ಬೇಕಾಗುವ ಪದಾರ್ಥಗಳು
ಅಕ್ಕಿ-250 ಗ್ರಾಂ
ಮೂಲಂಗಿ- 2
ತೆಂಗಿನಕಾಯಿ ತುರಿ- ಒಂದು ಸಣ್ಣ ಬಟ್ಟಲು
ಹಸಿಮೆಣಸಿನ ಕಾಯಿ- 2-3
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ಜೀರಿಗೆ-ಅರ್ಧ ಚಮಚ
ಮಾಡುವ ವಿಧಾನ…
ಅಕ್ಕಿಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನೆಯಲು ಬಿಡಬೇಕು. ನಂತರ ಮೂಲಂಗಿಯನ್ನು ಚೆನ್ನಾಗಿ ತೊಳೆದು ಕೊಬ್ಬರಿ ತುರಿಯುವ ಮಣೆಯಲ್ಲಿ ತುರಿದುಕೊಳ್ಳಬೇಕು.
ಅಕ್ಕಿ ನೆಂದ ಬಳಿಕ ನೀರನ್ನು ಬಸಿದು, ಇದರ ಜೊತೆಗೆ ಹಸಿಮೆಣಸಿನ ಕಾಯಿ, ತುರಿದುಕೊಂಡ ಮೂಲಂಗಿ ಹಾಗೂ ತೆಂಗಿನ ತುರಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಉಪ್ಪು, ಜೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ತಟ್ಟೆ ಮುಚ್ಚಿ ಇಡಬೇಕು.
ನಂತರ ಕಾವಲಿಯನ್ನು ಒಲೆಯ ಮೇಲಿಟ್ಟು, ಕಾವಲಿ ಕಾದ ನಂತರ ಎಣ್ಣೆ ಸವರಿ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಬೇಯಿಸಿದರೆ, ರುಚಿಕರವಾದ ಹಾಗೂ ಆರೋಗ್ಯಕರವಾದ ಮೂಲಂಗಿ ದೋಸೆ ಸವಿಯಲು ಸಿದ್ಧ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada