ವಿಚ್ಛೇದಿತ ಪೋಷಕರು ವಿಡಿಯೋ ಕಾಲ್ನಿಂದ ಮಕ್ಕಳ ಸಂಪರ್ಕ

ನವದೆಹಲಿ: ವಿಚ್ಛೇದನಗೊಂಡು ಬೇರೆಯಾಗಿರುವ ಪೋಷಕರು ಲಾಕ್‌ಡೌನ್ ವೇಳೆಯಲ್ಲಿ ತಮ್ಮ ಮಕ್ಕಳನ್ನು ನೋಡಲು ಸಾಧ್ಯವಾಗಿತ್ತಿಲ್ಲ ಎಂದು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾಲ್ ಮೂಲಕ ಪೋಷಕರು ತಮ್ಮ ಮಕ್ಕಳನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತಮಗೆ ಮಕ್ಕಳನ್ನು ನೋಡುವ ಹಕ್ಕಿದ್ದರೂ ಲಾಕ್‌ಡೌನ್‌ನಿಂದ ಸಾಧ್ಯವಾಗುತ್ತಿಲ್ಲ ಅಂತ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಕೆಯಾಗಿದ್ದವು. ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಕಿಶನ್‌ಕೌಲ್ ಹಾಗೂ ಬಿ.ಆರ್. ಗವಾಯ್ ಅವರನ್ನೊಳಗೊಂಡ ಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿತು. ಮಕ್ಕಳನ್ನು ಸಂಪರ್ಕಿಸಲು ಅನುಮತಿ ಇರುವ ಪೋಷಕರು ವಿಡಿಯೋ ಕಾಲ್ ಮೂಲಕ ಸಂಪರ್ಕ ಮಾಡಬಹುದು. ಎಲೆಕ್ಟಾçನಿಕ್ ಮಾಧ್ಯಮದ ಮೂಲಕ ಸಂಪರ್ಕಿಸಲು ಏನಾದ್ರೂ ಸಮಸ್ಯೆ ಇದ್ದರೆ ಪೋಷಕರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪೀಠ ಹೇಳಿತು.

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸ್ ಇಲಾಖೆ ಬಳಸಿಕೊಂಡು ತುಮಕೂರಿಗೆ ನೀರು ಬಿಡುತ್ತಿದ್ದಾರೆ:ಹೆಚ್.ಡಿ. ರೇವಣ್ಣ

Fri May 1 , 2020
ಹಾಸನ: ಪೊಲೀಸ್ ಇಲಾಖೆ ಬಳಸಿಕೊಂಡು ತುಮಕೂರಿಗೆ ನೀರು ಬಿಡುತ್ತಿದ್ದಾರೆ. ಆದರೆ ಮಂಡ್ಯ, ಹಾಸನ ಜಿಲ್ಲೆಗಳಿಗೆ ನೀರು ಬಿಡುತ್ತಿಲ್ಲ. ಬಿಡುವುದಾದರೆ ಮೂರು ಜಿಲ್ಲೆಗೂ ನೀರು ಬಿಡಲಿ. ಹಾಸನದಲ್ಲಿ ಕುಡಿಯೋಕೆ ನೀರಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಹಾಸನದಲ್ಲಿ ಮಾತನಾಡಿದ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ರನ್ನು ಇಟ್ಟುಕೊಂಡು ತುಮಕೂರಿಗೆ ನೀರು ಹರಿಸುತ್ತಿದ್ದಾರೆ. ಪೊಲೀಸ್ ರನ್ನು ಬಳಸಿಕೊಂಡು ಎಷ್ಟು ದಿನ ಹೀಗೆ ಮಾಡ್ತೀರಿ. ಏನಾದರು ಹೆಚ್ಚುಕಮ್ಮಿಯಾದರೆ […]

Advertisement

Wordpress Social Share Plugin powered by Ultimatelysocial