ಒಂಟಾರಿಯೋ: ಆರು ವರ್ಷದ ನಾಯಿ ಫಿನ್ಲೆ 6 ಟೆನ್ನಿಸ್ ಬಾಲ್ ಗಳನ್ನು ಒಮ್ಮೆಲೇ ಬಾಯಲ್ಲಿ ಕಚ್ಚಿ ಹಿಡಿಯುವ ಮೂಲಕ ಹೊಸ ವಿಶ್ವ ದಾಖಲೆ ಮಾಡಿದೆ. ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿ ಫಿನ್ಲೆ ಎರಡು ವರ್ಷ ಇದ್ದಾಗಿನಿಂದಲೂ ಟೆನ್ನಿಸ್ ಬಾಲ್ ಕಚ್ಚಿ ಹಿಡಿಯುವುದನ್ನು ಕಲಿತಿತ್ತು ಎಂದು ಅದರ ಯಜಮಾನ ಐರಿನ್ ಮೊಲ್ಲೊಯ್ ತಿಳಿಸಿದ್ದಾರೆ. ಫಿನ್ಲೆ ಈ ಹಿಂದೆ ಐದು ಬಾಲ್ ಗಳನ್ನು ಒಮ್ಮೆಲೇ ಕಚ್ಚಿಕೊಂಡು ದಾಖಲೆ ಮಾಡಿತ್ತು. ಈಗ ತನ್ನದೆ ದಾಖಲೆಯನ್ನು ಮುರಿದಿದೆ. ನಾಯಿ ಚಿಕ್ಕ ಇದ್ದಾಗ ನಾಲ್ಕು ಬಾಲ್ ಗಳನ್ನು ಒಮ್ಮೆಲೇ ಕಚ್ಚಿಕೊಂಡು ಓಡಿ ಬರುತ್ತಿದ್ದ ಸನ್ನಿವೇಶವನ್ನು ಐರಿನ್ ಪಾಲಕರಾದ ಚೆರ್ರಿ ಮತ್ತು ರೋಬ್ ನೆನಪಿಸಿಕೊಳ್ಳುತ್ತಾರೆ. ನಾಯಿ ನಮಗೆ ಖುಷಿ ನೀಡುವುದು ಸಾಮಾನ್ಯ. ಈ ನಾಯಿ ಇಡೀ ಜಗತ್ತಿಗೇ ಖುಷಿ ನೀಡುತ್ತದೆ ಎಂದು ಚೆರ್ರಿ ಮೊಲ್ಲೊಯ್ ಹೇಳಿದ್ದಾರೆ. ನಾಯಿ ಮೊದಲ ನಾಲ್ಕು ಬಾಲ್ ಗಳನ್ನು ಸುಲಭವಾಗಿ ಎತ್ತಿಕೊಳ್ಳುತ್ತದೆ. ನಂತರ ಇನ್ನೆರಡನ್ನು ನಿಧಾನವಾಗಿ ಬಾಯಲ್ಲಿ ತುರುಕಿಕೊಳ್ಳುತ್ತದೆ.
ವಿಶ್ವದಾಖಲೆ ಮಾಡಿದ ಶ್ವಾನ..

Please follow and like us: