ಮೂಲತಃ ಮೈಸೂರು ನಗರದ ಬಿ.ಇ ಎಂಜಿನಿಯರಿಂಗ್ ಪದವೀಧರನಾದ ಕೃಷ್ಣ ಶ್ರವಣ ಕುಮಾರ್ ಅವರು ಖಾಸಗಿ ಕಂಪನಿಯೊಂರಲ್ಲಿ ಕರ್ಯ ನರ್ವಹಿತ್ತಿದ್ದರು. ಹೀಗೆ ಜೀವನ ನಡೆಯುವ ಮಧ್ಯೆ, ತನ್ನ ತಾಯಿ ೭೦ ರ್ಷದ ಚೂಡಾರತ್ನರ ಆಸೆ ಈಡೇರಿಸಲು ಕೆಲಸದಿಂದ ಸ್ವಯಂ ನಿವೃತ್ತಿ ಹೊಂದಿದರು. ತಂದೆಯ ಹಳೆಯ ಬಜಾಜ್ ಸ್ಕೂರ್ನಲ್ಲಿ ಎರಡು ರ್ಷಗಳ ಹಿಂದೆ ಅಂದರೆ ಜನವರಿ ೧೪, ೨೦೧೮ ರಂದು ಮೈಸೂರಿನಿಂದ ಆರಂಭಗೊಂಡ ತರ್ಥಯಾತ್ರೆ. ಬರೋಬ್ಬರಿ ೫೬ ಸಾವಿರ ಕಿ.ಮೀ ತಾಯಿ ಜೊತೆ ಪ್ರಯಾಣಿಸಿ ಈಗ ಹಿಂದಿರುಗಿದ್ದಾರೆ.
ಸ್ಕೂರ್ನಲ್ಲೇ ಉತ್ತರ ಭಾರತದ ಕೈಲಾಸ ರ್ವತ, ನೇಪಾಳ, ಟಿಬೆಟ್ ಸೇರಿದಂತೆ ಹಲವಾರು ಪುಣ್ಯಕ್ಷೇತ್ರಗಳಲ್ಲಿ ದೇವರ ರ್ಶನ ಪಡೆದು, ಶನಿವಾರ ಸಂಜೆ ಗಡಿಭಾಗದಲ್ಲಿನ ಮಧುಗಿರಿ ತಾಲೂಕು ಮುದ್ದೇನಹಳ್ಳಿ ಸೀಮಾಂಧ್ರ ಗಡಿ ಚೆಕ್ಪೋಸ್ಟ್ ಮೂಲಕ ರಾಜ್ಯಕ್ಕೆ ಹಿಂದಿರುಗಿದ್ದಾನೆ. ಇವರನ್ನು ಚೆಕ್ಪೋಸ್ಟ್ ಸಿಬ್ಬಂದಿಗಳು ಕೊರೊನಾ ತಪಾಸಣೆ ನಡೆಸಿ ನಂತರ ರಾಜ್ಯ ಪ್ರವೇಶ ಮಾಡಲು ಅನುಮತಿ ನೀಡಿದ್ದಾರೆ. ತಾಯಿಯ ಆಸೆ ಪೂರೈಸಿದ ಕರುನಾಡ ಪುತ್ರನನ್ನು ಗಡಿಭಾಗದ ಜನತೆ ಆರತಿ ಮತ್ತು ಹೂವಿನ ಸುರಿಮಳೆಗರೆಯುವ ಮೂಲಕ ಸ್ವಾಗತಿಸಿದ್ದಾರೆ.
ಸ್ಕೂಟರ್ನಲ್ಲೇ ೫೬,೦೦೦ ಕಿ.ಮೀ ಪಯಣ

Please follow and like us: