿಯೋಗವು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಲವು ವಿಷಯಗಳನ್ನು ಚರ್ಚಿಸಿತು. ಮುಖ್ಯವಾಗಿ ಲಾಕ್ ಡೌನ್ ನಿಂದಾಗಿ ಭಾರಿ ನಷ್ಟ ಉಂಟಾಗಿದೆ. ಖಾಸಗಿ ಬಸ್ ಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಮೊದಲ ಆರು ತಿಂಗಳು ಸಂಪೂರ್ಣ ರಸ್ತೆ ತೆರಿಗೆ ವಿನಾಯ್ತಿ ಹಾಗೂ ಮುಂದಿನ ಆರು ತಿಂಗಳು ರಸ್ತೆ ತೆರಿಗೆಯಲ್ಲಿ ಶೇ.50 ರಷ್ಟು ವಿನಾಯಿತಿ ನೀಡುವಂತೆ ಕೋರಿದ್ದಾರೆ. ರಸ್ತೆ ತೆರಿಗೆಯಲ್ಲಿ ವಿನಾಯಿತಿ ಕೊಟ್ಟರೆ ಮಾತ್ರ ಬಸ್ ಗಳನ್ನು ರಸ್ತೆಗೆ ಇಳಿಸಲು ಸಾಧ್ಯ, ತೆರಿಗೆ ವಿನಾಯಿತಿ ಕೊಡದಿದ್ರೆ ಬಸ್ ಓಡಿಸೋಕ್ಕೆ ಕಷ್ಟ ಎಂದು ಕೋರಿದ್ದಾರೆ. ಮನವಿ ಸ್ವೀಕರಿಸಿದ ಸಿಎಂ ತೆರಿಗೆ ವಿನಾಯತಿ ಬಗ್ಗೆ ಪರಿಶೀಲನೆ ಮಾಡಿ ತಿಳಿಸುವುದಾಗಿ ಭರವಸೆ ನೀಡಿದ್ದಾರೆ.
ರಸ್ತೆ ತೆರಿಗೆ ವಿನಾಯಿತಿ ಕೋರಿದ ಬಸ್ ಮಾಲೀಕರು

Please follow and like us: