ಸಸ್ಪೆನ್ಸ್, ಥ್ರಿಲ್ಲರ್ ಆಧಾರಿತ ಬೈ ೧ ಗೆಟ್ ೧ ಫ್ರೀ

ಅವಳ-ಜವಳಿ ಅಂದ್ರೆನೆ ಫುಲ್ ಕನ್‌ಪ್ಯೂಶನ್ ನೊಡೋಕೆ ಇಬ್ರು ಒಂದೇ ತರಾನೇ ರ‍್ತಾರೆ. ಅಂತಹ ಒಂದು ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗ್ತಿದೆ. ಅವಳಿ-ಜವಳಿ ಮಕ್ಕಳು ಬದುಕಿನಲ್ಲಿ ಎದುರಿಸುವ ಬವಣೆಯ ನೈಜ ಕಥೆ ಹೊಂದಿರುವ ಚಿತ್ರ ಬೈ ೧ ಗೆಟ್ ೧ ಫ್ರೀ. ಇದು ಸಸ್ಪೆನ್ಸ್ ಮತ್ತು ಥ್ರೀಲರ್ ಆಧಾರಿತ ಸಿನಿಮಾ.  ಮೈಸೂರಿನ ಅವಳಿ-ಜವಳಿಗಳಾದ ಮಧು ಮಿಥುನ್ ಮತ್ತು ಮನು ಮಿಲನ್ ಈ ಚಿತ್ರದ ನಾಯಕರು. ನಟ ಕಿಶೋರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಯಕಿಯಾಗಿ ರಿಷಿತಾ ಮಲ್ನಾಡ್ ಮತ್ತು ಕಿಶೋರ್‌ಗೆ ಜೋಡಿಯಾಗಿ ರೋಹಿಣಿ ತೆಲ್ಕರ್ ನಟಿಸಿದ್ದಾರೆ.  ಹರೀಶ್ ಅನಿಲ್ಗೋಡ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತ್ರಿಭುವನ್ ಶ್ರೀಕಾಂತ್ ಸಂಭಾಷಣೆ, ಸುರೇಶ್ ಆರ್ಮುಗಂ ಸಂಕಲನ ಚಿತ್ರಕ್ಕಿದ್ದು, ಉಷಾ ಭಂಡಾರಿ, ವಿಶಾಲ್ ಹೆಗ್ಡೆ, ಮಂಜುನಾಥ್, ಗೌರೀಶ್ ಅಕ್ಕಿ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು, ಜುಲೈನಲ್ಲಿ ಚಿತ್ರ ತೆರೆಗೆ ಬರಲು ಸಿದ್ಧತೆ ನಡಿಸ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಮೈಸೂರನ್ನು ಕೊರೊನಾ ಮುಕ್ತ ಮಾಡುವುದು ನಮ್ಮ ಗುರಿ :ಎಸ್ ಟಿ ಸೋಮಶೇಖರ್

Wed Apr 29 , 2020
ಮೈಸೂರು ಹಾಗೂ ನಂಜನಗೂಡನ್ನು ಕೊರೊನಾ ಮುಕ್ತ ಮಾಡುವುದು ನಮ್ಮ ಗುರಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿ ಅತ್ಯುತ್ತಮ ರೀತಿ ಕಾರ್ಯನಿರ್ವಹಿಸಿದ್ದಾರೆ. ಅಧಿಕಾರಿ ವರ್ಗದವರ ಸೇವೆಯೂ ಗಣನೀಯ. ನಂಜನಗೂಡು ಜನತೆ ಯಾವುದೇ ಕಾರಣಕ್ಕೂ ಭಯ ಬೀಳುವುದು ಬೇಡ. ನಾನು ಈ ಹಿಂದೆಯೇ […]

Advertisement

Wordpress Social Share Plugin powered by Ultimatelysocial